ಹೊಸ 2012ರ ಷೆವರ್ಲೆ ಕ್ಯಾಪ್ಟಿವಾ: ಚಿತ್ರ ವಿಮರ್ಶೆ

By Super

ಷೆವರ್ಲೆ ಕಂಪನಿಯು ಪ್ರಸಕ್ತ ಜೂನ್ ತಿಂಗಳಲ್ಲಿ ಪರಿಷ್ಕೃತ ಪ್ರೀಮಿಯಂ ಕ್ಯಾಪ್ಟಿವಾ ಕಾರನ್ನು ಪರಿಚಯಿಸಿತ್ತು. ನೂತನ ಪರಿಷ್ಕೃತ ಕ್ಯಾಪ್ಟಿವಾ ಎಸ್ ಯುವಿಯಲ್ಲಿ ಹಲವು ಹೊಸ ಫೀಚರುಗಳು ಮತ್ತು ಬದಲಾವಣೆಗಳಾಗಿದ್ದವು. ಹೊಸ ಕ್ಯಾಪ್ಟಿವಾ ಕಾರಿನ ಚಿತ್ರ ವಿಮರ್ಶೆ ಇಲ್ಲಿದೆ. ಎಲ್ಲಾ ಚಿತ್ರಗಳನ್ನೊಮ್ಮೆ ನೋಡಿಕೊಂಡು ಓದಿಕೊಳ್ಳಿ.

ಮುಂಭಾಗದಲ್ಲಿರುವ ಬೋಲ್ಡ್ ಗ್ರಿಲ್, ಸ್ಪಷ್ಟ ಮಸೂರ ಹೊಂದಿರುವ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಏರ್ ಡ್ಯಾಂಪ್ ಇತ್ಯಾದಿ ಪ್ರಮುಖ ಫೀಚರುಗಳು ಗಮನಸೆಳೆಯುತ್ತವೆ. ಹದಿನೇಳು ಇಂಚಿನ ಅಲಾಯ್ ವೀಲ್ ನೂತನ ಕಾರಿನ ಸೌಂದರ್ಯ ಹೆಚ್ಚಿಸಿದೆ. ಆಫ್ ರೋಡ್ ಸವಾರಿಗೂ ಸೂಕ್ತವಾಗುವಂತೆ ಇದರ ಚಕ್ರಗಳು ಸದೃಢ ಹಿಡಿತ ಹೊಂದಿವೆ.

ಷೆವರ್ಲೆ ಕ್ಯಾಪ್ಟಿವಾದ ಆರಂಭಿಕ ದರ 18.74 ಲಕ್ಷ ರುಪಾಯಿ. ಇದು ದೆಹಲಿ ಎಕ್ಸ್ ಶೋರೂಂ ದರ. ನೂತನ ಕ್ಯಾಪ್ಟಿವಾ ಕಾರು ಟೊಯೊಟಾ ಫಾರ್ಚ್ಯುನರ್, ಮಿಟ್ಸುಬಿಸಿ ಪಜೆರೊ ಮತ್ತು ಫೋರ್ಡ್ ಎಂಡೊವರ್ ಮುಂತಾದ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸುತ್ತಿದೆ.

ಷೆವರ್ಲೆ ಕ್ಯಾಪ್ಟಿವಾ ಕಾರು 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು 150 ಪಿಎಸ್ ಪವರ್ ಮತ್ತು 320 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕ್ಯಾಪ್ಟಿವಾ ಕಾರನ್ನು ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಗೇರುಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇದು 2 ವೀಲ್ ಡ್ರೈವ್ ಮತ್ತು 4 ವೀಲ್ ಡ್ರೈವ್ ಆಯ್ಕೆಗಳಲ್ಲೂ ಲಭ್ಯವಿದೆ.

ಕ್ಯಾಪ್ಟಿವಾ ಕಾರಿನ ಸ್ಥಳಾವಕಾಶ ವಿಶಾಲವಾಗಿದೆ. ಇದರ ಬೂಟ್ ಸ್ಥಳಾವಕಾಶ 1,565 ಲೀಟರ್ ಇದೆ. ಇದು ಸಾಕಾಗಿಲ್ಲಂದ್ರೆ ಹಿಂಭಾಗದ ಚಕ್ರವನ್ನು ಮಡುಚಿ ಲಗೇಜ್ ಸ್ಥಳಾವಕಾಶವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಷೆವರ್ಲೆ ಕ್ಯಾಪ್ಟಿವಾ ಕಾರು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಅವುಗಳ ದರ ಈ ಕೆಳಗಿನಂತೆ ಇವೆ.
* ಕ್ಯಾಪ್ಟಿವಾ ಎಲ್ ಟಿ ಬಿಎಸ್4: 18,74,062 ರು.
* ಕ್ಯಾಪ್ಟಿವಾ ಎಕ್ಸ್ ಟ್ರೀಂ ಬಿಎಸ್4: 19,48,347 ರು.
* ಕ್ಯಾಪ್ಟಿವಾ ಎಲ್ ಟಿಝಡ್ ಎಡಬ್ಲ್ಯುಡಿ ಬಿಎಸ್4: 20,59,139 ಲಕ್ಷ ರು.

