ಬೆಂಗ್ಳೂರು-ಮೈಸೂರು ಹೆದ್ದಾರಿಯಲ್ಲಿ ಇವಾಲಿಯಾ
ನಿಸ್ಸಾನ್ ಕಂಪನಿಯ ಬಹುನಿರೀಕ್ಷಿತ ಏಳು ಸೀಟಿನ ಎಂಪಿವಿ ಇವಾಲಿಯಾ ಕಾರು ಇತ್ತೀಚೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು. ಅದಕ್ಕೆ ಆನ್ ಟೆಸ್ಟ್ ಎಂಬ ಸ್ಟಿಕರ್ ಅಂಟಿಸಲಾಗಿತ್ತು. ಕಂಪನಿಯು ಇವಾಲಿಯಾ ಟೆಸ್ಟ್ ಮಾಡಲು ನಮ್ಮೂರ ರಸ್ತೆಯನ್ನು ಆಯ್ಕೆಮಾಡಿಕೊಂಡಿರುವುದು ವಿಶೇಷ.
ಇವಾಲಿಯಾ ಎಂದರೆ ನಿಸ್ಸಾನ್ ಕಂಪನಿಯ ಜಾಗತಿಕ ಉತ್ಪನ್ನ. ವಿದೇಶಿ ಮಾರುಕಟ್ಟೆಯಲ್ಲಿ ಎನ್ವಿ200 ಮಿನಿ ವ್ಯಾನ್ ಹೆಸರಿನಲ್ಲಿ ಇವಾಲಿಯಾ ಜನಪ್ರಿಯವಾಗಿದೆ. ಇದು ಮಹೀಂದ್ರ ಕ್ಷೈಲೊ, ಷೆವರ್ಲೆ ತವೆರಾ ಮುಂತಾದ ಮಲ್ಟಿ ಪರ್ಪೊಸ್ ವೆಹಿಕಲುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಏಳುಜನರು ಆರಾಮವಾಗಿ ಕುಳಿತುಕೊಳ್ಳವ ಸಾಮರ್ಥ್ಯವಿರುವುದು ಇವಾಲಿಯಾ ವಿಶೇಷತೆ. ಇದರ ಗ್ರೌಂಡ್ ಕ್ಲಿಯರೆನ್ಸ್, ಚಾಲನೆ ಅನುಭವ ಇತ್ಯಾದಿಗಳು ಅನನ್ಯವಾಗಿದೆ ಎಂದು ಜಾಗತಿಕ ಮಾರುಕಟ್ಟೆಯಿಂದ ಪ್ರಶಂಸೆ ಪಡೆದಿದೆ. ದೇಶಕ್ಕೆ ಆಗಮಿಸುವ ನಿಸ್ಸಾನ್ ಇವಾಲಿಯಾ ಕಾರು 1.5 ಲೀಟರಿನ ಡಿಸಿಐ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ.
ನಿಸ್ಸಾನ್ ಇವಾಲಿಯಾ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಇದರ ದರ 8-10 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









