ನಿಸ್ಸಾನ್ ಮೈಕ್ರಾ ಹೊಸ ಆವೃತ್ತಿ ಬರಲಿದೆಯಂತೆ!

ನಿಸ್ಸಾನ್ ಮೈಕ್ರಾ ಹ್ಯಾಚ್ ಬ್ಯಾಕ್ ಕಾರೆಂದರೆ ಹೆಚ್ಚಿನ ಕಾರು ಪ್ರಿಯರಿಗೆ ಅಚ್ಚುಮೆಚ್ಚು. ಯಾಕೆಂದರೆ ಈ ಪುಟ್ಟಕಾರಿನ ಕಾರ್ಯಕ್ಷಮತೆ ಮತ್ತು ಹ್ಯಾಂಡ್ಲಿಂಗ್ ದಕ್ಷತೆ ಅತ್ಯುತ್ತಮವಾಗಿದೆ. ಜಗತ್ತಿನ ಸುಮಾರು 180 ದೇಶಗಳಲ್ಲಿ ದೊರಕುವ ಮೈಕ್ರಾ ಗ್ಲೋಬಲ್ ಕಾರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳೂ ಇದ್ದಾರೆ. ಇದೀಗ ಮೈಕ್ರಾ ನೂತನ ಆವೃತ್ತಿಯೊಂದು ದೇಶದ ರಸ್ತೆಗೆ ಆಗಮಿಸುವ ಸೂಚನೆ ದೊರಕಿದೆ.

ನಾಲ್ಕನೇ ತಲೆಮಾರಿನ ನಿಸ್ಸಾನ್ ಮೈಕ್ರಾ ಹ್ಯಾಚ್ ಬ್ಯಾಕ್ ಕಾರು 2010ರಲ್ಲಿ ದೇಶದ ರಸ್ತೆಗೆ ಆಗಮಿಸಿತ್ತು. ಕಂಪನಿಯು ಮುಂದಿನ ವರ್ಷದ ಅಂತ್ಯದೊಳಗೆ ನೂತನ ಮೈಕ್ರಾ ಕಾರನ್ನು ಪರಿಚಯಿಸಲು ಯೋಜಿಸಿದೆ.

ಫೇಸ್ ಲಿಫ್ಟ್ ಮೈಕ್ರಾ ಆವೃತ್ತಿಯ ವಿನ್ಯಾಸ ಇತ್ಯಾದಿಗಳಲ್ಲಿ ಸಾಕಷ್ಟು ಪರಿಷ್ಕೃತವಾಗಿ ಆಗಮಿಸಲಿದೆ. ಆದರೆ ಟೆಕ್ನಿಕಲ್ ಆಗಿ ನೂತನ ಮೈಕ್ರಾದಲ್ಲಿ ಯಾವುದೇ ಬದಲಾವಣೆ ಕಾಣುವ ನಿರೀಕ್ಷೆಗಳಿಲ್ಲ.

ನಿಸ್ಸಾನ್ ಮೈಕ್ರಾ ಹ್ಯಾಚ್ ಬ್ಯಾಕ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಮೈಕ್ರಾ ಆರಂಭಿಕದ ದರ ಸುಮಾರು 4.3 ಲಕ್ಷ ರುಪಾಯಿ ಇದೆ. ಡೀಸೆಲ್ ನಿಸ್ಸಾನ್ ಮೈಕ್ರಾ ಆರಂಭಿಕದ ದರ ಸುಮಾರು 6 ಲಕ್ಷ ರುಪಾಯಿ ಇದೆ.

ಆಸಕ್ತಿದಾಯಕ ವಿಷಯವೆಂದರೆ ನಿಸ್ಸಾನ್ ಮೈಕ್ರಾ ಡೀಸೆಲ್ ಆವೃತ್ತಿಯು ಪ್ರತಿಲೀಟರಿಗೆ ಸುಮಾರು 23 ಕಿ.ಮೀ. ಮೈಲೇಜ್ ನೀಡುತ್ತದೆ. ರೆನೊ ನಿಸ್ಸಾನ್ ಚೆನ್ನೈ ಘಟಕದಿಂದ ಬ್ರಿಟನ್ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ.

More from DriveSpark

Article Published On: Saturday, May 26, 2012, 11:34 [IST]
English summary
Nissan is reportedly planning to launch the facelift Micra by end of next year. The facelift would only be mild in nature retaining its curvy, retro looks. The carmaker which would give the Micra a more premium feel is also not expected make any changes to the technical specification of the car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+