ವಾಹನಗಳಿಗೆ ಬೂಸ್ಟ್ ಕುಡಿಸುವುದೇ ವಾಹನ ಮಂಡಳಿ

National Automotive Board To Boost Sector Soon
ಇತ್ತೀಚಿನ ವರ್ಷಗಳಲ್ಲಿ ದೇಶದ ವಾಹನೋದ್ಯಮ ಅತ್ಯುತ್ತಮವಾಗಿ ಪ್ರಗತಿ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ವಾಹನೋದ್ಯಮದ ಅಭಿವೃದ್ಧಿಗೆ ಸಹಕರಿಸುವ ರಾಷ್ಟ್ರೀಯ ವಾಹನ ಮಂಡಳಿ ಸ್ಥಾಪಿಸಲು ಕೇಂದ್ರ ಸರಕಾರ ಯೋಜಿಸಿದೆ. ಇದು ಸರಕಾರ ಮತ್ತು ವಾಹನೋದ್ಯಮದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.

"ರಾಷ್ಟ್ರೀಐ ವಾಹನ ಮಂಡಳಿ(ಎನ್ಎಬಿ) ಸ್ಥಾಪಿಸುವ ಪ್ರಸ್ತಾಪವನ್ನು ಭಾರಿ ಉದ್ಯಮ ವಿಭಾಗವು ಅಂತಿಮಗೊಳಿಸಿದೆ. ಇನ್ನೊಂದು ತಿಂಗಳಲ್ಲಿ ಇದು ಸಂಸತ್ತಿನಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ" ಎಂದು ನ್ಯಾಷನಲ್ ಆಟೋಮೊಟಿವ್ ಬೋರ್ಡ್ ಕುರಿತು ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರಕಾರಕ್ಕೆ ವಾಹನೋದ್ಯಮದ ಮಧ್ಯಸ್ಥನಾಗಿ ಎನ್ಎಬಿ ಕಾರ್ಯನಿರ್ವಹಿಸಲಿದೆ. ಅಂದರೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು ನೀತಿನಿಯಮಗಳನ್ನು ಜಾರಿಗೆ ತರುವಲ್ಲಿ ಇದು ಸರಕಾರಕ್ಕೆ ನೆರವಾಗಲಿದೆ.

ವಾಹನ ಮಂಡಳಿಯಲ್ಲಿ ಭಾರಿ ಉದ್ಯಮಗಳ, ಯೋಜನಾ ಆಯೋಗದ ಮತ್ತು ವಿವಿಧ ಸಚಿವಾಲಯದ ಸದಸ್ಯರು ಇರಲಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಚಿವಾಲಯದ ಸದಸ್ಯರೂ ಇರಲಿದ್ದಾರೆ. ವಿಶೇಷವೆಂದರೆ ಇದರಲ್ಲಿ ಕೆಲವು ವಿಜ್ಞಾನಿಗಳೂ ಇರಲಿದ್ದಾರಂತೆ.

ನ್ಯಾಷನಲ್ ಆಟೋಮೊಟಿವ್ ಟೆಸ್ಟಿಂಗ್ ಆಂಡ್ ಆರ್ ಆಂಡ್ ಡಿ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್(ಎನ್ಎಟಿಆರ್ಐಪಿ) ಸ್ಥಾನಕ್ಕೆ ಬದಲಿಯಾಗಿ ರಾಷ್ಟ್ರೀಯ ವಾಹನ ಮಂಡಳಿ ಸೇರ್ಪಡೆಯಾಗಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Tuesday, February 21, 2012, 11:04 [IST]
English summary
The Indian government is planning to set up the National Automotive Board that will oversee the sustained development of the auto industry in the country. The new body is expected to be set up this April. The board will act as a facilitator between the government and the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+