ನಿಸ್ಸಾನ್ ಫೆಸ್ಟಿವ್ ಸೀಸನ್ ಆಫರ್- ಮೈಕ್ರಾ ಪ್ರೈಮೊ ಬಿಡುಗಡೆ
ಜಪಾನ್‌ನ ಬಹುರಾಷ್ಟ್ರೀಯ ಕಾರು ತಯಾರಕ ಕಂಪೆನಿಯಾದ ನಿಸ್ಸಾನ್ ಮೋಟಾರ್ಸ್, ಫೆಸ್ಟಿವ್ ಸೀಸನ್ ಮುಂದಿರಿಸಿಕೊಂಡು ನೂತನ 'ನಿಸ್ಸಾನ್ ಮೈಕ್ರಾ ಪ್ರೈಮೊ' ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಮೈಕ್ರಾ ಆವೃತ್ತಿ ಮೂಲಕ ಈಗಾಗಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಿಸ್ಸಾನ್, ವಿಶ್ವ ಕಾರು ತಯಾರಕ ಕಂಪೆನಿಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಇದೀಗ ಪ್ರೈಮೊ ಆವೃತ್ತಿ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಗುರಿಯರಿಸಿಕೊಂಡಿದೆ.
ನಿಸ್ಸಾನ್ ಮೈಕ್ರಾ ಪ್ರೈಮೊ ಫೀಚರ್ಸ್:
- ಮನೋಹರವಾದ ಎಇಡಿ ಲೈಟಿಂಗ್
- ರಿಮೊಟ್ ನಿಯಂತ್ರಿತ ಹೊರಮೈ ರಿಯರ್ ವ್ಯೂ ಮಿರರ್
- ಕಾರಿನ ಸೊಗಸಿಗೆ ತಕ್ಕಂತೆ ಮುತ್ತಿನ ಬಿಳಿ ಬಣ್ಣ
- ಇಂಡಿಕೆಟರ್ಸ್ ಜತೆ ರಿಯರ್ ಪಾರ್ಕಿಂಗ್ ಸೆನ್ಸಾರ್
- ಯುಎಸ್‌ಬಿ ಪೋರ್ಟ್ ಜತೆ ಡಬಲ್ ಡಿಐಎನ್ ಪ್ರೀಮಿಯಂ ಆಡಿಯೊ ವ್ಯವಸ್ಥೆ
ನಿಸ್ಸಾನ್ ಮೈಕ್ರೊ ಪ್ರೈಮೊ ಒಟ್ಟು ನಾಲ್ಕು ಶ್ರೇಣಿಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಎಕ್ಸ್‌ಎಲ್, ಎಕ್ಸ್‌ವಿ (ಪೆಟ್ರೋಲ್), ಎಕ್ಸ್‌ವಿ ಹಾಗೂ ಎಕ್ಸ್‌ವಿ (ಡೀಸೆಲ್) ಸೇರಿವೆ.
ವಿಶೇಷ ಫೆಸ್ಟಿವ್ ಆಫರ್...
ಫೆಸ್ಟಿವ್ ಸೀಸನ್‌ನಲ್ಲಿ ಬಹುತೇಕ ಕಾರು ತಯಾರಕರು ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವಾರು ಆಫರ್‌ಗಳನ್ನು ಮುಂದಿರಿಸುತ್ತಿವೆ. ಇದರಂತೆ ನಿಸ್ಸಾನ್ ಕೂಡಾ ವಿಶೇಷ ಕೊಡುಗೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಈ ಆಫರ್‌ಗಳು ನಿಸ್ಸಾನ್ ಪ್ರೈಮೊ ಸಹಿತ, ನಿಸ್ಸಾನ್ ಮೈಕ್ರೊ ಹ್ಯಾಚ್‌ಬ್ಯಾಕ್ ಹಾಗೂ ಸನ್ನಿ ಸೆಡಾನ್ ಶ್ರೇಣಿಗಳಿಗೂ ಲಭ್ಯವಿರುತ್ತದೆ. ಇದರಂತೆ ಪ್ರತಿ ವಾರದಲ್ಲೂ ಲಕ್ಕಿ ಗ್ರಾಹಕರಿಗೆ ಕಾರು ಖರೀದಿಸಿದ ಹಣವನ್ನು ಮರುಪಾವತಿ ಮಾಡುವ ಕೊಡುಗೆಯನ್ನು ಮುಂದಿರಿಸಿದೆ. ಅಲ್ಲದೆ 16.5 ಲಕ್ಷ ರುಪಾಯಿ ಜತೆಗೆ 500 ಗ್ರಾಂ ಚಿನ್ನ ಗೆಲ್ಲುವ ಅವಕಾಶವು ಗ್ರಾಹಕನಿಗಿರುತ್ತದೆ.
ಈಗಿರುವ ವಾಹನವನ್ನು ಗ್ರಾಹಕನು ಅಪ್‌ಗ್ರೇಡ್ ಮಾಡಲು ಬಯಸಿದ್ದಲ್ಲಿ 10 ಸಾವಿರ ರುಪಾಯಿಗಳ ವರೆಗೂ ಎಕ್ಸ್‌ಚೇಂಜ್ ಬೋನಸ್ ಲಭ್ಯ. ಎಲ್ಲ ಕಾರುಗಳಿಗೂ ಕಡಿಮೆ ಇಎಂಐ ವ್ಯವಸ್ಥೆಯಿದ್ದು, ಪ್ರತಿ ಖರೀದಿಗಳಿಗೂ ವಾರಂಟಿ ವಿಸ್ತಾರದ ಆಫರ್ ಕೂಡಾ ಇದೆ.


Click it and Unblock the Notifications









