ಪ್ರೀಮಿಯರ್ ಕಂಪನಿಯಿಂದ ಎರ್ಟಿಗಾ ಮಾದರಿಯ ಎಂಪಿವಿ

ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಪರಿಚಯಿಸದ ನಂತರ ಹೆಚ್ಚಿನ ಕಂಪನಿಗಳ ಕಣ್ಣು ಮಲ್ಟಿ ಪರ್ಪೊಸ್ ವಾಹನ(ಎಂಪಿವಿ)ಗಳತ್ತ ನೆಟ್ಟಿದೆ. ಇದೀಗ ಪದ್ಮಿನಿ ಖ್ಯಾತಿಯ ಪ್ರೀಮಿಯರ್ ಕಂಪನಿಯು ಆರು ಸೀಟಿನ ಎಂಪಿವಿ ಹೊರತರಲು ಯೋಜಿಸಿದೆ. ಕಂಪನಿಯು ಈಗಾಗಲೇ ಝೊಟೈ ಎಂಬ ಎಂಪಿವಿಯನ್ನು ಹೊರತಂದಿದೆ. ಇದು ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ದೇಶದ ರಸ್ತೆಗೆ ಪ್ರೀಮಿಯರ್ ಕಂಪನಿಯು ಇತ್ತೀಚೆಗೆ ರಿಯೊ ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಪರಿಚಯಿಸಿತ್ತು. ಪ್ರೀಮಿಯರ್ ಎಂಪಿವಿ ವಿಶಾಲ ಸ್ಥಳಾವಕಾಶ ಹೊಂದಿರಲಿದ್ದು, ಎರಡು ಸಾಲಿನ ಸಮಾನಂತರ ಸೀಟುಗಳನ್ನು ಹೊಂದಿರಲಿದೆ. ಈ ಎಂಪಿವಿಯಲ್ಲಿ ಲಗೇಜ್ ಸ್ಥಳಾವಕಾಶವೂ ವಿಶಾಲವಾಗಿರಲಿದೆ ಎಂದು ವರದಿಗಳು ಹೇಳಿವೆ.

ನೂತನ ಪ್ರೀಮಿಯರ್ ಎಂಪಿವಿ ಫಿಯೆಟ್ ಕಂಪನಿಯ 1.3 ಲೀಟರಿನ ಮಲ್ಟಿ ಜೆಟ್ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದೇ ಎಂಜಿನ್ ಪ್ರೀಮಿಯರ್ ರಿಯೊ ಸ್ಪೋರ್ಟ್ಸ್ ಕಾರಿನಲ್ಲೂ ಇದೆ. ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿರುವ ನೂತನ ಎಂಪಿವಿ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಈಗಾಗಲೇ ಕಂಪನಿಯು ಪ್ರೀಮಿಯರ್ ಎಂಪಿವಿಯನ್ನು ದೇಶದ ವಿವಿಧ ಭಾಗಗಳಲ್ಲಿ ಟೆಸ್ಟ್ ನಡೆಸುತ್ತಿರುವುದು ಪತ್ತೆಯಾಗಿದೆ. ಆದರೆ ಕಂಪನಿಯು ನೂತನ ಎಂಪಿವಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೊಸ ಎಂಪಿವಿ ದರ ಸುಮಾರು 9 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

More from DriveSpark

Article Published On: Wednesday, June 27, 2012, 9:56 [IST]
English summary
At a time when the MPV race is hotting up with the launch of Maruti Suzuki's sensational Ertiga and many more to come, reports are that Indian carmaker Premier is also planning to launch a six seater MPV. Reports are that Premier is planning to introduce the Zotye Multiplan Langyue MPV in the country which is being sold in the Chinese market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+