ನ್ಯಾನೋಗೆ ನೇರ ಎದುರಾಳಿ; ರೆನೊದಿಂದ ಅಗ್ಗದ ಗಾಡಿ
ದೇಶದಲ್ಲಿ ಅತಿ ಅಗ್ಗದ ಕಾರು ಬಿಡುಗಡೆಗೊಳಿಸಿದ್ದ ಟಾಟಾ ಮೋಟಾರ್ಸ್‌ನ ನ್ಯಾನೋ ಅವಿಷ್ಕಾರಕ್ಕೆ ಪ್ರಬಲ ಪೈಪೋಟಿ ನೀಡಲು ನೂತನ ಕಾರು ತಯಾರಕ ಕಂಪನಿಯಾದ ರೆನೊ ಚಿಂತನೆ ನಡೆಸುತ್ತಿದೆ.
ದೇಶಿಯ ಮಾರುಕಟ್ಟೆಗೆ ಹೊಂದಿಕೆಯಾಗುವ ರೀತಿಯಲ್ಲಿ ನೀರ್ಮಾಣ ಮಾಡಲಿರುವ ರೆನೊ ಎರಡು ಅಗ್ಗದ ಕಾರುಗಳನ್ನು ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಟಾಟಾ ವಿರೋಧಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಯೋಜನೆ ಹಾಕಿಕೊಂಡಿದೆ.
ಜಪಾನ್ ಪಾಲುದಾರಿಕೆ ಸಂಸ್ಥೆಯಾದ ನಿಸ್ಸಾನ್ ಜತೆಸೇರಿ ರೆನೊ ತನ್ನ ಮೊದಲ ಅಗ್ಗದ ಕಾರನ್ನು ಬಿಡುಗಡೆಗೊಳಿಸಲಿದೆ. ಮೂಲಕ ಪ್ರಕಾರ ಇದರ ದರ 5000 ಯುರೋಗಳಷ್ಟು ಆಗಿರಲಿದೆ. ಅಂದರೆ ಇಂಡಿಯನ್ ರುಪಿಗೆ ಹೋಲಿಸಿದರೆ ಸುಮಾರು 3.5 ರೂಪಾಯಿಗಳಷ್ಟು ದುಬಾರಿಯಾಗಲಿದೆ.
ವಿಶ್ವದ ಅಗ್ಗದ ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋಗೆ ಸವಾಲೆಸೆಯಲಿರುವ ರೆನೊ ಆವೃತ್ತಿ 2014ರಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ಟಾಟಾಗೆ ಸವಾಲು ನೀಡಲಿರುವ ಎರಡನೇ ಅಗ್ಗದ ಕಾರು ಕೂಡಾ 2.15 ಲಕ್ಷ ರು. ಬಜೆಟ್‌ನೊಳಗೆ ರಿಲೀಸ್ ಆಗುವ ನಿರೀಕ್ಷೆಯಿದೆ.
ಚೆನ್ನೈನಲ್ಲಿರುವ ರೆನೊ-ನಿಸ್ಸಾನ್ ಘಟಕದಲ್ಲಿ ಕಾರುಗಳ ನಿರ್ಮಾಣವಾಗಲಿದೆ. ಆದರೆ ಯುರೋಪ್ ಮಾರುಕಟ್ಟೆಯಲ್ಲಿ ಇದರ ಮಾರಾಟ ನಡೆಯಲಾಗದು. ಡಟ್ಸನ್ ಬ್ರಾಂಡ್‌ನಲ್ಲಿ ಈ ಕಾರು ಬಿಡುಗಡೆಯಾಗಲಿದ್ದು, ಆದರೆ ರೆನೊ ತನ್ನದೇ ಆದ ಸ್ವಯಂಕೃತ ಅಗ್ಗದ ಕಾರು ಬಿಡುಗಡೆ ಮಾಡಲಿದೆಯೇ ಎಂಬುದು ಇನ್ನೂ ಖಾತರಿಗೊಂಡಿಲ್ಲ.


Click it and Unblock the Notifications









