ರಿಯೊ ಕಾರಿಗೆ ಫಿಯೆಟ್ ಡೀಸೆಲ್ ಎಂಜಿನ್ ಸಾಥ್

ಫಿಯೆಟ್ ಕಂಪನಿಯ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನನ್ನು ರಿಯೊ ಸಣ್ಣ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲಿಗೆ ಅಳವಡಿಸುವ ಕುರಿತು ಪ್ರೀಮಿಯರ್ ಲಿಮಿಟೆಡ್ ಖಚಿತಪಡಿಸಿದೆ. ಇದೀಗ ಕಂಪನಿಯ ಕಡೆಯಿಂದ ಈ ಎಂಜಿನ್ ಕುರಿತು ಅಧಿಕೃತ ಮಾಹಿತಿಗಳು ಕನ್ನಡ ಡ್ರೈವ್ ಸ್ಪಾರ್ಕಿಗೆ ಲಭ್ಯವಾಗಿವೆ.

ನೂತನ 1.3 ಲೀಟರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಶಕ್ತಿಶಾಲಿ ಎಂಜಿನಾಗಿದೆ. ಇದು 4 ಸಾವಿರ ಆವರ್ತನಕ್ಕೆ 72 ಅಶ್ವಶಕ್ತಿ ಮತ್ತು 1,800ರಿಂದ 2,400 ಆವರ್ತನದ ನಡುವೆ 183 ಎನ್ಎಂ ಟಾರ್ಕ್ ಪವರ್ ನೀಡಲಿದೆ. ಪ್ರೀಮಿಯರ್ ಕಂಪನಿಗೆ ಈ ಎಂಜಿನನ್ನು ಫಿಯೆಟ್ ಪೂರೈಕೆ ಮಾಡಲಿದೆ.

ಕಡಿಮೆ ಅಬಕಾರಿ ಸುಂಕ ಪಡೆಯುವ ಉದ್ದೇಶದಿಂದ ಪ್ರೀಮಿಯರ್ ರಿಯೊ ಎಸ್ ಯುವಿ ಉದ್ದ ನಾಲ್ಕು ಮೀಟರಿಗಿಂತ ಕಡಿಮೆ ಇದೆ. ನೂತನ ಡೀಸೆಲ್ ರಿಯೊ ದರ ಹಳೆಯ ಪೆಟ್ರೋಲ್ ಆವೃತ್ತಿಗಿಂತ ಸುಮಾರು 60 ಸಾವಿರ ರು.ನಷ್ಟು ದುಬಾರಿಯಾಗಿರುವ ನಿರೀಕ್ಷೆಯಿದೆ.

ದೇಶದ ವಾಹನ ತಯಾರಿಕಾ ಕಂಪನಿ ಪ್ರೀಮಿಯರ್, ರಿಯೊ ಕಾಂಪ್ಯಾಕ್ಟ್ ಕಾರಿನ ಪೆಟ್ರೊಲ್ ಆವೃತ್ತಿಯನ್ನು ಕೆಲವು ತಿಂಗಳ ಹಿಂದೆ ಪರಿಚಯಿಸಿತ್ತು. ಈ ಸ್ಪೋರ್ಟ್ಸ್ ಯುಟಿಲಿಟಿ ವಾಹನದ ದರ ಕೇವಲ 4.70 ಲಕ್ಷ ರುಪಾಯಿ. ಇದು 1.2 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 76 ಹಾರ್ಸ್ ಪವರ್ ಮತ್ತು 104 ಎನ್ಎಂ ಟಾರ್ಕ್ ನೀಡುತ್ತದೆ.

Most Read Articles

Kannada
English summary
Indian automobile and commercial vehicle manufacturer Premier Limited confirmed that the Fiat Multijet turbo diesel engine to Compact SUV Rio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X