ನಿಸ್ಸಾನ್ ಇವಾಲಿಯಾ ಎಂಪಿವಿಗೆ ಕೆಲವು ತಿಂಗಳು ಕಾದ್ರೆ ಸಾಕು

ದೇಶದ ಮಲ್ಟಿಪರ್ಪೊಸ್ ವೆಹಿಕಲ್ ಸೆಗ್ಮೆಂಟಿಗೆ ಪಾದರ್ಪಣೆ ಮಾಡಲಿರುವ ಇವಾಲಿಯಾ ಕುರಿತು ಹೆಚ್ಚಿನವರು ಕುತೂಹಲ ತಾಳಿದ್ದಾರೆ. ಯಾಕೆಂದರೆ ಇದು ಈಗಾಗಲೇ ರಸ್ತೆಯಲ್ಲಿರುವ ಟೊಯೊಟಾ ಇನ್ನೋವಾ, ಮಹೀಂದ್ರ ಕ್ಷೈಲೊ ಮತ್ತು ಷೆವರ್ಲೆ ತವೆರಾ ಎಂಪಿವಿಗಳಿಗೆ ಪೈಪೋಟಿ ನೀಡಲಿದೆ.
ಇವಾಲಿಯಾ ಎನ್ನುವುದು ಭಾರತದ ಮಾರುಕಟ್ಟೆಗೆ ಆಗಮಿಸುವ ಎಂಪಿವಿಗೆ ಕಂಪನಿ ಇಟ್ಟ ಹೆಸರು. ಜಾಗತಿಕವಾಗಿ ಇದಕ್ಕೆ ಎನ್ ವಿ200 ಮಿನಿವ್ಯಾನ್ ಎಂದು ಹೆಸರು. ಈ ಎಂಪಿವಿ ಪ್ರಯಾಣಿಕ ಸವಾರಿಗೆ ಮಾತ್ರವಲ್ಲದೇ ವಾಣಿಜ್ಯ ಉದ್ದೇಶಗಳಿಗೂ ಬಳಸಬಹುದು.
ಇವಾಲಿಯಾ ಎಂಪಿವಿ ನೋಡಲು ಮಾರುತಿ ಆಮ್ನಿಯ ಪರಿಷ್ಕೃತ ಆವೃತ್ತಿಯಂತೆ ಕಾಣುತ್ತದೆ. ನಿಸ್ಸಾನ್ ಮತ್ತು ಅಶೋಕ್ ಲೇಲ್ಯಾಂಡ್ ಜಂಟಿ ಉದ್ಯಮದ ಮೂಲಕ ಈಗಾಗಲೇ ಹಗುರ ವಾಣಿಜ್ಯ ವಾಹನ ಉತ್ಪಾದಿಸಲು ಕೂಡ ನಿರ್ಧರಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








