ದೇಶದ ರಸ್ತೆಗೆ ಶೀಘ್ರದಲ್ಲಿ ನಿಸ್ಸಾನ್ ಇನ್ಫಿನಿಟಿ ಆಗಮನ

Nissan Infiniti Premium vehicles
ಕಾರು ಕಂಪನಿಗಳು ದೇಶಿ ವಾಹನ ಮಾರುಕಟ್ಟೆಯನ್ನು ತದೇಕಚಿತ್ತದಿಂದ ನೋಡುತ್ತಿವೆ. ಯಾವ ಗ್ಯಾಪಿಗೆ ಯಾವ ಕಾರು ಪರಿಚಯಿಸಬಹುದು ಎಂದು ದಿಟ್ಟಿಸಿನೋಡುತ್ತಿದ್ದಾರೆ. ಜಪಾನಿನ ಅಗ್ರ ಮೂರನೇ ಕಾರು ತಯಾರಿಕಾ ಕಂಪನಿ ನಿಸ್ಸಾನ್ ದೇಶದ ರಸ್ತೆಗೆ ಇನ್ಫಿನಿಟಿ ಬ್ರಾಂಡ್ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. ಕಂಪನಿಯು ದುಬಾರಿ ಕಾರುಗಳನ್ನು ಇನ್ಫಿನಿಟಿ ಬ್ರಾಂಡ್ ಮೂಲಕ ಮಾರಾಟ ಮಾಡುತ್ತಿದೆ.

"ನಾವು ಭಾರತದ ರಸ್ತೆಗೆ ಇನ್ಫಿನಿಟಿ ಕಾರುಗಳನ್ನು ಪರಿಚಯಿಸುವ ಕುರಿತು ಖಚಿತತೆ ಹೊಂದಿದ್ದೇವೆ. ಇಲ್ಲಿಗೆ ಈ ಕಾರುಗಳನ್ನು ಯಾವ ರೀತಿಯಲ್ಲಿ ಪರಿಚಯಿಸುವುದು ಮತ್ತು ಇಲ್ಲಿನ ಮಾರುಕಟ್ಟೆಯಲ್ಲಿ ಯಾವ ರೀತಿ ಮಾರಾಟ ಹೆಚ್ಚಿಸಿಕೊಳ್ಳಬಹುದು ಎನ್ನುವುದರ ಕುರಿತು ಈಗ ಅಧ್ಯಯನ ಮಾಡುತ್ತಿದ್ದೇವೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಗಿಲ್ಲಿಸ್ ನೊಮಾಂಡ್ ಹೇಳಿದ್ದಾರೆ.

ನಿಸ್ಸಾನ್ ಕಂಪನಿಯು ಇನ್ಫಿನಿಟಿ ಬ್ರಾಂಡ್ ಮೂಲಕ ಜಿ ಸೀರಿಸ್ ಸಲೂನ್ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. ಈ ಕಾರುಗಳು ಮರ್ಸಿಡಿಸ್ ಬೆಂಝ್ ನ ಸಿ ಕ್ಲಾಸ್, ಬಿಎಂಡಬ್ಲ್ಯು 3 ಸೀರಿಸ್ ಮತ್ತು ಆಡಿ ಎ4 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಇನ್ಫಿನಿಟಿ ಎಂ ಸರಣಿಯ ಕಾರುಗಳು ಮರ್ಸಿಡಿಸ್ ಇ ಕ್ಲಾಸ್ ಕಾರುಗಳಿಗೆ, ಬಿಎಂಡಬ್ಲ್ಯು 5 ಸೀರಿಸ್ ಕಾರುಗಳಿಗೆ ಮತ್ತು ಆಡಿ ಎ6 ಮತ್ತು ಜಾಗ್ವಾರ್ ಎಕ್ಸ್ಎಫ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಜೊತೆಗೆ ಇಎಕ್ಸ್ ಮಿನಿ ಸ್ಪೋರ್ಟ್ ಕಾರುಗಳನ್ನು ಕೂಡ ಕಂಪನಿ ಪರಿಚಯಿಸಲಿದೆ.

1989ರಲ್ಲಿ ನಿಸ್ಸಾನ್ ಕಂಪನಿಯು ಅಮೆರಿಕದಲ್ಲಿ ಇನ್ಫಿನಿಟಿ ಬ್ರಾಂಡ್ ಕಾರುಗಳನ್ನು ಪರಿಚಯಿಸಿತು. ಈ ಕಾರುಗಳು ಈಗಾಗಲೇ ಪಶ್ಚಿಮ ಏಷ್ಯಾ, ದಕ್ಷಿಣ ಕೊರಿಯಾ, ರಷ್ಯಾ, ಥೈವಾನ್, ಚೀನಾ, ಉಕ್ರೈನ್ ಮತ್ತು ಇಂಗ್ಲೆಂಡ್ ದೇಶಗಳಿಗೆ ಪ್ರಯಾಣ ಬೆಳೆಸಿಯಾಗಿದೆ. ಈಗಾಗಲೇ ನಿಸ್ಸಾನ್ ಇನ್ಫಿನಿಟಿ ನೆಟ್ ವರ್ಕ್ 15 ದೇಶಗಳಲ್ಲಿ 230 ಡೀಲರ್ಷಿಪ್ ನೆಟ್ ವರ್ಕ್ ಗಳ ಮೂಲಕ ಮಾರಾಟವಾಗುತ್ತಿದೆ.

ನೂತನ ನಿಸ್ಸಾನ್ ಇನ್ಫಿನಿಟಿ ಕಾರುಗಳು ದೇಶದಲ್ಲಿ ಟೊಯೊಟಾ ಕಂಪನಿಯೊಂದಿಗೆ ನೇರವಾಗಿ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ಯಾಕೆಂದರೆ ದೇಶದ ಮಾರುಕಟ್ಟೆಗೆ ಟೊಯೊಟಾ ಕಂಪನಿಯು ಲೆಕ್ಸಾಸ್ ಬ್ರಾಂಡ್ ಕಾರುಗಳನ್ನು ಮುಂದಿನ ವರ್ಷ ಪರಿಚಯಿಸಲು ಯೋಜಿಸಿದೆ.

ಇದೀಗ ದೇಶಿ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳಿಗೆ ಕೂಡ ಗಮನಾರ್ಹವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ನಿಸ್ಸಾನ್ ಕಂಪನಿ ಕೂಡ ತನ್ನಲ್ಲಿರುವ ಹಲವು ಐಷಾರಾಮಿ ಕಾರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಯೋಜಿಸಿದೆ.

More from DriveSpark

Article Published On: Wednesday, January 11, 2012, 11:48 [IST]
English summary
The third-biggest Japanese car maker Nissan Motor Company bring its Infiniti branded cars in India. The Infiniti portfolio for India could include the G series saloon, M series saloon, EX series mini sport utility vehicles, or SUVs and QX series SUVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+