ಹ್ಯುಂಡೈ ಎಲಾಂಟ್ರಾ ಬುಕ್ಕಿಂಗ್ ಆರಂಭ, ತಗೋತಿರಾ?
ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ಕಂಪನಿಯು ನೂತನ ಫ್ಲೂಡಿಕ್ ವಿನ್ಯಾಸದ ಎಲಾಂಟ್ರಾ ಕಾರು ರಸ್ತೆಗಿಳಿಯಲಿದೆ ಎಂದು ಕನ್ನಡ ಡ್ರೈವ್ ಸ್ಪಾರ್ಕ್ ವರದಿ ಮಾಡಿತ್ತು. ನಮ್ಮ ಊಹೆ ಖಚಿತವಾಗಿದೆ. ಯಾಕೆಂದರೆ ಕೊರಿಯಾದ ಕಾರು ಕಂಪನಿಯು ಈಗಾಗಲೇ ನೂತನ ಎಲಾಂಟ್ರಾ ಕಾರಿನ ಬುಕ್ಕಿಂಗ್ ಆರಂಭಿಸಿದೆ.
ಪ್ರಸಕ್ತ ವರ್ಷ ಹೆಚ್ಚಿನ ಜನರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಕಾರುಗಳಲ್ಲಿ ಹ್ಯುಂಡೈ ಎಲಾಂಟ್ರಾ ಕೂಡ ಒಂದು. ಇದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳೆರಡರಲ್ಲೂ ದೊರಕಲಿದ್ದು, ದರ ಸುಮಾರು 13-16 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
ನೂತನ ಎಲಾಂಟ್ರಾ ಕಾರು ಫ್ಲೂಡಿಕ್ ವಿನ್ಯಾಸದಲ್ಲಿ ಆಗಮಿಸಲಿರುವುದು ಜನರ ಬಹುನಿರೀಕ್ಷೆಗೆ ಪ್ರಮುಕ ಕಾರಣ. ವೆರ್ನಾಕ್ಕಿಂತ ಹೆಚ್ಚಿನ ಮತ್ತು ಪ್ರೀಮಿಯಂ ಸೊನಾಟಾಕ್ಕಿಂತ ಕಡಿಮೆಯ ಕಾರು ಖರೀದಿಸಲು ಇಚ್ಚಿಸಲು ಬಯಸುವ ಗ್ರಾಹಕರಿಗೆ ನೂತನ ಎಲಾಂಟ್ರಾ ಸೂಕ್ತವಾಗಿದೆ.
ನೂತನ ಎಲಾಂಟ್ರಾ ಡಿ ಸೆಗ್ಮೆಂಟ್ ಸೆಡಾನ್ ಕಾರುಗಳಾದ ಹೋಂಡಾ ಸಿವಿಕ್, ಷೆವರ್ಲೆ ಕ್ರೂಝ್, ಟೊಯೊಟಾ ಕೊರೊಲಾ, ಸ್ಕೋಡಾ ಲಾರಾ, ಫೋಕ್ಸ್ ವ್ಯಾಗನ್ ಜೆಟ್ಟಾ ಮತ್ತು ರೆನೊ ಫ್ಲೂಯೆನ್ಸ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ನಿರೀಕ್ಷೆಯಿದೆ.
ದೇಶದಲ್ಲಿ ಈಗಾಗಲೇ ಹ್ಯುಂಡೈ ವೆರ್ನಾ ಜನಪ್ರಿಯ ಕಾರಾಗಿದೆ. ಇದೀಗ ಕಂಪನಿಯು ಎಲಾಂಟ್ರಾ ಕಾರಿನ ಮೂಲಕ ಕಂಪನಿಯು ದೇಶದಲ್ಲಿ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಯೋಜಿಸಿದೆ.


Click it and Unblock the Notifications









