ದುಬಾರಿ ಎಸ್‌ಯುವಿ ಖರೀದಿಸಿದ ಮುಖ್ಯಮಂತ್ರಿ ಜಯಲಲಿತಾ
ತಮಿಳು ನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಇತ್ತೀಚೆಗೆ ಹೊಸ ಸ್ಪೋರ್ಟ್ ಯುಟಿಲಿಟಿ ವಾಹನವನ್ನು ಖರೀದಿಸಿದ್ದಾರೆ. ಅದರ ಹೆಸರು ಲ್ಯಾಂಡ್ ಕ್ರೂಷರ್ ಎಲ್‌ಸಿ200. ಈ ಕಾರಿಗೆ ಜಯಲಲಿತಾ ಸುಮಾರು 1.20 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಟೊಯೊಟಾ ಪ್ರಡೊ ಕಾರನ್ನು ಬಳಸುತ್ತಿದ್ದರು.
ಟೊಯೊಟಾ ಲ್ಯಾಂಡ್ ಕ್ರೂಷರ್ ಎಲ್‌ಸಿ 200: ಲ್ಯಾಂಡ್ ಕ್ರೂಷರ್ ಟೊಯೊಟಾ ಕಂಪನಿಯ ಅತ್ಯಂತ ಹಳೆಯ ಮಾಡೆಲ್ ಕಾರು. ಇದು ರಸ್ತೆಗಿಳಿದು ಸುಮಾರು ಅರ್ಧದಶಕ ಕಳೆದಿದೆ. ಕಂಪನಿಯು ಟೊಯೊಟಾ ಬಿಜೆ ಹೆಸರಿನಲ್ಲಿ 1951ರಲ್ಲಿ ಲ್ಯಾಂಡ್ ಕ್ರೂಷರನ್ನು ಪರಿಚಯಿಸಿತ್ತು. ಲ್ಯಾಂಡ್ ಕ್ರೂಷರ್ ಬಳಗಕ್ಕೆ ಇತ್ತೀಚಿನ ಸೇರ್ಪಡೆಯಾದ ಆವೃತ್ತಿಯ ಹೆಸರು ಎಲ್ ಸಿ200. ಇದು 8ನೇ ತಲೆಮಾರಿನ 200 ಸೀರಿಸ್ ಕಾರಾಗಿದೆ.
ತಂತ್ರಜ್ಞಾನ: ಲ್ಯಾಂಡ್ ಕ್ರೂಷರ್ ಎಲ್ ಸಿ 200 ಕಾರಿಗೆ ಕಂಪನಿಯು ಹೈಟೆಕ್ ತಂತ್ರಜ್ಞಾನಗಳನ್ನು ಅಳವಡಿಸಿದೆ. ಇದರಿಂದ ಇದು ಆಫ್ ರೋಡ್ ಸವಾರಿಗೂ ಸೂಕ್ತವಾಗಿದೆ. ಸ್ಯಾಟಲೈಟ್ ನ್ಯಾವಿಗೇಷನ್, ಕೀಲೆಸ್ ಎಂಟ್ರಿ, ಎಂಜಿನ್ ಇಮೊಬಿಲೈಝರ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಕ್ರೂಸ್ ಕಂಟ್ರೋಲ್ ಇದೆ. ಮನರಂಜನೆಗಾಗಿ 9 ಸ್ಪೀಕರ್, ಸಿಡಿ ಪ್ಲೇಯರ್, ಯುಎಸ್ ಬಿ ಪೋರ್ಟ್, ಐಪ್ಯಾಡ್ ಪ್ಲಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಗಳಿವೆ.
ಸುರಕ್ಷತೆ: ಲ್ಯಾಂಡ್ ಕ್ರೂಷರ್ ಎಲ್ ಸಿ 200 ಕಾರು ಸುರಕ್ಷಿತ ಸವಾರಿಗೂ ಪೂರಕವಾಗಿದೆ. ಅಂದರೆ ಇದರಲ್ಲಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್, ಮಲ್ಟಿ ಟೆರ್ರಿಯನ್ ಆ್ಯಂಟಿ ಸ್ಕಿಡ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಬ್ರೇಕ್ ಅಸಿಸ್ಟ್, ಆರು ಏರ್ ಬ್ಯಾಗುಗಳು ಇವೆ.
ಲ್ಯಾಂಡ್ ಕ್ರೂಷರ್ 200 ಸೀರಿಸ್ ಕಾರುಗಳು 7 ಮತ್ತು 8 ಸೀಟಿನ ಆಯ್ಕೆಗಳಲ್ಲಿ ದೊರಕುತ್ತದೆ. ಜನರು ಕಡಿಮೆಯಿದ್ದಾಗ ಹಿಂದಿನ ಸೀಟ್ ಮಡುಚಿಡಬಹುದು. ಕಾರಿನ ಎರಡೂ ಬದಿಯಲ್ಲೂ ಸೈಡ್ ಸ್ಟೆಪ್ ಇವೆ. ಕಾರಿನೊಳಗೆ ವಿಶಾಲ ಸ್ಥಳಾವಕಾಶವಿದೆ. ಪಾಲಿಮರ್ ಸಾಮಾಗ್ರಿಗಳಿಂದ ರಚಿತವಾಗಿರುವ ಮುಂಭಾಗದ ಬಂಪರ್ ಹೆಚ್ಚು ಸದೃಢವಾಗಿದೆ. 17-18 ಇಂಚಿನ ಅಲಾಯ್ ವೀಲ್ ಟೈರ್ ಹೊಂದಿದೆ.
ಎಂಜಿನ್: ಟೊಯೊಟಾ ಲ್ಯಾಂಡ್ ಕ್ರೂಷರ್ 200 ಸೀರಿಸ್ ಕಾರುಗಳು ಎರಡು ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದನ್ನು 4.6 ಎಲ್ ವಿ8 1ಯುಆರ್-ಎಫ್ ಇ ವಿವಿಟಿ-ಐ ಪೆಟ್ರೋಲ್ ಎಂಜಿನ್ ಅಥವಾ 4.5 ಲೀಟರಿನ ವಿ8 1ವಿಡಿ 1ವಿಡಿ ಎಫ್ ಟಿವಿ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇವೆರಡೂ ಕಾರುಗಳೂ ಆರು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಹೊಂದಿವೆ.


Click it and Unblock the Notifications









