ನಿಸ್ಸಾನ್ ಸಣ್ಣ ಅಗ್ಗದ ಕಾರು: ಆಲ್ಟೋ, ಇಯಾನಿಗೆ ಎದುರಾಳಿ

ನೂತನ ಸಣ್ಣಕಾರಿನ ಕುರಿತು ನಿಸ್ಸಾನ್ ಇಂಡಿಯಾ ಉಪಾಧ್ಯಕ್ಷರಾದ ಆಂಡಿ ಪಾಲ್ಮೆರ್ ವಿವರಿಸಿದ್ದಾರೆ. ಈ ಕಾರಿನ ದರ ಅಗ್ಗವಾಗಿರುವ ಸೂಚನೆಯನ್ನು ಅವರು ನೀಡಿದ್ದಾರೆ. ಈಗಾಗಲೇ 3 ಲಕ್ಷ ರುಪಾಯಿಗಿಂತ ಕಡಿಮೆಯಿರುವ ಹಲವು ಸಣ್ಣಕಾರುಗಳು ಮಾರುಕಟ್ಟೆಯಲ್ಲಿವೆ. ಈ ಸೆಗ್ಮೆಂಟಿಗೆ ನೂತನ ನಿಸ್ಸಾನ್ ಕಾರು ಆಗಮಿಸುವ ನಿರೀಕ್ಷೆಯಿದೆ.
ನಿಸ್ಸಾನ್ ಕಂಪನಿಯು ಈಗ ದೇಶದಲ್ಲಿ ಮೈಕ್ರಾ ಮತ್ತು ಸನ್ನಿ ಕಾರುಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ಚೆನ್ನೈನಲ್ಲಿ ಘಟಕ ಹೊಂದಿದೆ. ಈ ಘಟಕವು ಸಣ್ಣಕಾರು ಉತ್ಪಾದನೆಗೆ ಅತ್ಯಂತ ಸೂಕ್ತವಾಗಿದೆ ಎಂದು ಆಂಡಿ ಪಾಲ್ಮೆರ್ ಹೇಳಿದ್ದಾರೆ.
ಕಂಪನಿಯ ಹೊಸ ನಿರ್ಧಾರವು ಬಜಾಜ್ ಆರ್ಇ60ಗೆ ಪರ್ಯಾಯವಾಗಿ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸುತ್ತದೆ. ನೂತನ ಕಾರನ್ನು ರೆನಾಲ್ಟ್ ಜೊತೆ ಪಾಲುದಾರಿಕೆಯಲ್ಲಿ ಕಂಪನಿ ಉತ್ಪಾದಿಸುವ ನಿರೀಕ್ಷೆಯಿದೆ. ಕೆಲವು ವರದಿಗಳ ಪ್ರಕಾರ ರೆನಾಲ್ಟ್ ಕೂಡ ಸಣ್ಣಕಾರೊಂದನ್ನು ಉತ್ಪಾದಿಸಲು ಆಸಕ್ತಿ ವಹಿಸಿದೆಯಂತೆ.


Click it and Unblock the Notifications








