ಹೊಸ ಹೋಂಡಾ ಸಿವಿಕ್ ಸೆಡಾನ್ ಕಾರು ಬರೊಲ್ವಂತೆ..

2012ರ ನೂತನ ಹೋಂಡಾ ಸಿವಿಕ್ ಸೆಡಾನ್ ಕಾರು ಜಾಗತಿಕ ಮಾರುಕಟ್ಟೆಗೆ ಆಗಮಿಸಿ ತುಂಬಾ ದಿನ ಕಳೆದಿದೆ. ಈ ಕಾರು ದೇಶದ ರಸ್ತೆಗೂ ಆಗಮಿಸುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಬಹುದಾದ ಸುದ್ದಿ ಇಲ್ಲಿದೆ. ಕಂಪನಿಯು ಹೊಸ ಸಿವಿಕ್ ಕಾರನ್ನು ಭಾರತಕ್ಕೆ ಪರಿಚಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲವೆಂದು ವರದಿಗಳು ಹೇಳಿವೆ.

ಕಂಪನಿಯು ಇತ್ತೀಚೆಗೆ 1.6 ಲೀಟರಿನ ಐಡಿಟೆಕ್ ಟರ್ಬೊ ಡೀಸೆಲ್ ಎಂಜಿನನ್ನು ಅನಾವರಣ ಮಾಡಿದೆ. ಕಂಪನಿಯ ಮುಂದಿನ ಕಾರುಗಳೆಲ್ಲ ಈ ಎಂಜಿನ್ ಮೂಲಕ ಆಗಮಿಸಲಿದೆ. 1.6 ಲೀಟರಿನ ಈ ಎಂಜಿನ್ 120 ಅಶ್ವಶಕ್ತಿ ಮತ್ತು 300ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದು ಅತ್ಯುತ್ತಮ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದೇ ಎಂಜಿನನ್ನು ನೂತನ ಸಿವಿಕ್ ಕಾರಿಗೆ ಬಳಸಿದ ನಂತರ ದೇಶದ ರಸ್ತೆಗೆ ಸಿವಿಕ್ ಬಂದರೂ ಬರಬಹುದು.

ಹೋಂಡಾ ಹೊಸ ಸಿವಿಕ್ ಕಾರೇ ಬೇಕೆಂದಿದ್ದರೆ ದೀರ್ಘಕಾಲ ಕಾಯುವುದು ಅನಿವಾರ್ಯ. 2012 ಸಿವಿಕ್ ಸೆಡಾನ್ ಕಾರು ಯುರೋಪ್ ಮಾರುಕಟ್ಟೆಯಾದ್ಯಂತ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದು 2.2 ಲೀಟರಿನ ಐ-ಡಿಟೆಕ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದು 148 ಅಶ್ವಶಕ್ತಿ ಮತ್ತು 350 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಯುರೋಪಿನಲ್ಲಿ ಇದೇ ಎಂಜಿನ್ ಹೋಂಡಾ ಅಕಾರ್ಡ್ ಮತ್ತು ಸಿಆರ್ ವಿ ಕಾರುಗಳಲ್ಲಿಯೂ ಬಳಸಲಾಗುತ್ತಿದೆ.

More from DriveSpark

Article Published On: Saturday, June 30, 2012, 12:42 [IST]
English summary
2012 new Honda Civic not coming in Indian Market. According to Reports, Japanese Major Carmaker Honda not planning to launch new Honda Civic to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+