ಸ್ಟೀವ್ ಜಾಬ್ಸ್ ಕನಸಿನ ಪುಟ್ಟಕಾರು- ಐಕಾರ್

ಆಪಲ್ ಕಂಪನಿಯ ಸಂಸ್ಥಾಪಕ ದಿ. ಸ್ಟೀವ್ ಜಾಬ್ಸ್ ಅಂದಾಕ್ಷಣ ಅಚ್ಚರಿಯ ಐಪಾಡ್, ಐಪ್ಯಾಡ್, ಐಫೋನ್ ನೆನಪಿಗೆ ಬರಬಹುದು. ನಿಮ್ಗೊತ್ತ? ಇದೇ ಸ್ಟೀವ್ ಜಾಬ್ಸ್ ವಿನೂತನ ಐಕಾರ್ ವಿನ್ಯಾಸ ಮಾಡುವ ಮೂಲಕ ಜಗತ್ತಿನ ವಾಹನಗಳ ವಿನ್ಯಾಸದ ಪರಿಕಲ್ಪನೆಯನ್ನೇ ಬದಲಾಯಿಸುವ ಕನಸು ಕಂಡಿದ್ದರಂತೆ!

ಐಕಾರ್ ಅಭಿವೃದ್ಧಿಪಡಿಸುವ ಸ್ಟೀವ್ ಜಾಬ್ಸ್ ಕನಸಿನ ಕುರಿತು ತಿಳಿಸಿದ್ದು ಜೆ ಕ್ರೀವ್ ಕಂಪನಿಯ ಸಿಇಒ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಮಿಕ್ಕಿ ಡ್ರಿಕ್ಷ್ಲೆರ್. ಆದರೆ ಅವರ ಅನಿರೀಕ್ಷಿತ ನಿರ್ಗಮನದಿಂದಾಗಿ ಜಗತ್ತು ಐಕಾರನ್ನು ಕಳೆದುಕೊಂಡಿತ್ತು ಎಂದು ಅವರು ವಿಷಾಧಿಸಿದ್ದಾರೆ.

ಸ್ಟೀವ್ ಜಾಬ್ಸ್‌ರನ್ನು ಕಳೆದುಕೊಂಡಿರುವುದು ಗ್ರಾಹಕರಿಗೆ ಮತ್ತು ವಾಹನೋದ್ಯಮಕ್ಕೆ ತುಂಬಲಾರದ ನಷ್ಟವೆಂದು ಆಪಲ್ ಕಂಪನಿಯ ವೆಬ್ ಪುಟದಲ್ಲಿ ತಿಳಿಸಲಾಗಿತ್ತು. ಸ್ಟೀವ್ ಜಾಬ್ಸ್‌ಗೂ ವಾಹನ ಕಂಪನಿಗಳಿಗೂ ಏನು ಸಂಬಂಧವೆಂಬ ಸಂದೇಹ ನಿಮಗೆ ಬಂದಿರಬಹುದು. ಅಮೆರಿಕದಲ್ಲಿ ಮಾರಾಟವಾಗುವ ಶೇಕಡ 90ರಷ್ಟು ಕಾರುಗಳಿಗೆ ಆಪಲ್ ಐಪ್ಯಾಡ್ ಸಂಪರ್ಕವಿದೆ.

ಸ್ಟೀವ್ ಜಾಬ್ಸ್ ಕನಸಿನ ಐ ಕಾರ್ ವಿನ್ಯಾಸವಾಗುವ ಮುನ್ನವೇ ಜಾಬ್ಸ್ ಕಳೆದುಕೊಂಡದ್ದು ದುರಂತ ಎಂದು ಡೀಕ್ಷೆರ್ ಹೇಳುತ್ತಾರೆ. ಸ್ಟೀವ್ ಜಾಬ್ಸ್ ಎಲೆಕ್ಟ್ರಿಕ್ ಗ್ಯಾಡ್ಜೆಟ್ ಗಳಾದ ಐಪಾಡ್, ಐಪ್ಯಾಡ್, ಐಫೋನ್ ಇತ್ಯಾದಿಗಳಿಂದ ಜಗತ್ತಿನಲ್ಲಿಯೇ ಜನಪ್ರಿಯ ವ್ಯಕ್ತಿ. ಸ್ಟೀವ್ ಜಾಬ್ಸ್ ಕನಸಿನ ಐಕಾರನ್ನು ಆಪಲ್ ಕಂಪನಿಯು ವಿನ್ಯಾಸ ಮಾಡುವುದೇ ಕಾದು ನೋಡಬೇಕಿದೆ.

ಸ್ಟೀವ್ ಜಾಬ್ಸ್ ಒಂದು ದುಬಾರಿ ಲಕ್ಷುರಿ ಕಾರು ಬಳಸುತ್ತಿದ್ದರು. ಅದರ ಹೆಸರು ಮರ್ಸಿಡಿಸ್ ಬೆಂಝ್ ಎಲ್55 ಎಎಂಜಿ(2007). ತನ್ನ ಪ್ರೀತಿಯ ಮರ್ಸಿಡಿಸ್ ಬೆಂಝ್ ಕಾರಿಗೆ ಸ್ಟೀವ್ ಜಾಬ್ಸ್ ನಂಬರ್ ಪ್ಲೇಟ್ ಹಾಕಿಲ್ಲವಂತೆ. ವಿಶೇಷವೆಂದರೆ ಅವರು ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿದರೂ ಪೊಲೀಸರು ಫೈನ್ ಹಾಕುತಿರಲಿಲ್ಲವಂತೆ! ಯಾಕೆಹೀಗೆ? ಈ ಸ್ಟೋರಿ ಓದಿ.

Article Published On: Monday, May 21, 2012, 10:16 [IST]
English summary
Steve Jobs, the ambitious late founder of Apple, had the dream of designing an iCar before his death. The fact was revealed by J. Crew CEO and board member Mickey Drexler. Jobs reimagined a complete overhaul of the auto industry, Drexler said while speaking at a recent Fast Company conference on innovation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+