ರತನ್‌ ಟಾಟಾ ಹೇಳುವ ಮುನ್ನ ಒಂದು ಸಲಾಂ

By Nagaraja

ಜೆ. ಆರ್.ಡಿ ಅವರ ಅತ್ಯಂತ ನೆಚ್ಚಿನ ಶಿಷ್ಯ ರತನ್ ಟಾಟಾ 'ಟಾಟಾ ಸನ್ಸ್' ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಂದರೆ ಟಾಟಾ ಸಂಸ್ಥೆಗಳನ್ನು ನೋಡಿಕೊಳ್ಳುತ್ತಿರುವ ತಾಯಿ ಸಂಸ್ಥೆಯಲ್ಲಿ ಕಳೆದ 21 ವರ್ಷಗಳಿಂದ ದುಡಿದಿದ್ದಾರೆ.

ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್, ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಠ ವಿಭಾಗಗಳಲ್ಲಿ ರತನ್ ಟಾಟಾ ಅನುಸರಿಸಿದ ಆಧುನಿಕ ತಾಂತ್ರಿಕತೆಗಳು ಹಾಗೂ ಮುಂದಾಲೋಚನೆಗಳು ನಷ್ಟದಲ್ಲಿದ್ದ ಕಂಪನಿಯನ್ನು ಕೋಟಿಗಳಷ್ಟು ಲಾಭ ಗಳಿಸಿಕೊಡಲು ಸಾಧ್ಯವಾಗಿತ್ತು.

ಟಾಟಾ ಸಮೂಹವನ್ನು ವಿಶ್ವದ ಮಾರುಕಟ್ಟೆಯಲ್ಲೇ ಉನ್ನತ ಶಿಖರವನ್ನೇರಿಸಿದ ರತನ್ ಟಾಟಾ ಕಂಪನಿಯ ಆದಾಯವನ್ನು ದುಪ್ಪಟ್ಟುಗೊಳಿಸಿದರು. ರತನ್ ಟಾಟಾ ಅವರು ಸಮಯಕ್ಕೆ ಸರಿಯಾಗಿ ಕೈಗೊಂಡ ನಿರ್ಧಾರಗಳಿಂದಾಗಿ ಹಲವು ಪ್ರತಿಷ್ಠಿತ ವಿದೇಶಿ ಕಂಪನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಭಾರತದಲ್ಲೇ ಪೂರ್ಣವಾಗಿಯೂ ತಯಾರಿಸಿದ ದೇಶಿ ಕಾರನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಒದಗಿಸಿಕೊಟ್ಟ ಖ್ಯಾತಿಯು ಟಾಟಾ ಅವರಿಗೆ ಸಲ್ಲುತ್ತದೆ. ದೇಸಿ ಕಾರೊಂದನ್ನು ತಯಾರಿಸಿ ನೀಡಬೇಕೆಂಬ ಅವರ ಆಕಾಂಕ್ಷೆ ಟಾಟಾ ಇಂಡಿಕಾ ಮೂಲಕ ಸಾಕಾರಗೊಂಡಿತ್ತು.

1991ರಲ್ಲಿ ರತನ್ ಟಾಟಾ ಅವರು ಟಾಟಾ ಸಮೂಹದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. ದೇಶಕ್ಕೆ ಅತಿ ಅಗ್ಗದ ನ್ಯಾನೋ ಕಾರನ್ನು ಸನ್ಮಾನಿಸಿರುವ ರತನ್ ಟಾಟಾ ಕೆಲವು ಮೈಲುಗಲ್ಲು ಮೇಲೆ ಡ್ರೈವ್ ಸ್ಪಾರ್ಕ್ ಕಣ್ಣಾಯಿಸುತ್ತಿದೆ.

ಟಾಟಾ ಸಂಸ್ಥೆಯ ಸರ್ವಾಧಿಕಾರ

ಟಾಟಾ ಸಂಸ್ಥೆಯ ಸರ್ವಾಧಿಕಾರ

ಜೆ.ಆರ್. ಡಿ ಟಾಟಾ ಅವರಿಂದ 1991ನೇ ಇಸವಿಯಲ್ಲಿ ರತನ್ ಟಾಟಾ ಅವರು ಟಾಟಾ ಸಂಸ್ಥೆಯ ಸರ್ವಾಧಿಕಾರಿ ಹುದ್ದೆಯನ್ನು ವಹಿಸಿಕೊಂಡರು. ಆದರೆ ಅವರ ಆರಂಭಿಕ ಹಾದಿ ಸುಲಭವಾಗಿರಲಿಲ್ಲ. ಈ ನಡುವೆ ಕೆಚ್ಚೆದೆಯ ನಿಲುವು ತಾಳಿದ ರತನ್ ಟಾಟಾ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದರು.