ಕ್ಯಾಪ್ಟಿವಾ ಪವರ್ ಹೇಗಿದೆ?

ಕ್ಯಾಪ್ಟಿವಾ ಪವರ್ ಹೇಗಿದೆ?

* 2.2 ಲೀಟರ್ ಡೀಸೆಲ್ ಎಂಜಿನ್

* 150 ಪಿಎಸ್ ಪವರ್

* 320 ಎನ್ಎಂ ಟಾರ್ಕ್

ವಾಹ್ ಎನಿಸುವ ವಿನ್ಯಾಸ

ವಾಹ್ ಎನಿಸುವ ವಿನ್ಯಾಸ

* ಹೊಸ ಗ್ರಿಲ್

* ಹೊಸ ಹೆಡ್ ಲೈಟ್ ಮತ್ತು ಟೇಲ್ ಲ್ಯಾಂಪ್

* ಸೈಡ್ ಮಿರರಿನಲ್ಲಿ ಎಲ್ ಇಡಿ ಲೈಟ್ಸ್

* 17 ಇಂಚಿನ ಅಲಾಯ್ ವೀಲ್ಸ್

ಕ್ಯಾಪ್ಟಿವಾ ಆವೃತ್ತಿಗಳು

ಕ್ಯಾಪ್ಟಿವಾ ಆವೃತ್ತಿಗಳು

* ಆಕರ್ಷಕ ಸನ್ ರೂಫ್

* ಸ್ಟಿಯರಿಂಗ್ ವೀಲಿನಲ್ಲಿ ಬ್ಲೂಟೂಥ್ ಮತ್ತು ಇಣ್ ಫೋಟೈನ್ ಮೆಂಟ್ ಕಂಟ್ರೋಲ್ಸ್

* ಅಡಾಪ್ಟಿವ್ ಸಸ್ಪೆನ್ಷನ್

ಕ್ಯಾಪ್ಟಿವಾ ಕಾರಿನೊಳಗೆ

ಕ್ಯಾಪ್ಟಿವಾ ಕಾರಿನೊಳಗೆ

* ಕಪ್ಪು ಮತ್ತು ಕೆಂಪು ಮಿಶ್ರಿತ ಡ್ಯೂಯಲ್ ಕಲರ್ ಸೀಟು

* ಕ್ರೂಷ್ ಕಂಟ್ರೋಲ್

* ಹಿಲ್ ಡೆಸೆಂಟ್ ಕಂಟ್ರೋಲ್

* ವೆಂಟಿಲೆಟ್ ಇರುವ ಏರ್ ಕಂಡಿಷನ್ ಸಿಸ್ಟಮ್

ಡ್ಯಾಷ್ ಬೋರ್ಡ್ ನೋಡು

ಡ್ಯಾಷ್ ಬೋರ್ಡ್ ನೋಡು

* ಸೆಂಟ್ರಲ್ ಕನ್ಸೋಲಿನಲ್ಲಿ ಮೋಡಿಫೈಡ್ ಕಂಟ್ರೋಲ್ಸ್

* ಹೊಸ ಡ್ಯಾಷ್ ಬೋರ್ಡ್ ಮತ್ತು ಇನ್ಸುಟ್ರುಮೆಂಟ್ ಪ್ಯಾನೆಲ್

* ಉನ್ನತ ಗುಣಮಟ್ಟದ ಪ್ಲಾಸ್ಟಿಕ್

* ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್

* ಆಟೋಮ್ಯಾಟಿಕ್ ರೈನ್ ಸೆನ್ಸಿಂಗ್ ವೈಪರ್ಸ್

2012 ಷೆವರ್ಲೆ ಕ್ಯಾಪ್ಟಿವಾ ಹೈಲೈಟ್ಸ್

2012 ಷೆವರ್ಲೆ ಕ್ಯಾಪ್ಟಿವಾ ಹೈಲೈಟ್ಸ್

* ಆಲ್ ವೀಲ್ ಡ್ರೈವ್

* ಇಬಿಡಿ ಜೊತೆಗೆ ಎಬಿಎಸ್

* ಆರು ಏರ್ ಬ್ಯಾಗ್

* ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್

* ಮುಂಭಾಗ ಮತ್ತು ಹಿಂಭಾಗದಲ್ಲಿ ಪಾಗ್ ಲ್ಯಾಂಪ್ಸ್

* ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

More from DriveSpark

Article Published On: Thursday, September 13, 2012, 14:33 [IST]
English summary
Chevrolet, the General Motors owned car brand introduced the new upgraded version of the Captiva premium SUV in India in June this year. The face lifted Captiva boasted of several new features and changes to its interior and exterior design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+