ಅತ್ತೆಮನೆಯಿಂದ ದುಬಾರಿ ಕಾರ್ ಗಿಫ್ಟ್ ಪಡೆದ ಚಿರಂಜೀವಿ ಸುಪುತ್ರ

ಮೆಗಾಸ್ಟಾರ್ ಚಿರಂಜೀವಿ ಸುಪುತ್ರ ರಾಮ್ ಚರಣ್ ಮದುವೆ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಜೊತೆ ಇಂದು(ಜೂನ್ 14) ಮುಂಜಾನೆ 7.30ರ ಶುಭ ಮಹೂರ್ತದಲ್ಲಿ ನಡೆದಿದೆ. ಆಂಧ್ರದಲ್ಲಿ ನಡೆಯುತ್ತಿರುವ ಈ ರಾಯಲ್ ಮದುವೆಯಲ್ಲಿ ಕನ್ನಡ ಡ್ರೈವ್ ಸ್ಪಾರ್ಕ್ ನಿರೀಕ್ಷಿಸಿದಂತೆ ದುಬಾರಿ ಕಾರೊಂದು ಮದುವೆ ಉಡುಗೊರೆಯಾಗಿ ಆಗಮಿಸಿದೆ.

ಮದುಮಗ ರಾಮ್ ಚರಣ್ ಸುಮಾರು 2 ಕೋಟಿ ರು. ಮೌಲ್ಯದ ನೂತನ ಆಸ್ಟನ್ ಮಾರ್ಟಿನ್ ವಿ8 ವ್ಯಾಂಟೇಜ್‌ನ್ನು ಮದುವೆ ಉಡುಗೊರೆಯಾಗಿ ಪಡೆದಿದ್ದಾರೆ. ಉಡುಗೊರೆಯಾಗಿ ನೀಡಿದ್ದು ರಾಮಚರಣ್ ಅತ್ತೆ ಮತ್ತು ಮಾವ ಎಂದು ವರದಿಗಳು ಹೇಳಿವೆ. ದುಬಾರಿ ಕಾರುಗಳೆಂದರೆ ರಾಮ್ ಚರಣಿಗೆ ಮೊದಲಿನಿಂದಲೂ ಅಚ್ಚುಮೆಚ್ಚು. ಇದೀಗ ಅತ್ತೆ ಮಾವನ ಉಡುಗೊರೆ ನೋಡಿ ರಾಮ್ ಚರಣ್ ಸಂತಸ ವ್ಯಕ್ತಪಡಿಸಿದ್ದಾರೆ.

Ram Charan Teja Gifted Aston Martin V8 Vantage

ಕೆಲವು ದಿನಗಳ ಹಿಂದೆ ಪ್ರಾಣಿಪ್ರಿಯೆ, ಉಪಾಸನಾ ತನ್ನ ಇನಿಯಾನಿಗೆ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಅತ್ತೆ ಮಾವ ಅತ್ಯಧಿಕ ಅಶ್ವಶಕ್ತಿಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆ ನಂತರ ಕುದುರೆ ಸವಾರಿ, ಕಾರು ಸವಾರಿ ಭಾರಿ ಜೋರಿರುವ ನಿರೀಕ್ಷೆಯಿದೆ.

ಆಸ್ಟನ್ ಮಾರ್ಟಿನ್ ವ್ಯಾಂಟೇಜ್ ಕಾರು ಸೂಪರ್ ಕಾರು ಮಾರುಕಟ್ಟೆಗೆ ಜಂಟಲ್ ಮ್ಯಾನ್ ತರಹ ಇತ್ತೀಚೆಗೆ ಆಗಮಿಸಿತ್ತು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಇಂತಹ ಕಾರುಗಳನ್ನು ಬಳಸಲಾಗಿತ್ತು. ಇದರ ವಿ8 ಎಂಜಿನ್ ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವಂತೆ ಸವಾರಿ ಮಾಡಲು ಸಹಕರಿಸುತ್ತದೆ.

ಆಸ್ಟನ್ ಮಾರ್ಟಿನ್ ವಿ8 ಕಾರು ಸುಮಾರು 430 ಅಶ್ವಶಕ್ತಿ ನೀಡುತ್ತದೆ. ಇದು ಎರಡು ಡೋರಿನ ಎರಡು ಸೀಟಿನ್ ಆಕರ್ಷಕ ವಿನ್ಯಾಸದ ಕಾರಾಗಿದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 189 ಕಿ.ಮೀ. ವೇಗದಲ್ಲಿ ಸಾಗಬಹುದು. ಈ ಕಾರಿನ ಮಾಹಿತಿ ಟಪ್ಪಣಿ ಓದಿ.

ಆಸ್ಟನ್ ಮಾರ್ಟಿನ್ ವಿ8 ವಂಟೆಜ್ ಮಾಹಿತಿ
* ಎರಡು ಡೋರ್, ಎರಡು ಸೀಟಿನ ಕೂಪೆ
* 4,735 ಸಿಸಿ ಪೆಟ್ರೋಲ್ ವಿ8 ಎಂಜಿನ್
* ಗೇರ್: 7 ಸ್ಪೀಡಿನ ಸ್ಪೋರ್ಟ್ ಶಿಫ್ಟ್ 2 ಗೇರ್ ಬಾಕ್ಸ್, ರಿಯರ್ ವೀಲ್ ಡ್ರೈವ್
* ದರ: ಸುಮಾರು 2 ಕೋಟಿ ರು.
* ಶಕ್ತಿ: 7,300 ಆವರ್ತನಕ್ಕೆ 430 ಹಾರ್ಸ್ ಪವರ್
* ಗರಿಷ್ಠ ವೇಗ: ಗಂಟೆಗೆ ಗರಿಷ್ಠ 189 ಕಿ.ಮೀ.
* ಆಕ್ಸಿಲರೇಷನ್: ಕೇವಲ 4.5 ಸೆಕೆಂಡಿನಲ್ಲಿ 0-62 ಕಿ.ಮೀ. ವೇಗ

More from DriveSpark

Article Published On: Thursday, June 14, 2012, 9:58 [IST]
English summary
Tollywood actor Ram Charan Teja gets a brand new Aston Martin V8 Vantage as his marriage gift. This James Bond car has reportedly been gifted by his in-laws and Charan is said to be delighted with his gift. Ram Charan Teja wedding Gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+