ಮಾರುತಿ ಸುಜುಕಿಗೆ ವರವಾದ ಸಣ್ಣಕಾರುಗಳು
ಕಳೆದ ವರ್ಷ ಕಳೆದುಕೊಂಡ ಮಾರುಕಟ್ಟೆ ಪಾಲನ್ನು ಮತ್ತೆ ತನ್ನದಾಗಿಸಲು ಮಾರುತಿಗೆ ಸಣ್ಣಕಾರುಗಳು ನೆರವಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಕಂಪನಿಯ ಮಾರಾಟ ಏರಿಕೆಯತ್ತ ಮುಖ ಮಾಡಿದೆ. ಈ ವರ್ಷ ಕಂಪನಿಯ ಸ್ವಿಫ್ಟ್ ಕಾರುಗಳ ಮಾರಾಟವೂ ಹೆಚ್ಚಾಗುತ್ತಿದೆ.
ಆಲ್ಟೊ, ವ್ಯಾಗನಾರ್ ಮತ್ತು ಸ್ವಿಫ್ಟ್ ಕಾರುಗಳು ಕಂಪನಿಯ ಅತ್ಯಧಿಕ ಮಾರಾಟದ ಕಾರುಗಳಾಗಿವೆ. ಕಂಪನಿಯ ಎರಡನೇ ಅತ್ಯಧಿಕ ಮಾರಾಟದ ಕಾರು ವ್ಯಾಗನಾರನ್ನು ಸ್ವಿಫ್ಟ್ ಹಿಂದಿಕ್ಕುತ್ತಿದೆ. ದೇಶದ ಅತ್ಯಧಿಕ ಮಾರಾಟದ ಕಾರೆಂಬ ಗರಿಮೆಯನ್ನೂ ಆಲ್ಟೊ ಇನ್ನೂ ಉಳಿಸಿಕೊಂಡಿದೆ.
ಹಾಗಂತ ಆಲ್ಟೊ ಕಾರಿಗೆ ಪೈಪೋಟಿ ಇಲ್ಲವೆಂದಲ್ಲ. ಇತ್ತೀಚೆಗೆ ರಸ್ತೆಗಿಳಿದ ಹ್ಯುಂಡೈ ಇಯಾನ್ ಕಾರು ಆಲ್ಟೊಗೆ ಪರ್ಯಾಯ ಆಯ್ಕೆಯಂತಿದೆ. ಕಾರ್ಯಕ್ಷಮತೆ, ಸ್ಥಳಾವಕಾಶ ಮತ್ತು ಕಡಿಮೆ ದರದ ಹಿನ್ನಲೆಯಲ್ಲಿ ವ್ಯಾಗನಾರ್ ಕಾರಿನ ಜನಪ್ರಿಯತೆ ಕುಗ್ಗಿಲ್ಲ.
ಆದರೆ ಡೀಸೆಲ್ ಕಾರುಗಳಿಗೆ ಹೆಚ್ಚಾದ ಬೇಡಿಕೆಯು ಕಂಪನಿಯ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳಲು ಶುರುಮಾಡಿತ್ತು. ಆದರೆ ಮತ್ತೆ ಡೀಸೆಲ್ ಕಾರುಗಳು ದುಬಾರಿಯಾಗುವ ಸೂಚನೆಯಿರುವ ಕಾರಣ ಮಾರುತಿ ಸುಜುಕಿಗೆ ಮತ್ತೆ ಸಣ್ಣಕಾರುಗಳು ವರವಾಗುವ ನಿರೀಕ್ಷೆಯಿದೆ.


Click it and Unblock the Notifications
