ಕಾರಿನ ಕಿಟಕಿಗಳಿಗೆ ಟಿಂಟೆಡ್ ಗ್ಲಾಸ್ ಬಳಸುವಂತಿಲ್ಲ: ಕೋರ್ಟ್

Supreme Court banned tinted glass in Vehicles
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳು ವಾಹನಗಳಿಗೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ಬ್ಯಾನ್ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ.

ವಾಹನ ಕಂಪನಿಗಳು ಉತ್ಪಾದಿಸುವ ವಾಹನಗಳ ಮುಂಭಾಗದ ಮತ್ತು ಹಿಂಭಾಗದ ಕಿಟಕಿಗಳಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿರಬೇಕು. ಸೈಡ್ ಕಿಟಕಿಗಳಲ್ಲಿ ಶೇಕಡ 40ರಷ್ಟು ವೀಕ್ಷಣೆ ಸಾಧ್ಯವಿರಬೇಕು ಎಂದು ಕೋರ್ಟ್ ಆದೇಶಿಸಿದೆ.

ನಾಲ್ಕು ಚಕ್ರದ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಅವಿಷೇಕ್ ಗೋಯೆಂಕಾ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದ್ದರು. ಇದನ್ನು ಮುಖ್ಯ ನ್ಯಾಯಮೂರ್ತಿ ಎಸ್ ಚ್ ಕಪಾಡಿಯ, ಎ.ಕೆ. ಪಟ್ನಾಯಿಕ್ ಮತ್ತು ಎಸ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠವೂ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ವಾಹನ ಕಾಯಿದೆಯ 94 ಮತ್ತು 100 ಪರಿಚ್ಛೇದದ ಪ್ರಕಾರ ಸಂಪೂರ್ಣವಾಗಿ ಟಿಂಟೆಡ್ ಗ್ಲಾಸ್ ನಿಷೇಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಝಡ್ ಮತ್ತು ಝಡ್ ಪ್ಲಸ್ ಭದ್ರತೆ ಇರುವ ವಿಐಪಿಗಳಿಗೆ ನೂತನ ಟಿಂಟೆಡ್ ಕಾನೂನು ಅನ್ವಯಿಸುವುದಿಲ್ಲ.

ಕಪ್ಪು ಬಣ್ಣದ ಗಾಜಿರುವ ಕಾರುಗಳು ಟ್ರಾಫಿಕ್ ಪೊಲೀಸರಿಗೆ ಕಿರಿಕಿರಿ ಉಂಟು ಮಾಡುತ್ತವೆ. ಕಾರಿನೊಳಗೆ ಯಾರಿದ್ದಾರೆ? ಕಳ್ಳರಿದ್ದಾರೆಯೇ? ಭಯೋತ್ಪಾದಕರಿದ್ದಾರೆಯೇ? ಯಾರಿಗೂ ತಿಳಿಯುತ್ತಿರಲಿಲ್ಲ. ಮಾನವ ಕಳ್ಳಸಾಗಣೆ, ಅಪಹರಣಕಾರರ ವಾಹನಗಳೂ ಟಿಂಟೆಡ್ ಗ್ಲಾಸ್ ಹೊಂದಿರುತ್ತವೆ.

ಅಂದಹಾಗೆ ಈಗ ಟಿಂಟೆಡ್ ಗ್ಲಾಸ್ ಬಳಕೆಗೆ ಸುಮಾರು 100 ರುಪಾಯಿ ದಂಡವಿದೆ.

More from DriveSpark

Article Published On: Saturday, April 28, 2012, 12:12 [IST]
English summary
Supreme Court banned use of tinted glass more then permissible limit fixed under the Motor Vehicles Act, in four wheelers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+