ನಿಸಾನ್ ಇವಾಲಿಯಾ ರಸ್ತೆಗೆ, ದರ 8.49 ಲಕ್ಷ

ನವದೆಹಲಿ, ಸೆ 25: ನಿಸಾನ್ ಮೋಟರ್ಸ್ ಇಂಡಿಯಾ ಕಂಪನಿಯು ದೇಶದ ರಸ್ತೆಗೆ ನೂತನ ಎಂಪಿವಿ ಇವಾಲಿಯಾ ಪರಿಚಯಿಸಿದೆ. ಇದರ ಆರಂಭಿಕ ದರ 8.49 ಲಕ್ಷ ರುಪಾಯಿ. ಇದು ಎಕ್ಸ್ಇ, ಎಕ್ಸ್ಇ+, ಎಕ್ಸ್ಎಲ್ ಮತ್ತು ಎಕ್ಸ್ ವಿ ಎಂಬ ನಾಲ್ಕು ಆವೃತ್ತಿಗಳಲ್ಲಿ ಲಭ್ಯವಿದೆ.

ಇವಾಲಿಯಾ ದರ (ದೆಹಲಿ ಎಕ್ಸ್ ಶೋರೂಂ)
ಇವಾಲಿಯಾ ಎಕ್ಸ್ಇ: 8.49 ಲಕ್ಷ ರುಪಾಯಿ
ಎಕ್ಸ್ಇ+: 8.92 ಲಕ್ಷ ರುಪಾಯಿ.
ಎಕ್ಸ್ಎಲ್: 9.49 ಲಕ್ಷ ರುಪಾಯಿ
ಎಕ್ಸ್ ವಿ: 9.99 ಲಕ್ಷ ರುಪಾಯಿ.

ನೂತನ ನಿಸಾನ್ ಇವಾಲಿಯ ಎಂಪಿವಿಯು ರೆನೊ ಕುಟುಂಬದ ಕೆ9ಕೆ ಡೀಸೆಲ್ ಎಂಜಿನ್ ಹೊಂದಿದೆ. 1.5 ಲೀಟರಿನ ಡಿಸಿಐ ಎಂಜಿನ್ 85 ಹಾರ್ಸ್ ಪವರ್ ಮತ್ತು 200ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರ ಮೈಲೇಜ್ ಪ್ರತಿಲೀಟರಿಗೆ 19 ಕಿ.ಮೀ. ಎಂದು ಕಂಪನಿ ಹೇಳಿದೆ. ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಇದರ ಮೈಲೇಜ್ ಹೆಚ್ಚಿದೆ.

ನೂತನ ಇವಾಲಿಯಾ ದರವೂ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ದುಬಾರಿಯಾಗಿದೆ. ಮಾರುತಿ ಸುಜುಕಿ ಎರ್ಟಿಗಾ, ಕ್ಷೈಲೊ ಎಂಪಿವಿಗಿಂತ ದುಬಾರಿಯಾಗಿರುವ ಈ ಕಾರು ಗ್ರಾಹಕರನ್ನು ಸೆಳೆಯುವುದೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಫಸ್ಟ್ ಡ್ರೈವ್: ನಿಸಾನ್ ಇವಾಲಿಯಾ ಎಂಪಿವಿ

More from DriveSpark

Article Published On: Tuesday, September 25, 2012, 14:17 [IST]
English summary
Nissan Launched Evalia MPV in New Delhi at Rs 8.49 lakh. Evalia 1.5 liter dCi Engine delivers 85 bhp and a maximum torque of 200 Nm. Nissan Evalia Mileage 19 kmpl. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+