ಹೊಸ ಪೀಳಿಗೆಯ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್

ಯಾರಿಸ್ ಮೋಟರ್ ಶೋನಲ್ಲಿ ಏಳನೇ ಜೆನರೇಶನ್ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್ ಕಾರು ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಜಾಗತಿಕ ಹ್ಯಾಚ್‌ಬ್ಯಾಕ್ ಕಾರನ್ನು ಫೋಕ್ಸ್‌ವ್ಯಾಗನ್ 2014ರಲ್ಲಿ ಭಾರತಕ್ಕೆ ಫೋಕ್ಸ್‌ವ್ಯಾಗನ್ ಕಾರು ಪ್ರೇಮಿಗಳು ಇನ್ನು ಹೆಚ್ಚು ದಿನ ಕಾಯಬೇಕಿಲ್ಲ. ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್‌ನಲ್ಲಿ ಏನೇನಿದೆ ಎಂಬುದರತ್ತ ಒಂದು ಬಾರಿ ಕಣ್ಣು ಹಾಯಿಸೋಣ.

ಈ ವಿಶಿಷ್ಟ ಕಾರು ಇತರ ಹ್ಯಾಚ್‌ಬ್ಯಾಕ್ ಕಾರುಗಳ ಮಾಲಿಕರ ನಿದ್ದೆ ಕೆಡಿಸುವುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗಿದೆ. ಹಾಗಿದ್ರೆ, ಹೊಸ ಪೀಳಿಗೆಯ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಏನೈತಿ ಅಂಥಾದ್ದೇನೈತಿ ಎಂಬುದನ್ನು ಸ್ಥೂಲವಾಗಿ ನೋಡೋಣ ಬನ್ನಿ.

ಪ್ಯಾರಿಸ್ ಮೋಟರ್ ಶೋದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಈ ಹೊಸಬಗೆಯ ಕಾರಿನ ಕೆಲ ಚಿತ್ರಗಳನ್ನು ಓದುಗರ ಅವಗಾಹನಗೆ ನೀಡುತ್ತಿದ್ದೇವೆ. ಇಂದರ ಹಿಂಬದಿಯ ಲೈಟುಗಳು ಫೋಕ್ಸ್‌ವ್ಯಾಗನ್ ಪಸಟ್‌ನಂತೆಯೇ ಇದೆ. ಇದರ ಡ್ಯುಯೆಲ್ ಎಕ್ಸಾಸ್ಟ್ ಪೈಪುಗಳು ಈ ಹೊಸ ಜೆನರೇಶನ್ ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಭಾರತಕ್ಕೆ ಎಂದು ಕಾಲಿಡಲಿದೆ?

ಭಾರತಕ್ಕೆ ಎಂದು ಕಾಲಿಡಲಿದೆ?

ಈ ಹೊಸ ಜೆನರೇಶನ್ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್ ಕಾರು 2014ರಲ್ಲಿ ಭಾರತದ ರಸ್ತೆಗಳಿಗೆ ನುಗ್ಗಲಿದೆ.

ಆಕರ್ಷಕ ಮುಂಬದಿಯ ಹೆಡ್‌ಲೈಟ್

ಆಕರ್ಷಕ ಮುಂಬದಿಯ ಹೆಡ್‌ಲೈಟ್

ಹಳೆಯ ಗೋಲ್ಫ್ ಕಾರಿನ ಮುಂಬದಿಯ ಹೆಡ್‌ಲೈಟನ್ನು ಮಾರ್ಪಡಿಸಿ ಹೊಸರೂಪ ನೀಡಲಾಗಿದೆ. ಇದು ಈ ಕಾರಿನ ಮತ್ತೊಂದು ಆಕರ್ಷಣೆಯ ಬಿಂದು ಎಂದರೂ ತಪ್ಪಾಗಲಾರದು.

ಕಾರಿನ ಹಿಂಬದಿಯ ಲೈಟುಗಳು

ಕಾರಿನ ಹಿಂಬದಿಯ ಲೈಟುಗಳು

ಹೊಸ ಪೀಳಿಗೆಯ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್ ಕಾರಿನ ಹಿಂಬದಿಯ ಲೈಟುಗಳು ಹಳೆಯ ಫೋಕ್ಸ್‌ವ್ಯಾಗನ್ ಗೋಲ್ಫ್ ಕಾರಿನಂತೆಯೇ ಇವೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್

ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್

ಈ ಏಳನೇ ಜೆನರೇಶನ್ ಗೋಲ್ಫ್ ಕಾರನ್ನು ಎಮ್‌ಕ್ಯೂಬಿ ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೀತಿಯ ಇಂಜಿನ್ ಇರುವ ಕಾರುಗಳು ಲಭ್ಯವಾಗಲಿವೆ.

ಈ ಏಳನೇ ಜೆನರೇಶನ್ ಗೋಲ್ಫ್ ಕಾರನ್ನು ಎಮ್‌ಕ್ಯೂಬಿ ಪ್ಲಾಟ್‌ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಗೋಲ್ಫ್ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ನಲ್ಲಿ ದೊರೆಯಲಿದೆ. ಪೆಟ್ರೋಲ್ ಕಾರು 1.2-ಲೀಟರ್ ಟಿಎಸ್ಐ 84 ಹಾರ್ಸ್ ಪವರ್ ಮತ್ತು 1.4-ಲೀಟರ್ ಟಿಎಸ್ಐ 138 ಹಾರ್ಸ್ ಪವರ್ ಇರಲಿದೆ. ಡೀಸೆಲ್ ಕಾರು 1.6-ಲೀಟರ್ 104 ಹಾರ್ಸ್ ಪವರ್ ಮತ್ತು 2.0-ಲೀಟರ್ 148 ಹಾರ್ಸ್ ಪವರ್ ಇರಲಿದೆ.

ಹೊಸ ಜೆನರೇಶನ್ ಫೋಕ್ಸ್‌ವ್ಯಾಗನ್ ಗೋಲ್ಫ್ ಹ್ಯಾಚ್‌ಬ್ಯಾಕ್ ಕಾರು ಕೊಳ್ಳಲು ಆಸಕ್ತಿಯಿದೆಯೆ? ಫೋಕ್ಸ್‌ವ್ಯಾಗನ್ ತರುತ್ತಿರುವ ಗ್ಲೋಬಲ್ ಹ್ಯಾಚ್‌ಬ್ಯಾಕ್ ಕಾರನ್ನು ಭಾರತೀಯರು ಸ್ವಾಗತಿಸುವ ನಂಬಿಕೆ ನಿಮಗಿದೆಯೆ? ಹಾಗಿದ್ರೆ, ಇನ್ನೇನು ಹೆಚ್ಚು ದಿನ ಕಾಯಬೇಕಾಗಿಲ್ಲ. ಕೌಂಟ್ ಡೌನ್ ಈಗಾಗಲೆ ಶುರುವಾಗಿದೆ. ಕೆಲವೇ ತಿಂಗಳು ಮಾತ್ರ. ಈ ಕಾರಿನ ಕುರಿತಂತೆ ಹೆಚ್ಚಿನ ವಿವರ ಬೇಕಿದ್ದಲ್ಲಿ ಈ ವೆಬ್ ಸೈಟನ್ನು ನೋಡುತ್ತಿರಿ.

Most Read Articles

Kannada
English summary
Volkswagen has showcased the seventh generation Golf at the ongoing Paris Motor Show. Volkswagen is said to bring this global hatchback to India by 2014. We take a quick look at its offering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X