ರೋಬಾಟ್ ಕಾರುಗಳಿಗೆ ಅಸ್ತು ಅಂದ ಮೊದಲ ರಾಜ್ಯ
ಸ್ವಯಂಚಾಲಿತ ಅಥವಾ ರೋಬಾಟ್ ವಾಹನಗಳನ್ನು ಚಲಾಯಿಸಲು ಕಾನೂನು ತೊಡಕುಗಳಿವೆ. ಹೆಚ್ಚಿನ ದೇಶಗಳು ಸುರಕ್ಷತೆಯ ದೃಷ್ಟಿಯಿಂದ ಇಂತಹ ವಾಹನಗಳ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ. ಆದರೆ ಅಮೆರಿಕದ ನೆವಾಡ ಸರಕಾರ ರೊಬಾಟ್ ವಾಹನಸ್ನೇಹಿಯಾಗಲು ನಿರ್ಧರಿಸಿದೆ.
ಸ್ವಯಂಚಾಲಿತ ವಾಹನಗಳಿಗೆ ಪರೀಕ್ಷಾತ್ಮಕ ಚಾಲನೆಗಿದ್ದ ತೊಡಕುಗಳನ್ನು ನೆವಾಡ ಸರಕಾರ ನಿವಾರಿಸಿದೆ. ಇದರೊಂದಿಗೆ ಇಂತಹ ವಾಹನಗಳ ಸಂಚಾರಕ್ಕೆ ಒಪ್ಪಿಗೆ ನೀಡಿದ ಅಮೆರಿಕದ ಮೊದಲ ರಾಜ್ಯವೆಂಬ ಖ್ಯಾತಿಗೂ ನೆವಾಡ ಪಾತ್ರವಾಗಿದೆ.
ಕಳೆದ ವರ್ಷ ಗೂಗಲ್ ಕಂಪನಿಯು ಸ್ವಯಂಚಾಲಿತ ವಾಹನವನ್ನು ಈ ರಸ್ತೆಯಲ್ಲಿ ಚಲಾಯಿಸಿತು. ಗೂಗಲ್, ವಾಹನ ಕಂಪನಿಗಳು, ವಿಮಾ ಕಂಪನಿಗಳು ಮತ್ತು ಕಾನೂನು ಸಮಿತಿಗಳೊಂದಿಗೆ ನೆವಡಾದ ಮೋಟರ್ ವೆಹಿಕಲ್ ವಿಭಾಗವು ಮಾತುಕತೆ ನಡೆಸಿ ಪರಿಕ್ಷಾತ್ಮಕವಾಗಿ ಡ್ರೈವ್ ಮಾಡಲು ಅನುಮತಿ ನೀಡಲಾಗಿದೆ.
ಭವಿಷ್ಯದಲ್ಲಿ ಪರಿಚಯಿಸಲಿರುವ ಸ್ವಯಂಚಾಲಿತ ವಾಹನಗಳು ನೆವಡಾ ರಸ್ತೆಯಲ್ಲಿ ಪರೀಕ್ಷಾತ್ಮಕ ಸವಾರಿ ನಡೆಸಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ ಎಂದು ಅಲ್ಲಿನ ವಾಹನ ಇಲಾಖೆ ನಿರ್ದೇಶಕರಾದ ಬ್ರೂಸ್ ಬ್ರಸ್ಲೊ ಹೇಳಿದ್ದಾರೆ.


Click it and Unblock the Notifications









