ಆಗಸ್ಟ್ ತಿಂಗಳಿನಿಂದ ಸ್ಕೋಡಾ ಕಾರುಗಳು ದುಬಾರಿ
ಕಚ್ಚಾ ವಸ್ತುಗಳ ದರ ಹೆಚ್ಚಳ ಮತ್ತು ರೂಪಾಯಿ ಮೌಲ್ಯ ಏರುಪೇರು ದರ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಕಂಪನಿ ತಿಳಿಸಿದೆ. ಯಾವ ಕಾರಿಗೆ ಎಷ್ಟು ದರ ಹೆಚ್ಚಿಸಿದೆ ಎಂದು ಕಂಪನಿ ಸ್ಪಷ್ಟಪಡಿಸಿಲ್ಲ. ಶೇಕಡ 1 ರಿಂದ ಶೇಕಡ 1.18ರಷ್ಟು ಅಂದ್ರೆ ಹಲವು ಸಾವಿರ ರುಪಾಯಿ ಏರಿಕೆ ಕಾಣುವುದು ನಿಶ್ಚಿತ.
ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಸ್ಕೋಡಾ ಇಂಡಿಯಾ ಕಾರು ಮಾರಾಟ ಗಮನಾರ್ಹ ಏರಿಕೆ ಕಂಡಿತ್ತು. ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು ಕಂಪನಿಯ ಕಾರು ಮಾರಾಟ ಶೇಕಡ 89ರಷ್ಟು ಏರಿಕೆ ಕಂಡಿತ್ತು.
ಸ್ಕೋಡಾ ಫಾಬಿಯಾ: ಫಾಬಿಯಾ ಕಾರಿನ ಆರಂಭಿಕ ದರ 4,46,261 ರುಪಾಯಿ. ಹೈ ಎಂಡ್ ಆವೃತ್ತಿಯ ದರ 8.10 ಲಕ್ಷ ರು.ವರೆಗಿದೆ. ಫಾಬಿಯಾ ಒಟ್ಟು 13 ಆವೃತ್ತಿಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಫಾಬಿಯಾ ಲಭ್ಯವಿದೆ.
ಸ್ಕೋಡಾ ಲಾರಾ: ಇದು ಐದು ಸೀಟಿನ ಸೆಡಾನ್. ಎಂಟು ಆವೃತ್ತಿಗಳಲ್ಲಿ ದೊರಕುತ್ತದೆ. ಆರಂಭಿಕ ಎಕ್ಸ್ ಶೋರೂಂ ದರ ಸುಮಾರು 13 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಸ್ಕೋಡಾ ಲಾರಾ ಕ್ಲಾಸಿಕ್ 1.8 ಟಿಎಸ್‌ಐ, ಲೌರಾ ಆ್ಯಂಬಿಟ್ 1.8 ಟಿಎಸ್ಐ, ಆ್ಯಂಬಿಷನ್ 2.0 ಟಿಡಿಐ ಎಂಟಿ, ಆ್ಯಂಬಿಷನ್ 2.0 ಟಿಡಿಐ ಆಟೋಮ್ಯಾಟಿಕ್, ಎಲೆಗೆನ್ಸ್ 2.0 ಟಿಡಿಐ ಎಂಟಿ, ಎಲೆಗೆನ್ಸ್ 2.0 ಟಿಡಿಐ ಎಟಿ ಮತ್ತು 2.0 ಟಿಡಿಐ ಎಲ್ & ಕೆ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ದೊರಕುತ್ತದೆ.
ಸ್ಕೋಡಾ ಯೆಟಿ: ಸ್ಕೋಡಾ ಕಂಪನಿಯ ಜನಪ್ರಿಯ ಯೆಟಿ ಕಾರಿನ ನೂತನ ಆವೃತ್ತಿಯೊಂದು ಇತ್ತೀಚೆಗೆ ರಸ್ತೆಗಿಳಿದಿತ್ತು. ಸ್ಕೋಡಾ ಯೆಟಿ 4X2 ಎಕ್ಸ್ ಶೋರೂಂ ದರ ಸುಮಾರು 13.35 ಲಕ್ಷ ರುಪಾಯಿ. ಇದು ಯೆಟಿ ಕಾರಿನ ಎಂಟ್ರಿ ಲೆವೆಲ್ ಆವೃತ್ತಿ.


Click it and Unblock the Notifications









