ಕಾರಿಗೆ ಸಡನ್ ಬೆಂಕಿ; ಇಲ್ಲಿವೆ 10 ಕಾರಣಗಳು!

By Nagaraja

ಅಯ್ಯೋ ದೇವರೇ, ನಮ್ಮನ್ನು ಕಾಪಾಡಪ್ಪಾ! ಇದೇನಿದು ಕಾರು ಧಗಧಗನೆ ಹೊತ್ತಿ ಉರಿಯುತ್ತಿದೆಯಲ್ಲ? ಈಗೇನು ಮಾಡೋನಾ? ಇದಕ್ಕಾಗಿಯೇ ಬಲ್ಲವರು ಹೇಳಿರೋದು "ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ".

ಕಾರಿಗೆ ಆವರಿಸುವ ಬೆಂಕಿ ಆಕಸ್ಮಿಕದಿಂದಾಗಿ ಪ್ರಯಾಣಿಕರ ಜೀವಕ್ಕೂ ಅಪಾಯ ಎದುರಾಗಲಿದೆ. ಇದರಿಂದ ನಿಮ್ಮ ಕನಸು ನೂಚ್ಚುನೂರಾಲಿದೆ. ಹಾಗಾಗಿ ವಾಹನಕ್ಕೆ ಕಡ್ಡಾಯವಾಗಿ ವಿಮಾ ಸೌಲಭ್ಯ ಗಿಟ್ಟಿಸಿಕೊಳ್ಳಲು ಮರೆಯದಿರಿ. ಕಾರುಗಳಿಗೆ ಬೆಂಕಿ ತಗುಲಲಿರುವ ಈ ಸಾಮಾನ್ಯ ಕಾರಣಗಳನ್ನು ಅರಿತು ಸಂಭವನೀಯ ಅಪಘಾತವನ್ನು ತಪ್ಪಿಸಿರಿ..

10. ವಿನ್ಯಾಸ ಎಡವಟ್ಟು

10. ವಿನ್ಯಾಸ ಎಡವಟ್ಟು

ಇದು ಅತ್ಯಂತ ವಿರಳ ಪ್ರಕರಣಗಳಲ್ಲಿ ಒಂದಾಗಿದ್ದು, ಹಾಗಿದ್ದರೂ ವಿನ್ಯಾಸ ಎಡವಟ್ಟಿನ ಬಗ್ಗೆ ಅರಿವಾದರೆ ತಕ್ಷಣ ಸಂಸ್ಥೆಯನ್ನು ಸಂಪರ್ಕಿಸುವುದು ಒಳಿತು. ಇದೇ ಕಾರಣಕ್ಕಾಗಿ ಆಧುನಿಕ ವಾಹನ ಸಂಸ್ಥೆಗಳು ವಾಹನಗಳಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡರೂ ತಾವಾಗಿಯೇ ಮುಂದೆ ಬಂದು ರಿಕಾಲ್ ಗೆ ಕರೆ ನೀಡುತ್ತವೆ.

09. ನಿರ್ವಹಣೆ ಕೊರತೆ

09. ನಿರ್ವಹಣೆ ಕೊರತೆ

ವಾಹನ ಸಂಸ್ಥೆಗಳ ನಿರ್ದೇಶನದಂತೆ ಕಾರನ್ನು ಅವಧಿಗೆ ತಕ್ಕಂತೆ ಸರ್ವೀಸ್ ಮಾಡಿಸಬೇಕು. ನಿರ್ವಹಣಾ ಕೊರತೆಯಿಂದಲೂ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು.

