ಪ್ರೀಮಿಯರ್ ರಿಯೊಗೆ ಇನ್ಮುಂದೆ ಬಿಎಸ್4 ಮಾನ್ಯತೆ

ದೇಶದ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಪ್ರೀಮಿಯರ್ ರಿಯೊ ಇದೀಗ ಹೊಸ ಡೀಸೆಲ್ ಎಂಜಿನ್ ಮೂಲಕ ಇನ್ನಷ್ಟು ಶಕ್ತಿಶಾಲಿಯಾಗಲಿದೆ. ಇದೀಗ ಫಿಯೆಟ್ ಮೂಲದ ಬಿಎಸ್4 ಮಾನ್ಯತೆ ಪಡೆದಿರುವ 1.3 ಲೀಟರ್ ಡೀಸೆಲ್ ಮಲ್ಟಿಜೆಟ್ ಎಂಜಿನ್ ಅಳವಡಿಸಿಕೊಳ್ಳುತ್ತಿದೆ. ಈ ಎಂಜಿನ್ 87 ಅಶ್ವಶಕ್ತಿ ನೀಡುತ್ತದೆ. ಮಾರುತಿ ಸ್ವಿಫ್ಟ್ ಸೇರಿದಂತೆ ದೇಶದಲ್ಲಿ ಸುಮಾರು ಹತ್ತು ಡೀಸೆಲ್ ಕಾರುಗಳಲ್ಲಿ ಇದೇ ಎಂಜಿನ್ ಇರುವುದು ವಿಶೇಷ.

"ಡೀಸೆಲ್ ರಿಯೊ ಕಾರನ್ನು ಶೀಘ್ರದಲ್ಲಿ ಹೊರತರಲಿದ್ದೇವೆ" ಎಂದು ಪ್ರೀಮಿಯರ್ ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ರಾಕೇಶ್ ಮೆಹ್ತಾ ಹೇಳಿದ್ದಾರೆ. ಅವರು ಟ್ರಯಲ್ ಲಾಂಚ್ ಸಂದರ್ಭದಲ್ಲಿ ವರದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.

ನೂತನ ಡೀಸೆಲ್ ಆವೃತ್ತಿ ಸೇರಿದರೆ ರಿಯೋ ಬಳಗದಲ್ಲಿ ಒಟ್ಟು ನಾಲ್ಕು ಆವೃತ್ತಿಗಳಿರಲಿವೆ. ಬಿಎಸ್4 ಮಾರುಕಟ್ಟೆಯಲ್ಲಿ ಈಗಿರುವ ಡೀಸೆಲ್ ಎಂಜಿನ್ ಕಾರು ಮಾರಾಟ ಮಾಡುವುದನ್ನು ಕಂಪನಿ ಸ್ಥಗಿತಗೊಳಿಸಿದೆ. ಇನ್ಮುಂದೆ ನೂತನ ಎಂಜಿನ್ ಮೂಲಕ ಮಾರುಕಟ್ಟೆಯಲ್ಲಿ ಪಾಲು ಹೆಚ್ಚಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.

ಈಗ ರಿಯೊ ಕಾರಿನಲ್ಲಿ 1,173ಸಿಸಿ(1.2 ಲೀಟರ್) ಪೆಟ್ರೋಲ್ ಎಂಜಿನ್ ಹೊಂದಿದೆ. ಎವಿಎಚ್ ತಂತ್ರಜ್ಞಾನ ಹೊಂದಿರುವ ಈ ಎಂಜಿನ್ 77 ಹಾರ್ಸ್ ಪವರ್ ನೀಡುತ್ತದೆ. ಪ್ರತಿಲೀಟರಿಗೆ 15 ಕಿ.ಮೀ. ಮೈಲೇಜ್ ನೀಡುತ್ತದೆ. 1,489 ಸಿಸಿಯ ಮಲ್ಟಿ ಜೆಟ್ ಡೀಸೆಲ್ ಎಂಜಿನ್ 65 ಹಾರ್ಸ್ ಪವರ್ ನೀಡುತ್ತದೆ. ಇದು ಪ್ರತಿಲೀಟರಿಗೆ 16 ಕಿ.ಮೀ. ಮೈಲೇಜ್ ನೀಡುತ್ತದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
India’s first and only compact SUV, as it terms itself, Premier Rio has got much more stronger with a new diesel engine. The compact SUV will now come with a Fiat based BSIV compliant 1.3-litre diesel MultiJet engine generating 87bhp.
Story first published: Saturday, March 31, 2012, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X