ಹುರ್ರೇ... ಕೊನೆಗೂ ಕಾರು ಹಕ್ಕಿಯಂತೆ ಹಾರಿಬಿಡ್ತು!

ಹಕ್ಕಿಯಂತೆ ಹಾರುವ ಆಸೆ ಮನುಷ್ಯರಿಗೆ ಹುಟ್ಟಿ ಬಹಳಷ್ಟು ದಶಕಗಳು ಕಳೆದಿವೆ. ಇದೀಗ ಮಾನವ ಕಾರನ್ನು ವಿಮಾನದಂತೆ ಹಾರಿಸಲು ಹೊರಟಿದ್ದಾನೆ. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದಾನೆ ಅಂದರೆ ನಂಬ್ತಿರಾ?

ನೆದರ್‌ಲ್ಯಾಂಡಿನ ಪಾಲ್-ವಿ ಯುರೋಪ್ ಎನ್‌ವಿ ಕಂಪನಿಯ ಹಾರುವ ಕಾರಿನ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ಕೊನೆಗೊಂಡಿದೆ. ವೈಯಕ್ತಿಕ ಹಾರಾಟ ಮತ್ತು ಭೂ ವಾಹನ(ಪಾಲ್-ವಿ)ವನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಾರಿಸಲಾಯಿತು. ಈ ಕಾರು ಹೆಲಿಕಾಫ್ಟರಿನಂತೆ ಹಾರಾಡಿ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದು ವಿಶೇಷ.

ನೆದರ್‌ಲ್ಯಾಂಡಿನ ಎಂಜಿನಿಯರುಗಳ ಗುಂಪು ಈ ಹಾರುವ ಕಾರನ್ನು ವಿನ್ಯಾಸ ಮಾಡಿದ್ದಾರೆ. ಡಚ್ ನ್ಯಾಷನಲ್ ಏರೊಸ್ಪೇಸ್ ಲ್ಯಾಬೋರೆಟರಿ ಮತ್ತು ಡೆಲ್ಫ್ ಯುನಿವರ್ಸಿಟಿ ಕೂಡ ಈ ಹಾರುವ ಕಾರನ್ನು ಅಭಿವೃದ್ಧಿಪಡಿಸಲು ನೆರವಾಗಿವೆ.

ಈ ಹಾರುವ ಕಾರಿನ ಕಾನ್ಸೆಪ್ಟ್ ಮಾದರಿಯನ್ನು 2008ರಲ್ಲಿ ಅನಾವರಣ ಮಾಡಲಾಗಿತ್ತು. 2009ರಲ್ಲಿ ಇದನ್ನು ಒಮ್ಮೆ ಟೆಸ್ಟ್ ಮಾಡಲಾಗಿತ್ತು. ಆದರೆ ಆಗ ಸರಕಾರದ ನೀತಿನಿಯಮಗಳು ಹಾರುವ ಕಾರಿಗೆ ಪೂರಕವಾಗಿರಲಿಲ್ಲ. ನೂತನ ಹಾರುವ ಕಾರು ಒಂದು ಟ್ಯಾಂಕ್ ಇಂಧನದಲ್ಲಿ ರಸ್ತೆಯಲ್ಲಿ 560 ಕಿ.ಮೀ. ದೂರ ಸಂಚಾರಿಸಬಹುದು ಅಥವಾ ಆಕಾಶದಲ್ಲಿ 1200 ಕಿ.ಮೀ. ದೂರ ಹಾರಬಲ್ಲದು.

ಈ ಕಾರು ರಸ್ತೆಯಲ್ಲಿ ಕಾರಿನಂತೆ ಚಲಿಸಬಲ್ಲದು. ಆಕಾಶದಲ್ಲಿ ವಿಮಾನದಂತೆ ಹಾರಬಲ್ಲದು. ಅಷ್ಟೇ ಅಲ್ಲ. ಇದನ್ನು ಬೈಕ್‌ನಂತೆ ರೈಡ್ ಮಾಡಲು ಕೂಡ ಸಾಧ್ಯವಿದೆ. ಖಾಸಗಿ ಕಂಪನಿಗಳ ಉದ್ಯಮಿಗಳಿಗೆ, ವಿಐಪಿಗಳಿಗೆ, ರಾಜಕಾರಣಿಗಳ ನಿತ್ಯ ಸವಾರಿಯನ್ನು ಇದು ಸುಲಭಗೊಳಿಸಲಿದೆ ಎಂದು ಕಂಪನಿ ಹೇಳಿದೆ.

ಸುಮಾರು 20-30 ಗಂಟೆ ತರಬೇತಿ ನೀಡಿ ಈ ಹಾರುವ ಕಾರಿನ ಪರವಾನಿಗೆ ಪಡೆಯಬಹುದಂತೆ. ಇದು ಸುಮಾರು 165 ಮೀಟರ್ ಎತ್ತರದಲ್ಲಿ ಹಾರಬಲ್ಲದು. ಈಗ ಹೆಚ್ಚಿನ ವಾಹನಪ್ರೇಮಿಗಳು ಹಾರುವ ಕನಸು ಕಾಣಲು ಶುರು ಮಾಡಿದ್ದಾರಂತೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Tuesday, April 3, 2012, 14:56 [IST]
English summary
The PAL-V has conducted numerous test flying car over the last two weeks at the Gilze Rijen Airport located in the Netherlands.The new flying car can fly a distance of 560km or drive 1200 km on land using one tank of fuel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+