ಬರುತ್ತಿದೆ ನಿಸ್ಸಾನ್‌ ಬ್ಯಾಟ್ಮನ್ ಕಾರು

By Nagaraja

ವಾರ್ನರ್ ಬ್ರೂಸ್ ಜತೆಗಿನ ಪಾಲುದಾರಿಕೆಯನ್ನು ಆಚರಿಸಲಿರುವ ನಿಸ್ಸಾನ್ ನೂತನ ಸ್ಪೆಷನ್ ಅಡಿಷನ್ ಡಾರ್ಕ್ ನೈಟ್ ರೈಸಸ್ ಜ್ಯೂಕ್ ನಿಸ್ಮೊ ಬ್ಯಾಟ್ಮನ್ ಕಾರುಗಳನ್ನು ಪರಿಚಯಿಸುತ್ತಿದೆ.

ನೂತನ ಸ್ಪೆಷಲ್ ಅಡಿಷನ್ ಕಾರುಗಳು ಡಾರ್ಕ್ ನೈಟ್ ರೈಸಸ್ ಜ್ಯೂಕ್ ನಿಸ್ಮೊ ಎಂಬ ಹೆಸರಿನಿಂದ ಅರಿಯಲ್ಪಡಲಿದ್ದು, ಅದೃಷ್ಟವಂತರಿಗೆ ಕಾರು ಗೆಲ್ಲುವ ಅವಕಾಶವೂ ಇದೆ. ಡಾರ್ಕ್ ನೈಟ್ ರೈಸಸ್ ಬ್ಯಾಟ್ಮನ್ ಚಿತ್ರ ಸರಣಿಯ ಹೊಸ ಚಿತ್ರವಾಗಿದೆ.

ನಿಸ್ಸಾನ್ ಬ್ಯಾಟ್ಮನ್ ಕಾರು

ನೂತನ ಬ್ಯಾಟ್ಮನ್ ಕಾರು 2013 ಜನವರಿ ತಿಂಗಳಲ್ಲಿ ಮಾರುಕಟ್ಟೆಗಿಳಿಯಲಿದ್ದು, ನಿಸ್ಸಾನ್‌ನ ಜನಪ್ರಿಯ ಜ್ಯೂಕ್ ನಿಸ್ಮೊ ತಲಹದಿಯಲ್ಲಿ ನಿರ್ಮಿಸಲ್ಪಟ್ಟಿದೆ. ಡಾರ್ಕ್ ನೈಟ್ ರೈಸಸ್ ಜ್ಯೂಕ್ ನಿಸ್ಮೊ ಕಾರು 200 ಪಿಎಸ್ 1.6 ಟರ್ಬೊ ಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಪವರ್ ಹಾಗೂ ನಿರ್ವಹಣೆ

ಪವರ್ ಹಾಗೂ ನಿರ್ವಹಣೆ

ಫ್ರಂಟ್ ವೀಲ್ ಡ್ರೈವ್ ಕಾರು ಆಗಿರುವ ನೂತನ ಡಾರ್ಕ್ ನೈಟ್ ರೈಸಸ್ ನಿಸ್ಸಾನ್ ಜ್ಯೂಕ್ ನಿಸ್ಮೊ ಕೇವಲ 7.8 ಸೆಕೆಂಡುಗಳಲ್ಲಿ 0-100 ಕಿಲೋ ಮೀಟರ್ ವೇಗ ವರ್ಧಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಬ್ಯಾಟ್ಮನ್‌ನಿಂದ ಸ್ಪೂರ್ತಿ ಪಡೆದು ಕಾರಿನಲ್ಲಿ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ.

ನಿಸ್ಸಾನ್ ಬ್ಯಾಟ್ಮನ್ ಕಾರು

ನಿಸ್ಸಾನ್‌‍ನ ಈ ಸ್ಪೆಷನ್ ಅಡಿಷನ್ ಕಾರಿನ ಒಳಗೂ ಹೊರಗೂ ಬ್ಯಾಟ್ಮನ್ ಶೈಲಿ ನೀಡಲಾಗಿದೆ.

ನಿಸ್ಸಾನ್ ಬ್ಯಾಟ್ಮನ್ ಕಾರು

ನಿಸ್ಸಾನ್ ಬ್ಯಾಟ್ಮನ್ ಕಾರಿಗೆ ಮ್ಯಾಟ್ ಬ್ಲ್ಯಾಕ್ ಫಿನಿಶಿಂಗ್ ಟಚ್ ನೀಡಲಾಗಿದೆ. ಹಾಗೆಯೇ ಫ್ರಂಟ್ ಗ್ರಿಲ್ ಹಾಗೂ ಬೂಟ್‌ಗೆ ಅಲ್ಯೂಮಿನಿಯಂ ಬ್ಯಾಟ್ ಬ್ಯಾಡ್ಜ್ ಲಗತ್ತಿಸಲಾಗಿದೆ.

ನಿಸ್ಸಾನ್ ಬ್ಯಾಟ್ಮನ್ ಕಾರು

ಕಾರಿನ ಆಂತರಿಕ ವಿನ್ಯಾಸವನ್ನು ಕೂಡಾ ಬ್ಯಾಟ್ಮನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕಾರಿನ ಪ್ಯಾಡೆಲ್, ಹೆಡ್ ರೆಸ್ಟ್ ಹಾಗೂ ಸೀಟ್‌ಗಳಲ್ಲೂ ನಿಮಗೆ ಬ್ಯಾಟ್ಮನ್ ಲೊಗೊ ಕಾಣಸಿಗಬಹುದು.

ನಿಸ್ಸಾನ್ ಬ್ಯಾಟ್ಮನ್ ಕಾರು

ನಿಸ್ಸಾನ್ ಡಿಸೈನ್ ಯುರೋಪ್ ನೂತನ ಬ್ಯಾಟ್ಮನ್ ಜ್ಯೂಕ್ ನಿಸ್ಮೊ ಕಾರನ್ನು ವಿನ್ಯಾಸಗೊಳಿಸಿದೆ. ಅಂತರ್ಜಾಲ ಹಾಗೂ ಆನ್‌ಲೈನ್ ಮುಖಾಂತರವು ಕಾರು ಮಾರಾಟ ಲಭ್ಯ.

ನಿಸ್ಸಾನ್ ಬ್ಯಾಟ್ಮನ್ ಕಾರು

ಬ್ಯಾಟ್ಮನ್ ಕಾರು ವಿಜೇತ ಅದೃಷ್ಟಶಾಲಿಗಳನ್ನು ಫೆಬ್ರವರಿ ಅಥವಾ ಮಾರ್ಚ್ ಆರಂಭದಲ್ಲಿ ನಿಸ್ಸಾನ್ ಘೋಷಿಸುವ ಸಾಧ್ಯತೆಯಿದೆ.

ನಿಸ್ಸಾನ್ ಬ್ಯಾಟ್ಮನ್ ಕಾರು

ಬ್ಲ್ಯಾಕ್ ಆಂಡ್ ರೆಡ್ ಅಲಾಯ್ ವೀಲ್‌ ನೋಟ

ನಿಸ್ಸಾನ್ ಬ್ಯಾಟ್ಮನ್ ಕಾರು

ಡಾರ್ಕ್ ನೈಟ್ ರೈಸಸ್ ನಿಸ್ಸಾನ್ ಜ್ಯೂಕ್ ನಿಸ್ಮೊ

More from DriveSpark

Article Published On: Tuesday, December 11, 2012, 16:08 [IST]
English summary
Nissan has unveiled the special edition Dark Knight Rises Juke Nismo to celebrate its partnership with Warner Bros
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+