ಲೀಫ್ ಕಾರಿನಿಂದ ಮನೆಗೆ 3 ದಿನ ಕರೆಂಟ್
ಲೀಫ್ ಕಾರಿದ್ರೆ ಪವರ್ ಕಟ್ ಸಮಸ್ಯೆಯಿಂದ ಪಾರಾಗಬಹುದು ಎಂದು ಯೋಚಿಸುತ್ತೀರಾ. ಆದರೆ ಈ ಕಾರು ಭಾರತಕ್ಕೆ ಯಾವಾಗ ಆಗಮಿಸಲಿದೆ ಎಂಬ ಸುಳಿವು ಇನ್ನೂ ಸಿಕ್ಕಿಲ್ಲ. ಕಂಪನಿಯು ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ಲೀಫ್ ಹೊಸ ಆವೃತ್ತಿ ಪರಿಚಯಿಸುವುದಾಗಿ ಪ್ರಾಮೀಸ್ ಮಾಡಿದೆ.
ಈ ಕಾರು 24 ಕಿಲೋವ್ಯಾಟ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಕರೆಂಟ್ ಇಲ್ಲದ ಸಮಯದಲ್ಲಿ, ತುರ್ತುಪರಿಸ್ಥಿತಿ ಸಮಯದಲ್ಲಿ ನೂತನ ಲೀಫ್ ಇದ್ದರೆ ಕರೆಂಟಿಗೆ ಸಮಸ್ಯೆಯಿಲ್ಲ. ಯಾಕೆಂದರೆ ಕಾರಲ್ಲಿ ಬ್ಯಾಕಪ್ ಕರೆಂಟ್ ಇರುತ್ತದೆ.
ಹೆಚ್ಚಾಗಿ ನೈಸರ್ಗಿಕ ವಿಕೋಪಗಳಿಗೆ ಈಡಾಗುವ ಜಪಾನಿನಂತಹ ದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನುಮುಂದೆ ಲೀಫ್ ಕಾರು ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ. ಪವರ್ ಮೂಲ ಕಾರು ಕೂಡ ಹೌದು.
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯವಾಗಿಲ್ಲ. ಮಹೀಂದ್ರ ರೇವಾ ಮಾತ್ರ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನಿಸ್ಸಾನ್ ಕಂಪನಿಯು ಲೀಫ್ ಕಾರನ್ನು ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗೂ ಪರಿಚಯಿಸುವ ಭರವಸೆ ನೀಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









