ಸಿಂಗಪುರ ಫ್ಲಾಟಿನ 30ನೇ ಮಹಡಿ ಮೇಲೆ ಕಾರ್ ಪಾರ್ಕಿಂಗ್!

ಬೆಂಗಳೂರಿನಂತಹ ನಗರಗಳಲ್ಲಿ ಫ್ಲಾಟ್ ತಗೋಂಡ್ರೆ ಅಂಗೈಗಲದ ಪಾರ್ಕಿಂಗ್ ಸ್ಥಳಾವಕಾಶ ಸಿಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಕಾರಿದ್ರೆ ಅಲ್ಲೂ ರಾಮಾಯಣ. ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಿದ ಕಾರುಗಳಿಗೆ ಗೀರುಗಳು ಉಚಿತವಾಗಿ ಸಿಗುತ್ತವೆ.

ಸಿಂಗಪುರದ ಸ್ಕೈ ಗ್ಯಾರೇಜ್ ಅಪಾರ್ಟ್ ಮೆಂಟ್ನಲ್ಲಿ ಕಾರನ್ನು ನಿಮ್ಮ ಫ್ಲಾಟ್ ಮುಂಭಾಗದಲ್ಲಿಯೇ ಪಾರ್ಕ್ ಮಾಡಬಹುದು. ಅಂದ್ರೆ ನೀವು ಈ ಫ್ಲಾಟಿನ 30ನೇ ಮಹಡಿ ಮೇಲೆ ಮನೆ ಮಾಡಿದ್ರೆ ಅಲ್ಲೇ ಮುಂಭಾಗದಲ್ಲಿ ಕಾರ್ ಪಾರ್ಕ್ ಮಾಡಬಹುದು.

30ನೇ ಮಹಡಿ ತನಕ ಕಾರ್ ಡ್ರೈವಿಂಗ್ ಮಾಡೋದು ಹೇಗಪ್ಪ? ಎಂದು ತಲೆಕೆಡಿಸ್ಕೊಬೇಡಿ. ಅದಕ್ಕಾಗಿಯೇ ಈ ಫ್ಲಾಟಿನಲ್ಲಿ ವಿಶೇಷ ಲಿಫ್ಟಿದೆ. ಮಹಡಿ ಕೆಲಭಾಗದಲ್ಲಿ ಕಾರನ್ನು ಲಿಫ್ಟಿನೊಳಗೆ ಹಾಕಿದ್ರೆ ನಿಮ್ಮ ಫ್ಲಾಟಿನ ಮುಂಭಾಗದಲ್ಲಿ ತಂದು ನಿಲ್ಲಿಸುತ್ತದೆ.

ಸಿಂಗಪುರದಲ್ಲಿರುವ ಸ್ಕೈ ಗ್ಯಾರೇಜ್ ಅಪಾರ್ಟ್ ಮೆಂಟ್ನಲ್ಲಿ ಆಕಾಶದಲ್ಲಿ(30ನೇ ಮಹಡಿಯಲ್ಲಿ) ಕಾರುಗಳನ್ನು ಪಾರ್ಕ್ ಮಾಡಬಹುದು. ಒಂದು ಫ್ಲಾಟಿನವರಿಗೆ ಎರಡು ಕಾರುಗಳನ್ನು ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿದೆ. ಎರಡಕ್ಕಿಂತ ಹೆಚ್ಚು ಕಾರಿರುವರು ಏನ್ಮಾಡ್ಬೆಕು?

ಎರಡಕ್ಕಿಂತ ಹೆಚ್ಚು ಕಾರಿರುವರು ಸುಮಾರು 133.88 ಕೋಟಿ ರುಪಾಯಿ ನೀಡಿ ಅಂತಹ ಸೌಲಭ್ಯವಿರುವ ಫ್ಲಾಟ್ ಖರೀದಿಸಬಹುದು. ಇಂತಹ ಐಷಾರಾಮಿ ಫ್ಲಾಟುಗಳಲ್ಲಿ ಎರಡಕ್ಕಿಂತ ಹೆಚ್ಚು ಕಾರ್ ಪಾರ್ಕಿಂಗ್ ಮಾಡಲು ಅವಕಾಶವಿದೆ. ಅಂದಹಾಗೆ ಇಲ್ಲಿ ಸಾಮಾನ್ಯ ಫ್ಲಾಟ್ ಗಳ ದರ ಸುಮಾರು 41.83 ಕೋಟಿ ರುಪಾಯಿ ಇದೆ.

30ನೇ ಮಹಡಿಯ ಮೇಲಿರುವ ಫ್ಲಾಟಿನಲ್ಲಿ ನಿಮ್ಮ ಕಣ್ಮುಂದೆಯೇ ಕಾರ್ ಪಾರ್ಕ್ ಮಾಡ್ಬೆಕಾದ್ರೆ ಸಿಂಗಪುರದ ಈ ಫ್ಲಾಟ್ ಖರೀದಿಸಬಹುದು.

More from DriveSpark

Article Published On: Thursday, August 30, 2012, 14:53 [IST]
English summary
Sky Garage apartments solved parking problems in there apartments. They offering parking space in the sky, you can w park the car right outside your flat if top floor of the 30-storey block.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+