ತೇಜಸ್ವಿ ಹುಟ್ಟುಹಬ್ಬ: ಹಳೆಜೀಪು, ಸ್ಕೂಟರ್ ನೆನಪು
ತೇಜಸ್ವಿ ಕುರಿತು ಅವರ ಒಡನಾಡಿಗಳು, ಅಭಿಮಾನಿಗಳು, ಆಪ್ತರು ಸಾಕಷ್ಟು ಬರೆದಿದ್ದಾರೆ. ಆ ಬರಹಗಳಲ್ಲಿ ಅವರ ಸ್ಕೂಟರ್, ಜೀಪುಗಳ ಕುರಿತೂ ಕೊಂಚ ಮಾಹಿತಿಗಳು ದೊರಕುತ್ತವೆ. ಜೀಪು, ಸ್ಕೂಟರ್ ಮತ್ತು ತೇಜಸ್ವಿ ಕುರಿತಾಗಿ ಹಲವು ಸ್ವಾರಸ್ಯಕರ ಸಂಗತಿಗಳಿವೆ.
ದೂರದೂರಿಗೆ ಪ್ರಯಾಣಿಸಲು ತೇಜಸ್ವಿ ಹೆಚ್ಚಾಗಿ ಜೀಪು ಬಳಸುತ್ತಿದ್ದರು. ಹಳೆ ಜೀಪು ದಾರಿ ಮಧ್ಯೆ ಕೈಕೊಟ್ಟು ಪಜೀತಿಯಾದ ಹಲವು ಸಂದರ್ಭಗಳನ್ನು ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ. ವಿಶೇಷವೆಂದರೆ ತೇಜಸ್ವಿಗೆ ವಾಹನ ರಿಪೇರಿ ಕುರಿತೂ ಜ್ಞಾನವಿತ್ತು.
ಈಗಲೂ ಮೂಡಿಗೆರೆಯ ತೋಟದ ಮನೆಯ ಮೂಲೆಯಲ್ಲಿ ಪೂರ್ಣ ಚಂದ್ರ ತೇಜಸ್ವಿಯವರ ಸ್ಕೂಟರನ್ನು ಪ್ಯಾಕ್ ಮಾಡಿಡಲಾಗಿದೆ. ಅವರ ಸ್ಕೂಟರ್ ಲೆಕ್ಕವಿಲ್ಲದಷ್ಟು ಸಲ ಕೆಟ್ಟು ಹೋಗುತ್ತಿತ್ತಂತೆ. ಅದಕ್ಕೆ ಹೆಚ್ಚಿನ ಜನರು ಅದನ್ನು ಮಾರಿ ಬೇರೊಂದು ಖರೀದಿಸಿ ಅಂತ ಪುಕ್ಕಟೆ ಸಲಹೆ ನೀಡುತ್ತಿದ್ದರು.
ಆದರೆ ತೇಜಸ್ವಿಗೆ ಸ್ಕೂಟರ್ ರಿಪೇರಿ ಗೊತ್ತಿತ್ತು. ಹಳೆ ಸ್ಕೂಟರೆಂದು ಮಾರದೆ ರಿಪೇರಿ ಮಾಡಿ ಬಳಸುತ್ತಿದ್ದರು. ಅವರ ಸ್ಕೂಟರ್ ಕುರಿತಾದ ಇನ್ನೊಂದು ಸ್ವಾರಸ್ಯವೆಂದರೆ ಅದಕ್ಕೆ ಹಿಂದಿನ ಸೀಟೇ ಇರಲಿಲ್ಲವಂತೆ. ಅದ್ಯಾಕೆ ಅನ್ನೋದಕ್ಕೂ ಕಾರಣವಿದೆ.
ಸ್ಕೂಟರ್, ಬೈಕ್ ಹಿಂದೆ ಕುಳಿತವರು ಹೆಚ್ಚಾಗಿ ಮಾತನಾಡುತ್ತಾರೆ. ಕೆಲವರು ಸ್ಕೂಟರ್ ಹಿಂದೆ ಕುಳಿತು ವಟಗುಟ್ಟುತ್ತಿದ್ದರು ಮತ್ತು ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುತ್ತಿದ್ದರು. ಅದು ಅವರಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಅದಕ್ಕೆ ಸ್ಕೂಟರಿನ ಹಿಂದಿನ ಸೀಟು ತೆಗೆದಿದ್ದಾರೆ ಎಂದು ಹೇಳಲಾಗಿದೆ.
ತೇಜಸ್ವಿಗೆ ಎಲೆಅಡಕೆ ತಿನ್ನುವ ಅಭ್ಯಾಸವೂ ಇತ್ತು. ಎಲೆಅಡಿಕೆ ತಿಂದು ಉಗಿದಾಗ ಹಿಂದೆ ಕುಳಿತವರ ಮೇಲೆ ಬೀಳುತ್ತದೆ ಎಂಬ ಕಾರಣವೂ ಸ್ಕೂಟರ್ ಹಿಂದಿನ ಸೀಟು ತೆಗೆಯಲು ಕಾರಣವಂತೆ.
ಡಾ.ಬಿ.ಆರ್.ಸತ್ಯನಾರಾಯಣ ಬರೆದ ತೇಜಸ್ವಿ ಡ್ರೈವಿಂಗ್ ಮತ್ತು ಸಾಹಿತ್ಯ ಲಹರಿ ಲೇಖನ ಓದಲು ಕೆಳಗಿನ ಲಿಂಕ್ ಪ್ರವೇಶಿಸಿರಿ.


Click it and Unblock the Notifications









