2013ರ ಷೆವರ್ಲೆ ಬೀಟ್: ವಿನ್ಯಾಸ ಹೀಗಿದೆ ನೋಡಿ

ಜನರಲ್ ಮೋಟರ್ಸ್ ಕಂಪನಿಯು ಅಮೆರಿಕದಲ್ಲಿ ನೂತನ ಪರಿಷ್ಕೃತ 2013ರ ಷೆವರ್ಲೆ ಸ್ಪಾರ್ಕ್ (ಭಾರತದಲ್ಲಿ ಬೀಟ್ ಅಂತ ಹೆಸರು) ಅನಾವರಣ ಮಾಡಿದೆ. ಅಮೆರಿಕದಲ್ಲಿ ಇದು ಜನರಲ್ ಮೋಟರ್ಸ್ ಕಂಪನಿಯ ಅಗ್ಗದ ಕಾರಾಗಿದೆ. ಕಂಪನಿಯು ದೇಶದ ರಸ್ತೆಗೆ ಇದೇ ವಿನ್ಯಾಸವನ್ನು ಹೊಸ ಬೀಟ್ ಹೆಸರಿನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

ಅಮೆರಿಕದಲ್ಲಿ ಅನಾವರಣ ಮಾಡಿರುವ ಆವೃತ್ತಿಯು 1 ಲೀಟರ್(68 ಹಾರ್ಸ್ ಪವರ್) ಮತ್ತು 1.2 ಲೀಟರ್(82 ಹಾರ್ಸ್ ಪವರ್) ಎಂಜಿನ್ ಆಯ್ಕೆಯ ಸ್ಪಾರ್ಕ್ ಬಿಡುಗಡೆ ಮಾಡಿದೆ. ಕಂಪನಿಯು ದೇಶದ ರಸ್ತೆಗೆ 1.3 ಲೀಟರಿನ ಜೆಟ್ ಟರ್ಬೊ ಡೀಸೆಲ್ ಮಲ್ಟಿಜೆಟ್ ಎಂಜಿನ್ ಪರಿಚಯಿಸುವ ನಿರೀಕ್ಷೆಯಿದೆ.

ಸದ್ಯ ರಸ್ತೆಯಲ್ಲಿರೋ ಬೀಟ್ ಬಗ್ಗೆ: ಸುಮಾರು 4.47, 663 ರು. ಆರಂಭಿಕ ಎಕ್ಸ್ ಶೋರೂಂ ದರದಲ್ಲಿ ದೊರಕುವ ಷೆವರ್ಲೆ ಬೀಟ್ ಡೀಸೆಲ್ ತನ್ನ ಡೈನಾಮಿಕ್, ಸ್ಟೈಲಿಷ್ ಮತ್ತು ಇಂಧನ ದಕ್ಷತೆ ಇತ್ಯಾದಿಗಳಿಂದ ಗಮನಸೆಳೆಯುತ್ತದೆ.

ಬೀಟ್ ಡೀಸೆಲ್ ಕಾರು ನೂತನ 1.0 ಎಕ್ಸ್ಎಸ್‌ಡಿಇ ಸ್ಮಾರ್ಟ್ ಟೆಕ್ ಕಾಮನ್ ರೇಲ್ ಡೀಸೆಲ್ ಎಂಜಿನ್ ಹೊಂದಿದೆ. ಇದು 58.5 ಹಾರ್ಸ್ ಪವರ್ ಮತ್ತು 150 ಟಾರ್ಕ್ ಪವರ್ ನೀಡುತ್ತದೆ. ಕಂಪನಿಯ ಪ್ರಕಾರ ಇದರ ಮೈಲೇಜ್ 25.44 ಕಿ.ಮೀ. ರಸ್ತೆಗಳಿಗೆ ಅನುಗುಣವಾಗಿ ಮೈಲೇಜ್ ಹೆಚ್ಚುಕಡಿಮೆ ಆದೀತು.

ಸುರಕ್ಷತೆಯ ಪ್ರಯಾಣಕ್ಕೆ ಸೂಕ್ತವಾಗುವಂತೆ ಎರಡು ಏರ್‌ಬ್ಯಾಗ್ ಇದರಲ್ಲಿದೆ. ಅಂದರೆ ಮುಂಭಾಗದಲ್ಲಿ ಚಾಲಕ ಮತ್ತು ಸಹಪ್ರಯಾಣಿಕರ ಮುಂಭಾಗದಲ್ಲಿ ಏರ ಬ್ಯಾಗ್ ಇದೆ. ಸೇಫ್ಟಿಗಾಗಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಈ ಕಾರನ್ನು 9 ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

More from DriveSpark

Article Published On: Wednesday, August 29, 2012, 12:53 [IST]
English summary
General Motors Launched 2013 Chevrolet Spark in America. These car will new Beat Hatchback for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+