ಸ್ಕೋಡಾ ರಾಪಿಡ್ ಕಾರು ಬೆಂಕಿಗಾಹುತಿ, ಹೇಗಾಯ್ತು?
ಕಾರಿನ ಮಾಲೀಕ ನಿತಿನ್ ಮಲ್ಹೋತ್ರಾ ಕಾರನ್ನು ಪಾರ್ಕ್ ಮಾಡಿ ಆಸ್ಪತ್ರೆಗೆ ಹೋಗಿದ್ದರು. ಆ ಸಮಯದಲ್ಲಿ ಕಾರು ಬೆಂಕಿಗಾಹುತಿಯಾಗಿದೆ. ಕಾರಿನ ಮುಂಭಾಗ ಉರಿದು ಹೋಗಿದೆ. ಈ ಸಮಸ್ಯೆಗೆ ಕಾರಣ ಕಾರಿನಲ್ಲಿ ಆಕಸ್ಮಿಕವಾಗಿ ಉಂಟಾದ ಶಾರ್ಟ್ ಸರ್ಕ್ಯೂಟ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇಲ್ಲಿವರೆಗೆ ರಾಪಿಡ್ ಕಾರು ಉರಿದ ಘಟನೆ ನಡೆದಿರಲಿಲ್ಲ. ಈ ಘಟನೆಯ ಕುರಿತು ತನಿಖೆ ಮಾಡುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. "ಆದಷ್ಟು ಬೇಗ ಕಂಪನಿಯ ಟೆಕ್ನಿಕಲ್ ತಂಡವು ಘಟನೆಯ ಕಾರಣ ಕಂಡು ಹಿಡಿಯಲಿದೆ" ಎಂದು ಸ್ಕೋಡಾ ಇಂಡಿಯಾ ಹೇಳಿದೆ.
ಕಾರು ಬೆಂಕಿಗಾಹುತಿಯಾಗುವುದು ಭಾರತದಲ್ಲಿ ಪ್ರಮುಖ ಘಟನೆಯಾಗಿ ಉಳಿದಿಲ್ಲ. ಹಲವು ಕಂಪನಿಯ ಕಾರುಗಳು ಆಗಾಗ ಬೆಂಕಿಗಾಹುತಿಯಾಗಿ ಸುದ್ದಿ ಮಾಡುತ್ತಲೇ ಇವೆ. ಇತ್ತೀಚೆಗೆ ಫೋಕ್ಸ್ ವ್ಯಾಗನ್ ವೆಂಟೊ ಕಾರು ಕೂಡ ಬೆಂಕಿಗಾಹುತಿಯಾಗಿತ್ತು. ವೆಂಟೊ ಕಾರು ಬೆಂಕಿಗೀಡಾಗಿ ಅದರೊಳಗೆ ಚಾಲಕನೂ ಮೃತನಾಗಿದ್ದು ದುರಂತ. ಸದ್ಯ ನ್ಯಾನೊ ಕಾರು ಬೆಂಕಿಗಾಹುತಿಯಾಗುವ ಘಟನೆಗಳು ಕಡಿಮೆಯಾಗಿವೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









