ಸಾವಿರಾರು ಫೆರಾರಿ ಕಾರುಗಳ ಸಮ್ಮೀಳನ
ಇಂತಹ ಒಂದು ಅಪೂರ್ವ ಫೆರಾರಿ ಸಮ್ಮೀಳನವನ್ನು ಫೆರಾರಿ ಉತ್ತರ ಯುರೋಪ್ ಸಂಘಟನೆ ಆಯೋಜಿಸಿದೆ. ಇದಕ್ಕೂ ಮುನ್ನ 385 ಫೆರಾರಿ ಕಾರುಗಳು ಒಟ್ಟಿಗೆ ಸೇರಿದ ದಾಖಲೆಯಿತ್ತು. ಜಪಾನಿನಲ್ಲೊಮ್ಮೆ 490 ಸೂಪರ್ ಜೊತೆ ಸೇರಿ ದಾಖಲೆ ನಿರ್ಮಿಸಿದ್ದವು.
ಸೆಪ್ಟಂಬರ್ ಹದಿನೈದರಂದು ಸಾವಿರಾರು ಫೆರಾರಿ ಕಾರುಗಳ ಸಮ್ಮೀಳನವು ಹೊಸ ಗಿನ್ನಿಸ್ ದಾಖಲೆ ಮಾಡಲಿದೆ. ಈಗಾಗಲೇ ಸಿಲ್ವರ್ ಸ್ಟೋನ್ ನಲ್ಲಿ ನಡೆಯಲಿರುವ ಈ ಫೆರಾರಿ ಸಮ್ಮೀಳನದಲ್ಲಿ ಭಾಗವಹಿಸಲು ಸಾವಿರಕ್ಕೂ ಹೆಚ್ಚು ಫೆರಾರಿ ಕಾರುಗಳು ರಿಜಿಸ್ಟರ್ ಆಗಿವೆ.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ರಿಜಿಸ್ಟರ್ ಆದ ಪ್ರತಿ ಕಾರಿಗೆ 8 ಡಾಲರಿನಂತೆ ಫೆರಾರಿ ನಾರ್ತ್ ಯುರೋಪ್ ಸಂಘಟನೆಯು ವಾಹನ ಚಾರಿಟಿಗೆ ದೇಣಿಗೆ ನೀಡಲಿದೆ. ಸಾವಿರಾರು ಫೆರಾರಿ ಕಾರುಗಳ ಜಾಥ, ಸಣ್ಣಮಟ್ಟಿನ ರೇಸ್ ಇತ್ಯಾದಿಗಳೂ ಈ ಕಾರ್ಯಕ್ರಮದಲ್ಲಿವೆ.
ಅತ್ಯಧಿಕ ಅಶ್ವಶಕ್ತಿಯ ಸಾವಿರಾರು ಫೆರಾರಿ ಕಾರುಗಳ ಸಮ್ಮೀಳನ ವೀಕ್ಷಣೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಫೆರಾರಿ ಕಾರುಗಳನ್ನು ಕಣ್ತುಂಬಿಕೊಳ್ಳಲು ಬಯಸುವರು ವಿಮಾನ ಹತ್ತಬಹುದು.


Click it and Unblock the Notifications