ಮೊದಲ ಪ್ರಯಾಣಿಕ ಕಾರು

ಮೊದಲ ಪ್ರಯಾಣಿಕ ಕಾರು

1998ನೇ ಇಸವಿಯಲ್ಲಿ ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಾದ ಟಾಟಾ ಇಂಡಿಕಾ ಕಾರನ್ನು ದೇಶಕ್ಕೆ ಪರಿಚಯಿಸಲಾಯಿತು. ತಾನೊಬ್ಬ ಕೋಟ್ಯಧಿಪತಿ ಆಗಿರುವ ಹೊರತಾಗಿಯೂ ಇಂಡಿಕಾ ಕಾರಲ್ಲಿ ತಮ್ಮ ಕಚೇರಿಗೆ ತೆರಳಲು ರತನ್ ಟಾಟಾ ಯಾವುದೇ ಸಂಕೋಚ ತೋರುತ್ತಿರಲಿಲ್ಲ. ಜಾಗೀಕರಣದ ಅಂಗವಾಗಿ ತಮ್ಮ ಸಮೂಹವನ್ನು ವಿಶ್ವೆದೆಲ್ಲೆಡೆ ವ್ಯಾಪಿಸಿದ ಟಾಟಾ ವಿದೇಶಿ ಕಂಪನಿಗಳ ಮೇಲೂ ತಮ್ಮ ಪ್ರಾಬಲ್ಯ ಮೆರೆಯಲು ಪ್ರಾರಂಭಿಸಿದರು.

ಡೆವೂ ಹೆವಿ ಟ್ರಕ್ಸ್ ಖರೀದಿ

ಡೆವೂ ಹೆವಿ ಟ್ರಕ್ಸ್ ಖರೀದಿ

ಕೊರಿಯಾ ಮೂಲದ ಡೆವೂ ಹವಿ ಟ್ರಕ್ಸ್ ಕಮರ್ಷಿಯಲ್ ವೆಹಿಕಲ್ ಬ್ಯುಸಿನೆಸ್ 2004ರಲ್ಲಿ ಖರೀದಿಸಿದರು. ಇದಕ್ಕೂ ಮುನ್ನ 2000 ಇಸವಿಯಲ್ಲಿ ಯುಕೆ ಬ್ರಾಂಡ್‌ನ ಟೆಟ್ಲಿ ಸಂಸ್ಥೆಯನ್ನು ಟಾಟಾ ಟೀ 450 ದಶಲಕ್ಷ ಡಾಲರ್‌ಗೆ ಖರೀದಿಸಿತ್ತು.

ನ್ಯೂಯಾರ್ಕ್ ಶೇರು ಮಾರುಕಟ್ಟೆಯಲ್ಲಿ ಸ್ಥಾನ

ನ್ಯೂಯಾರ್ಕ್ ಶೇರು ಮಾರುಕಟ್ಟೆಯಲ್ಲಿ ಸ್ಥಾನ

ಟಾಟಾ ಸಮೂಹವನ್ನು ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆಸುವ ಮಹಾತ್ವಕಾಂಕ್ಷೆಯ ಫಲವಾಗಿ ಜಾಗತಿಕವಾಗಿಯೂ ಟಾಟಾ ಮೋಟಾರ್ಸ್ ಬಲಿಷ್ಠಗೊಳಿಸುವಲ್ಲಿ ರತನ್ ಟಾಟಾ ಪರಿಶ್ರಮ ವಹಿಸಿದ್ದರು. ಇದರಂತೆ 2004ರಲ್ಲಿ ನ್ಯೂಯಾರ್ಕ್ ಶೇರು ಮಾರುಕಟ್ಟೆ ಪಟ್ಟಿಯಲ್ಲೂ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ನ್ಯಾನೋ ಆಗಮನ

ನ್ಯಾನೋ ಆಗಮನ

2008ನೇ ಇಸವಿಯಲ್ಲಿ ದೇಶಕ್ಕೆ ಅತಿ ಅಗ್ಗದ ಕಾರನ್ನು ರತನ್ ಟಾಟಾ ಪರಿಚಯಿಸಿದರು. ಇದು ಗ್ರಾಹಕರಲ್ಲಿ ಭಾರಿ ಕುತೂಹಲ ಸೃಷ್ಟಿ ಮಾಡಲು ಸಾಧ್ಯವಾಗಿತ್ತು. ಕಾರಿನ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದ್ದರೂ ಅವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ರತನ್ ಟಾಟಾ ಯಶಸ್ವಿಯಾಗಿದ್ದರು.

ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿ

ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿ

ತಾನೊಬ್ಬ ಒಳ್ಳೆಯ ಮುಂದಾಳು ಹಾಗೂ ಸಂಘಟಕ ಎಂಬುದನ್ನು ಸಾಬೀತುಪಡಿಸಿದ್ದ ರತನ್ ಟಾಟಾ 2008ರಲ್ಲಿ ಅಮೆರಿಕ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿ ಮಾಡುವ ಮೂಲಕ ಸೆನ್ಸಷನಲ್ ಕ್ರಿಯೇಟ್ ಮಾಡಿದ್ದರು. ಆರಂಭದಲ್ಲಿ ಎಲ್ಲರಿಂದ ಟೀಕೆಗಳು ಬಂದಿದ್ದರೂ ಜಾಗ್ವಾರ್ ಮೂಲಕ ಲಾಭ ಪಡೆಯಲು ಯಶಸ್ವಿಯಾಗಿದ್ದರು.

ರತನ್ 'ಟಾಟಾ'

ರತನ್ 'ಟಾಟಾ'

ಜೆಆರ್‌ಡಿ ಟಾಟಾ ಅವರ ಉತ್ತರಾಧಿಕಾರಿಯಾಗಿ 21 ವರ್ಷಗಳ ಹಿಂದೆ ಟಾಟಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರತನ್ ಟಾಟಾ ಇದೀಗ ತಮ್ಮ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿವೃತ್ತಿ ಘೋಷಿಸುತ್ತಿದ್ದಾರೆ. ಇದರೊಂದಿಗೆ ಟಾಟಾ ಸಮೂಹದಲ್ಲಿ ರತನ್ ಟಾಟಾ ಅಧಿಪತ್ಯ ಕೊನೆಗೊಳ್ಳಲಿದೆ.

ಟಾಟಾ ಸಮೂಹದ ನೂತನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅಧಿಕಾರ ಸ್ವೀಕರಲಿಸಲಿದ್ದಾರೆ. ನೂರಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡಿರುವ ಟಾಟಾ ಸಮೂಹವನ್ನು ಬಹುರಾಷ್ಟ್ರೀಯ ಸಂಸ್ಥೆಯನ್ನಾಗಿಸಲು ಟಾಟಾ ಯಶಸ್ವಿಯಾಗಿದ್ದರು.

ಟಾಟಾ ಸಾಮ್ರಾಜ್ಯ

ಟಾಟಾ ಸಾಮ್ರಾಜ್ಯ

ಭಾರತೀಯ ಕಾರು ನಿರ್ಮಾಣವನ್ನು ಅಂತರಾಷ್ಟ್ರೀಯ ಗಮನ ಸಾಧಿಸಿದ ಟಾಟಾ ಸಾಧನೆಯನ್ನು ದೇಶದ ಆಟೋ ಮೊಬೈಲ್ ಜಗತ್ತು ಯಾವತ್ತೂ ನೆನಪಿಸಿಕೊಳ್ಳಲಿದೆ. ಇವತ್ತು ಟಾಟಾ ಸಮೂಹದ ಆದಾಯದ ಮೂರರಲ್ಲಿ ಎರಡು ಪಾಲು ವಿದೇಶಗಳಿಂದ ಸಿಗುತ್ತದೆ.

ಹಾಗಿದ್ದರೂ ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಹೊರಗುಳಿದರೂ ಕಂಪನಿಯ ಆಗು ಹೋಗುಗಳ ಮೇಲೆ ನಿಗಾ ವಹಿಸಲಿದ್ದಾರೆ.

More from DriveSpark

Article Published On: Friday, December 28, 2012, 15:12 [IST]
English summary
India's most powerful businessman Ratan Tata, will retire today, ending his 50-year journey with Tata Sons Group. Ratan Tata, who turns 75 today, will hand over the reins of the group to 44-year-old Cyrus Mistry, who was chosen his successor last year and formally appointed chairman earlier this month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+