ಪ್ರೀಮಿಯರ್ ರಿಯೊ ಡೀಸೆಲ್ ಕಾರು ರಸ್ತೆಗೆ, ದರ 6.7 ಲಕ್ಷ ರು.
ದೇಶದಲ್ಲಿ ಡೀಸೆಲ್ ಎಂಜಿನಿನ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಂಪನಿಯು ನೂತನ ರಿಯೊ ಡೀಸೆಲ್ ಕಾರನ್ನು ಪರಿಚಯಿಸಿದೆ. ಇದು ಫಿಯೆಟ್ ಎಂಜಿನ್ ಹೊಂದಿರುವುದರಿಂದ ಕಾರ್ಯಕ್ಷಮತೆ ಬಗ್ಗೆ ತಕರಾರು ಇಲ್ಲ.
ಇದಕ್ಕೂ ಮುನ್ನ ಡೀಸೆಲ್ ಎಂಜಿನಿನ ರಿಯೊ ಕಾರು ಆಗಮಿಸಿತ್ತು. ಆದರೆ ಅದು ಬಿಎಸ್4 ಮಾನದಂಡಗಳಿಗೆ ಸೂಕ್ತವಾಗಿರಲಿಲ್ಲ. ಹೀಗಾಗಿ ಮಹಾನಗರಗಳಲ್ಲಿ ಪ್ರೀಮಿಯರ್ ಕಂಪನಿಯು ರಿಯೊ ಕಾರುಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಆದರೆ ನೂತನ ರಿಯೊ ಡೀಸೆಲ್ ಆವೃತ್ತಿಯು ಬಿಎಸ್4 ಆವೃತ್ತಿಯಾಗಿದೆ.
ಹೊಸ ಪ್ರೀಮಿಯರ್ ರಿಯೊ ಡೀಸೆಲ್ ಎಂಜಿನ್ 72 ಅಶ್ವಶಕ್ತಿ ಮತ್ತು 183 ಟಾರ್ಕ್ ಪವರ್ ನೀಡುತ್ತದೆ. ನೂತನ ರಿಯೊ ಮೈಲೇಜ್ ಪ್ರತಿಲೀಟರ್ ಡೀಸೆಲಿಗೆ 19 ಕಿ.ಮಿ. ದೇಶದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ರಿಯೊ ಡೀಸೆಲ್ ಆಗಮನಕ್ಕೆ ಇದು ಸೂಕ್ತ ಸಮಯವೂ ಹೌದು.
ನೂತನ ರಿಯೊ ಡೀಸೆಲ್ ಆಗಮನದ ನಂತರ ಪ್ರೀಮಿಯರ್ ಕಂಪನಿಯ ಕಾರು ಮಾರಾಟ ಏರಿಕೆಯಾಗುವುದೇ ಕಾದುನೋಡಬೇಕಿದೆ. ದೇಶದಲ್ಲಿ ಸದ್ಯ ಪ್ರೀಮಿಯರ್ ಕಂಪನಿಯು 55 ಡೀಲರುಗಳನ್ನು ಹೊಂದಿದೆ. ಪ್ರಸಕ್ತ ವರ್ಷ ಇನ್ನಷ್ಟು ಡೀಲರ್ಷಿಪ್ ಆರಂಭ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಕಂಪನಿಯು ಈ ವರ್ಷ 100 ಶೋರೂಂ ಮತ್ತು 200 ಸರ್ವಿಸ್ ಸೆಂಟರ್ ತೆರೆಯಲು ಉದ್ದೇಶಿಸಿದೆ.


Click it and Unblock the Notifications









