ಸ್ಟೀವ್ ಜಾಬ್ಸ್ ಕಾರಿನ ನಂಬರ್ ಪ್ಲೇಟ್ ಖಾಲಿ ಯಾಕೆ?

ನೆಟ್ ಲೋಕದ ವಿಶ್ಲೇಷನೆಗಳು ಸೌಂದರ್ಯ ಮಿಮಾಂಸೆಯಿಂದ ಆರಂಭವಾಗುತ್ತದೆ. ವಾಹನ ಗುರುತು ಸಂಖ್ಯೆ(ವಿಐಪಿ) ಹಾಕಿದರೆ ಸುಂದರವಾದ ಕಾರು ಕುರೂಪವಾಗಿ ಕಾಣುತ್ತದೆ, ಹೈಟೆಕ್ ವಾಹನಕ್ಕೆ ಇಂತಹ ನಂಬರ್ ಪ್ಲೇಟ್ ಚೆನ್ನಾಗಿ ಕಾಣಿಸೋದಿಲ್ಲ. ಅದಕ್ಕೆ ಸ್ಟೀವ್ ಜಾಬ್ಸ್ ನಂಬರ್ ಪ್ಲೇಟ್ ಖಾಲಿ ಬಿಟ್ಟಿದ್ದಾರೆ ಎನ್ನುವುದು ಒಬ್ಬ ಬ್ಲಾಗರ್ ಅಭಿಪ್ರಾಯ.
"ಕ್ಯಾಲಿಫೋರ್ನಿಯಾ ನಂಬರ್ ಪ್ಲೇಟ್ ತುಂಬಾ ಅಸಹ್ಯ, ಕುರೂಪವಾಗಿದೆ. ಹೀಗಾಗಿ ಸುಂದರವಾದ ಕಾರನ್ನು ಸ್ಟೀವ್ ಕುರೂಪ ಮಾಡಲು ಜಾಬ್ಸ್ ಇಚ್ಚಿಸಲಿಲ್ಲ" ಎಂದು ಮತ್ತೊಬ್ಬ ವಿಶ್ಲೇಷಕರು ಹೇಳುತ್ತಾರೆ.
ಮತ್ತೊಂದು ವಾದವಿದೆ. ಜಾಬ್ಸ್ ತನ್ನ ಖಾಸಗಿತನವನ್ನು ನಂಬರ್ ಪ್ಲೇಟ್ ಮೂಲಕ ಬಹಿರಂಗ ಪಡಿಸಲು ಇಚ್ಚಿಸುವುದಿಲ್ಲ. ಹೀಗಾಗಿ ನಂಬರ್ ಪ್ಲೇಟ್ ಬಳಸಿಲ್ಲ ಎನ್ನುವರಿದ್ದಾರೆ. ಖಾಲಿ ನಂಬರ್ ಪ್ಲೇಟ್ ಮೂಲಕ ಅವರು ಖಾಸಾಗಿತನವನ್ನ ಉಳಿಸಿಕೊಂಡರೋ..ಗೊತ್ತಿಲ್ಲ.
ನಂಬರ್ ಪ್ಲೇಟ್ ಇಲ್ಲದ ಕಾರು ಕೂಡ ಸ್ಟೀವ್ ಜಾಬ್ಸ್ ಜೀವನಶೈಲಿಯ ಒಂದು ಭಾಗವೇ? ಹೀಗೊಂದು ಪ್ರಶ್ನೆಯೂ ಮೂಡಬಹುದು. ಸ್ಟೀವ್ ಜಾಬ್ಸ್ ಯಾವತ್ತೂ ಸಿಂಪಲ್ ಆಗಿ ಬದುಕಿದವರು. ಕಾಲರ್ ಇಲ್ಲದ ಟೀಶರ್ಟ್, ಜೀನ್ಸ್, ಸರಳ ಉಡುಗೆ ತೊಡುಗೆ ಇವರ ಲೈಫ್ ಸ್ಟೈಲ್. ಸ್ಟೀವ್ ಜಾಬ್ಸ್ ಟ್ರಾಫಿಕ್ ಪೊಲೀಸರಿಗೂ ಸಿಕ್ಕಿಬಿದ್ದಿಲ್ಲವೇ? ಮುಂದಿನ ಪುಟ ನೋಡಿ..


Click it and Unblock the Notifications








