ಬೆಂಗ್ಳೂರು ಟೊಯೊಟಾ ಡೀಲರುಗಳಿಂದ ಎಟಿಯೊಸ್ ರೇಸ್
ಎಟಿಯೋಸ್ ಮೋಟರ್ ರೇಸಿಂಗ್(ಇಎಂಆರ್) ಜಾಗತಿಕ ಕಾರ್ಯಕ್ರಮಕ್ಕೆ ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ಕಂಪನಿಯು ವಾಕುಡೊಕಿ ಎಂದು ಹೆಸರಿಟ್ಟಿದೆ. ಜಪಾನಿನಲ್ಲಿ ವಾಕುಡೊಕಿ ಅಂದ್ರೆ ಸಂತೋಷ, ಸಂಭ್ರಮವೆಂದು ಅರ್ಥ.
ಕಂಪನಿಯು ಈ ವರ್ಷದ ಆರಂಭದಲ್ಲೇ ದೆಹಲಿ ವಾಹನ ಪ್ರದರ್ಶನದಲ್ಲಿ ಎಟಿಯೊಸ್ ಸ್ಪೋರ್ಟಿ ಕಾನ್ಸೆಪ್ಟನ್ನು ಪ್ರದರ್ಶಿಸಿತ್ತು. ಇದೀಗ ತನ್ನ ಡೀಲರ್ಷಿಪ್ ಮಳಿಗೆಗಳಲ್ಲಿ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಲು ಆರಂಭಿಸಿದೆ. ದೇಶದ ಯುವಕರ ಗಮನ ಸೆಳೆಯಲು ದೇಶದಲ್ಲಿ ಮೋಟರ್ ಸ್ಪೋರ್ಟ್ ಚಟುವಟಿಕೆಗಳನ್ನು ಮಾಡುವ ಯೋಜನೆಯೂ ಕಂಪನಿಗಿದೆ.
ಈಗ ಕಂಪನಿಯ ಈ ಎರಡು ಡೀಲರ್‌ಷಿಪ್ ಮಳಿಗೆಗಳಲ್ಲಿ ರೇಸಿಂಗ್ ಅನುಭವ ನೀಡುವ ಕಾನ್ಸೆಪ್ಟ್ ಗಳು, ರೇಸ್ ಟ್ರಾಕ್ ನಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಚಲಿಸುವ ಕಾರುಗಳು, ವಾಹನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ವಿಭಾಗ ಇತ್ಯಾದಿ ಆಕರ್ಷಣೆಗಳು ಇರಲಿವೆ.
ಡೀಲರ್ಷಿಪ್ ಮಳಿಗೆಗಳಲ್ಲಿನ ಚಟುವಟಿಕೆಗಳು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ರೇಸ್, ರೋಡ್ ಶೋ ಇತ್ಯಾದಿಗಳನ್ನು ಆಯೋಜಿಸುವ ಯೋಜನೆಯೂ ಇರುವುದಾಗಿ ಟೊಯೊಟಾ ಕಿರ್ಲೊಸ್ಕರ್ ಮೋಟರ್ ತಿಳಿಸಿದೆ.


Click it and Unblock the Notifications