08. ಅಪಘಾತ

08. ಅಪಘಾತ

ಕಾರುಗಳು ಢಿಕ್ಕಿಯಾದ ಸಂದರ್ಭದಲ್ಲಿ ಅತಿಯಾದ ಘರ್ಷಣೆಯುಂಟಾಗುವ ಪರಿಣಾಮ ಇಂಧನ ಟ್ಯಾಂಕ್ ಒಡೆಯುವ ಭೀತಿಯಿರುತ್ತದೆ. ಪರಿಣಾಮ ಇಂಧನ ಲೀಕ್ ಆಗುವುದರಿಂದ ದೊಪ್ಪನೆ ಬೆಂಕಿ ಆವರಿಸಲಿದೆ. ಇಲ್ಲಿ ವೈರ್ ಗಳು ಶಾರ್ಟ್ ಆಗುವುದರಿಂದ ಬೆಂಕಿ ಆವರಿಸಲಿದೆ.

07. ಆಫ್ಟರ್ ಮಾರ್ಕೆಟ್ ಆಕ್ಸೆಸರಿಗಳು

07. ಆಫ್ಟರ್ ಮಾರ್ಕೆಟ್ ಆಕ್ಸೆಸರಿಗಳು

ಹೆಚ್ಚಿನ ವಾಹನ ಸಂಸ್ಥೆಗಳು ಬಾಹ್ಯ ಕಂಪನಿಗಳು ಒದಗಿಸುವ ಆಕ್ಸೆಸರಿಗಳನ್ನು ಬಳಕೆ ಮಾಡಲು ಪ್ರೋತ್ಸಾಹಿಸುವುದಿಲ್ಲ. ಇವುಗಳು ಬೇರೆಯೇ ಸಂಯೋಜನೆಯಿಂದ ಕೆಲಸ ಮಾಡುವುದರಿಂದಲೂ ವೈರ್ ಗಳು ಚಲ್ಲಾಪಿಲ್ಲಿಯಾಗಿ ಹರಡುವುದರಿಂದ ಬೆಂಕಿಯ ಕಿಡಿ ಹಾರುವ ಭೀತಿಯಿರುತ್ತದೆ.

06. ವೇಗವರ್ಧಕ ಪರಿವರ್ತಕಗಳ ಓವರ್ ಹೀಟಿಂಗ್

06. ವೇಗವರ್ಧಕ ಪರಿವರ್ತಕಗಳ ಓವರ್ ಹೀಟಿಂಗ್

ವಾಹನಗಳ ಎಕ್ಸಾಸ್ಟ್ ಸಿಸ್ಟಂ ಹಾಗೂ ವೇಗವರ್ಧಕ ಪರಿವರ್ತಕಗಳು ಭಾರಿ ಪ್ರಮಾಣದ ಶಾಖವನ್ನು ವಿಸರ್ಜಿಸುತ್ತದೆ. ಇದರಿಂದಾಗಿ ಬಂಪರ್ ಹಾಗೂ ಬದಿಯ ಪ್ಲಾಸ್ಟಿಕ್ ಭಾಗಗಳು ಕರಗಲು ಆರಂಭಿಸಲಿದ್ದು, ಪರಿಣಾಮ ಬೆಂಕಿ ಸೃಷ್ಟಿಯಾಗುವ ಭೀತಿಯಿರುತ್ತದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ದೂರ ಪ್ರಯಾಣದ ವೇಳೆ ಅಥವಾ ನಿರಂತರ ಅಂತರಾಳದಲ್ಲಿ ವಾಹನ ಚೆಕಪ್ ಮಾಡುವುದು ಅಗತ್ಯ. ಇಲ್ಲಿಯೂ ಬಾಹ್ಯ ಸಂಸ್ಥೆಗಳು ಒದಗಿಸುವ ಬಂಪರ್ ಗಳು ಅಪಾಯಕಾರಿಯೆನಿಸಲಿದೆ. ಇದು ನೋಡಲು ಅಂದವಾಗಿ ಕಾಣಿಸಿದರೂ ವಾಹನ ಅಗತ್ಯ ಭಾಗಗಳಿಗೆ ಗಾಳಿ ಸಂಚಾರಕ್ಕೆ ಅಡ್ಡಿಯನ್ನಂಟು ಮಾಡಲಿದೆ.

