ಸುಜುಕಿಯಿಂದ 1 ಲಕ್ಷ ಸ್ವಿಫ್ಟ್ ಕಾರುಗಳ ಹಿಂಪಡೆತ

Suzuki recalls 1 Lakh Swifts; Not In India
ಜಪಾನಿನ ಕಾರು ಕಂಪನಿ ಸುಜುಕಿಯು ಜಾಗತಿಕವಾಗಿ ಸುಮಾರು ಒಂದು ಲಕ್ಷ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಕಾರುಗಳನ್ನು ಹಿಂಪಡೆಯಲು ಯೋಜಿಸಿದೆ. ಪೆಟ್ರೋಲ್ ಲೀಕೆಜ್ ಸಂಬಂಧಿತ ಸಮಸ್ಯೆ ಬಗೆಹರಿಸಲು ಸ್ವಿಫ್ಟ್ ಕಾರುಗಳನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ. ದೇಶದಲ್ಲಿರುವ ಸ್ವಿಫ್ಟ್ ಕಾರುಗಳಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಮಾರುತಿ ಸುಜುಕಿ ಇಂಡಿಯಾ ಪ್ರಕಟಿಸಿದೆ.

ಜಪಾನಿನಲ್ಲಿ ನಿರ್ಮಿಸಿದ ಸ್ವಿಫ್ಟ್ ಕಾರುಗಳನ್ನು ಕಂಪನಿಯು ಹಿಂಪಡೆಯಲಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸ್ವಿಫ್ಟ್ ಕಾರುಗಳು ಜಪಾನಿನಲ್ಲೇ ಮಾರಾಟವಾಗಿದೆ. ಆಸ್ಟ್ರೇಲಿಯಾ ಮತ್ತು ಉಳಿದ ಕೆಲವು ದೇಶಗಳಿಗೂ ಈ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಒಟ್ಟಾರೆ ನಾಲ್ಕು ಸ್ವಿಫ್ಟ್ ಕಾರುಗಳಲ್ಲಿ ಇಂಧನ ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಸುಮಾರು 1.09 ಲಕ್ಷ ಸ್ವಿಫ್ಟ್ ಕಾರುಗಳನ್ನು ರಿಕಾಲ್ ಮಾಡಲು ಕಂಪನಿ ನಿರ್ಧರಿಸಿದೆ.

ಕಂಪನಿಯು ಭಾರತದಲ್ಲಿನ ಸ್ವಿಫ್ಟ್ ಕಾರುಗಳನ್ನು ರಿಕಾಲ್ ಮಾಡುವುದಿಲ್ಲ. ಯಾಕೆಂದರೆ ಇಲ್ಲಿನ ಕಾರುಗಳಿಗೆ ಕಂಪನಿಯು ಸ್ಥಳೀಯವಾಗಿ ಬಿಡಿಭಾಗಗಳನ್ನು ಉತ್ಪಾದಿಸುತ್ತಿದೆ. ಹೀಗಾಗಿ "ಮೇಡ್ ಇನ್ ಇಂಡಿಯಾ ಸ್ವಿಫ್ಟ್ ಕಾರುಗಳ ಹಿಂಪಡೆತವಿಲ್ಲ" ಎಂದು ಕಂಪನಿ ಪ್ರಕಟಿಸಿದೆ.

ಜಪಾನಿನಲ್ಲಿ 2010ರಿಂದ 2012ರ ಏಪ್ರಿಲ್ ತಿಂಗಳವರೆಗೆ ಉತ್ಪಾದಿಸಿರುವ ಸ್ವಿಫ್ಟ್ ಕಾರುಗಳನ್ನು ಕಂಪನಿ ವಾಪಸ್ ಪಡೆಯಲಿದೆ.

More from DriveSpark

Article Published On: Tuesday, May 8, 2012, 14:23 [IST]
English summary
Japanese carmaker Suzuki has announced a global recall of about one lakh Swift hatchbacks to repair a defect that causes petrol leakage. If you are worried if your Swift will also have the same defect, we have some good news. Maruti Suzuki India has revealed that the Swift's global recall will not affect Indian cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+