ನಿಸ್ಸಾನ್ ಹೊಸ ಕಾರಿನ ಹೆಸರು "ಆಮಂತ್ರಣ"!
ಇನ್ವಿಟೇಷನ್ ಅಂದ್ರೆ ಬೃಹತಾದ ಐದು ಸೀಟಿನ ಹ್ಯಾಚ್ ಬ್ಯಾಕ್ ಕಾರು. ವಿನ್ಯಾಸ ನೋಡಲು ಹೋಂಡಾ ಜಾಝ್ ನಂತೆ ಇದೆ. ನೂತನ ಇನ್ವಿಟೇಷನ್ ಫೋರ್ಡ್ ಫಿಯೆಸ್ಟಾ ಮತ್ತು ಫೋಕ್ಸ್ ವ್ಯಾಗನ್ ಕಾರುಗಳಿಗೆ ಪೈಪೋಟಿ ನೀಡುವ ಕೆಟಗರಿಯಲ್ಲಿದೆ. ಇದು ಅಡ್ವಾನ್ಸಡ್ ಟೆಕ್ನಾಲಜಿ ಹೊಂದಿದ್ದು, ಹಗುರ ಮತ್ತು ಇಂಧನ ದಕ್ಷತೆಯ ಫೀಚರುಗಳನ್ನು ಹೊಂದಿದೆ.
ನೂತನ ಇನ್ವಿಟೇಷನ್ ಕಾರಿನ ಚಾಲನೆ ಅನುಭವ "ಫನ್" ಆಗಿರಲಿದೆ ಎಂಬ ಭರವಸೆ ನಿಸ್ಸಾನ್ ಕಡೆಯಿಂದ ಸಿಕ್ಕಿದೆ. ಈ ಕಾರು ಸಾಕಷ್ಟು ಅಡ್ವಾನ್ಸಡ್ ಟೆಕ್ನಾಲಜಿ ಫೀಚರುಗಳನ್ನು ಹೊಂದಿರಲಿದೆ. ಅಂದರೆ ಎವಿಎಂ, ಬಿ-ಸೆಗ್ಮೆಂಟ್ ಕಾರುಗಳಲ್ಲಿರುವಂತಹ ಸುರಕ್ಷತೆಯ ತಂತ್ರಜ್ಞಾನಗಳು ಇರಲಿವೆ. ಹೆಚ್ಚು ಸುರಕ್ಷತೆ ಫೀಚರುಗಳ ಮೂಲಕ ಚಾಲಕ ಭಯವಿಲ್ಲದೇ ವಾಹನ ಚಾಲನೆ ಮಾಡಬಹುದೆಂದು ಕಂಪನಿ ಹೇಳಿದೆ.
ಮುಖ್ಯವಾಗಿ ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿ ನೂತನ ಇನ್ವಿಟೇಷನ್ ಹೊರತಂದಿದೆ. ಈ ಕಾರು ಭಾರತಕ್ಕೆ ಆಗಮಿಸುವ ಕುರಿತು ಯಾವುದೇ ಖಚಿತ ಮಾಹಿತಿ ದೊರಕಿಲ್ಲ. ಆದರೆ ಈ ಕಾರಿನ ವಿನ್ಯಾಸ, ತಂತ್ರಜ್ಞಾನ ಗಮನಿಸಿದರೆ ಈ ಕಾರು ಭಾರತದ ರಸ್ತೆಗೂ ಸೂಕ್ತ ಎಂದೆನಿಸುತ್ತದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









