ಹೊಸ ಅಭಿಯಾನ: ನೀವು ಕುಡಿದ್ರೆ ನಾವು ಡ್ರೈವ್ ಮಾಡ್ತಿವಿ!
ಆದರೂ ಟ್ರಾಫಿಕ್ ಪೊಲೀಸರ ಕಣ್ಣಿಗೆ ಬೀಳದಂತೆ ಕುಡಿದು ವಾಹನ ಸವಾರಿ ಮಾಡುವರಿಗೇನು ಕಮ್ಮಿಯಿಲ್ಲ. ಡೋಂಟ್ ಡ್ರಿಂಕ್ ಆಂಡ್ ಡ್ರೈವ್ ಎನ್ನುತ ಹಲವು ಅಭಿಯಾನಗಳೂ ನಡೆಯುತ್ತಿವೆ. ಇದೀಗೆ ಜೆಕ್ ಮೂಲದ ಸ್ಕೋಡಾ ಕಂಪನಿಯು "ನೀವು ಕುಡಿದ್ರೆ ನಾವು ಡ್ರೈವ್ ಮಾಡುತ್ತೇವೆ" ಎಂಬ ಹೊಸ ಅಭಿಯಾನ ಆರಂಭಿಸಿದೆ.
ಈ ಅಭಿಯಾನದ ಉದ್ದೇಶದ ಸ್ಲೋಗನಿನಲ್ಲೇ ಸ್ಪಷ್ಟವಾಗಿದೆ. ಅಂದ್ರೆ ಪಾರ್ಟಿ ಗೀರ್ಟಿ ಎಂದು ಸ್ಕೋಡಾ ಕಾರು ಮಾಲೀಕರು ಕುಡಿಯಲು ಹೋದ್ರೆ ಕಂಪನಿಯೇ ಚಾಲಕರನ್ನು ನೇಮಿಸುತ್ತದೆ. ಈ ಮೂಲಕ ಕುಡಿದು ವಾಹನ ಚಲಾಯಿಸುವುದನ್ನು ಕಡಿಮೆ ಮಾಡಲು ಕಂಪನಿ ಯೋಜಿಸಿದೆ.
"ನಮಗೆ ನಮ್ಮ ಗ್ರಾಹಕರ ಸುರಕ್ಷತೆ ಮುಖ್ಯ. ಸುರಕ್ಷತೆಯ ಸವಾರಿ ಅಭಿಯಾನದ ಒಂದು ಭಾಗವಾಗಿ ನೀವು ಕುಡಿದ್ರೆ ನಾವು ಡ್ರೈವ್ ಮಾಡುತ್ತೇವೆ ಎಂಬ ಅಭಿಯಾನ ಆರಂಭಿಸಿದ್ದೇವೆ" ಎಂದು ಸ್ಕೋಡಾ ಇಂಡಿಯಾ ಮಾರುಕಟ್ಟಿ ವಿಭಾಗದ ಮುಖ್ಯಸ್ಥ ಕಮಲ್ ಬಸು ಹೇಳಿದ್ದಾರೆ.
ಅಂದಹಾಗೆ ಈ ಸೌಲಭ್ಯ ಮುಂಬೈ ಗ್ರಾಹಕರಿಗೆ ಮಾತ್ರ. ಬೆಂಗಳೂರಿನಲ್ಲಿ ನೀವು ಕುಡಿದ್ರೆ ನೀವೇ ಡ್ರೈವಿಂಗ್ ಮಾಡ್ಬೇಕು ಮತ್ತು ನೀವೇ ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟಬೇಕು.
ಓದಿ: ಚಾಲಕ ಕುಡಿದಿದ್ದರೆ ಸಾಗದು ಬಂಡಿಯು ಮುಂದೆ..>>


Click it and Unblock the Notifications