05. ಎಂಜಿನ್ ಓವರ್ ಹೀಟಿಂಗ್

05. ಎಂಜಿನ್ ಓವರ್ ಹೀಟಿಂಗ್

ಎಂಜಿನ್ ಓವರ್ ಹೀಟಿಂಗ್ ನಿಂದಲೂ ಗಾಡಿಗೆ ಬೆಂಕಿಯ ಕಿಡಿ ಆವರಿಸುವ ಭೀತಿಯಿರುತ್ತದೆ. ಇಲ್ಲಿಯೂ ವಾಹನದ ಮೂಲ ಪಾಠ ಅನ್ವಯವಾಗುತ್ತಿದ್ದು, ನಿರಂತರ ಅಂತರಾಳದಲ್ಲಿ ಚೆಕಪ್ ಮಾಡಿಸಿದರೆ ಸಂಭವನೀಯ ಅಪಘಾತವನ್ನು ತಪ್ಪಿಸಬಹುದಾಗಿದೆ.

04. ಎಂಜಿನ್ ಆಯಿಲ್ ಲೀಕ್

04. ಎಂಜಿನ್ ಆಯಿಲ್ ಲೀಕ್

ನಿರಂತರವಾಗಿ ಎಂಜಿನ್ ಚಾಲನೆಯಲ್ಲಿರುವುದರಿಂದ ಎಂಜಿನ್ ಆಯಿಲ್ ಶಾಖ ಹೆಚ್ಚುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಆಯಿಲ್ ಲೀಕ್ ಆಗುವುದರಿಂದ ಅಪಾಯ ಎದುರಾಗಲಿದೆ.

03. ಎಲೆಕ್ಟ್ರಿಕಲ್ಸ್

03. ಎಲೆಕ್ಟ್ರಿಕಲ್ಸ್

ಇದು ಬಹುತೇಕ ಎಲ್ಲ ವಾಹನಗಳಲ್ಲೂ ಸಾಮಾನ್ಯ ಸಮಸ್ಯೆಯಾದರೂ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ವಿದ್ಯುತ್ ಪ್ರವಹಿಸುವ ವೈರ್ ಗಳಿಂದಾಗಿ ಬೆಂಕಿಯ ಕಿಡಿ ಹಾರುವ ಭೀತಿಯಿರುತ್ತದೆ.

02. ಇಂಧನ ಲೀಕ್

02. ಇಂಧನ ಲೀಕ್

ನಾವು ಈ ಮೊದಲೇ ತಿಳಿಸಿರುವಂತೆಯೇ ಯಾವುದೇ ಕಾರಣಕ್ಕೂ ಇಂಧನಕ್ಕೆ ಬೆಂಕಿ ತಗುಲದಂತೆ ನೋಡಿಕೊಳ್ಳುವುದು ಒಳಿತು. ಇಲ್ಲವಾದ್ದಲ್ಲಿ ಕ್ಷಣ ಮಾತ್ರದಲ್ಲಿ ಕಾರು ಸುಟ್ಟು ಭಸ್ಮವಾಗಲಿದೆ.

01. ಧೂಮಪಾನ

01. ಧೂಮಪಾನ

ಬಹುತೇಕರು ಚಾಲನೆ ವೇಳೆ ಸಿಗರೇಟು ಸೇದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಂತಹ ಕೇರ್ ಲೆಸ್ ನಡವಳಿಕೆಯಿಂದ ದೊಡ್ಡ ಬೆಲೆಯನ್ನೇ ತೆರಬೇಕಾಗಿತು ಹುಷಾರ್!

ಕಾರಿಗೆ ಸಡನ್ ಬೆಂಕಿ; ಇಲ್ಲಿವೆ 10 ಕಾರಣಗಳು!

ಈಗ ಕಾರಿಗೆ ಆಕಸ್ಮಾತ್ ಆಗಿ ಆವರಿಸುವ ಬೆಂಕಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Being aware of these simple things can save yours as well as many other precious lives.
Story first published: Thursday, April 2, 2015, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X