ಅಬ್ಬಬ್ಬಾ..! ಬರುತ್ತಿದೆ ಟಾಟಾ ನ್ಯಾನೋ ಡೀಸೆಲ್ ಆವೃತ್ತಿ!

By Nagaraja

ದೇಶಕ್ಕೆ ಸಣ್ಣ ಬಜೆಟ್‌ನಲ್ಲಿ ಅತಿ ಚಿಕ್ಕ ಕಾರನ್ನು ಪರಿಚಯಿಸುವ ಮೂಲಕ ಆಟೊ ಮೊಬೈಲ್ ಜಗತ್ತಿನಲ್ಲಿ ಹೊಸ ಅಲೆಯೆಬ್ಬಿಸಿದ್ದ ಟಾಟಾ ಮೋಟಾರ್ಸ್, ಇದೀಗ ಮತ್ತೊಂದು ಪವಾಡವನ್ನು ಎದುರು ನೋಡುತ್ತಿದ್ದು ಜನಪ್ರಿಯ ನ್ಯಾನೋದ ಡೀಸೆಲ್ ವರ್ಷನ್ ಕೂಡಾ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೌದು, ಇದೀಗ ಎಲ್ಲವೂ ಅಧಿಕೃತವಾಗಿದ್ದು ಟಾಟಾ ನ್ಯಾನೋ ಡೀಸೆಲ್ ಆವೃತ್ತಿ ಸದ್ಯದಲ್ಲೇ ಬಿಡುಗಡೆಗೊಳಿಸುತ್ತಿರುವುದಾಗಿ ಟಾಟಾ ಮೋಟಾರ್ಸ್ ಸ್ಪಷ್ಪಪಡಿಸಿದೆ. ಈ ಹಿಂದೆ ಹಲವು ಬಾರಿ ಊಪಾಪೋಹಗಳಿದ್ದರೂ ಕಂಪನಿ ಯಾವುದೇ ಧೋರಣೆ ತಳೆದಿರಲಿಲ್ಲ. ಆದರೆ ಇದೀಗ ಎಲ್ಲವೂ ಅಧಿಕೃತವಾಗಿದೆ.

ಇದೇ ಸಂದರ್ಭದಲ್ಲಿ 2013ರ ಮೊದಲಾರ್ಧದಲ್ಲಿ ಸಿಎನ್‌ಜಿ ವೆರಿಯಂಟ್ ಸಹ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್ ಸ್ಪಷ್ಟಪಡಿಸಿದ್ದಾರೆ. ಆ ಬಳಿಕ 2013ರ ದ್ವಿತಿಯಾರ್ಧದಲ್ಲಿ ಡೀಸೆಲ್ ವೆರಿಯಂಟ್ ಆಗಮನವಾಗಲಿದೆ.

ದೇಶದ ಮಾರುಕಟ್ಟೆಯಲ್ಲಿ ಡೀಸೆಲ್ ಆವೃತ್ತಿಯ ಕಾರುಗಳಿಗೆ ಭಾರಿ ಬೇಡಿಕೆಯಿದ್ದು, ದರ ಕೂಡಾ ದುಬಾರಿಯಾಗಿದೆ. ಹಾಗಾಗಿ ನಿಜಕ್ಕೂ ಟಾಟಾ ನ್ಯಾನೋ ಎಲ್ಲ ವಿಚಾರಗಳಲ್ಲೂ ಡೀಸೆಲ್ ವೆರಿಯಂಟ್‌ಗೆ ಉತ್ತೇಜನ ನೀಡುವ ಸಾಧ್ಯತೆಯಿದೆ. ಅಲ್ಲದೆ ನ್ಯಾನೋ ಜನ ಸಾಮ್ಯಾನರ ನಡುವೆ ನಿಧಾನವಾಗಿ ಪ್ರಚಾರ ಗಿಟ್ಟಿಸುತ್ತಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರ್ ವಾಣಿಜ್ಯ ವಿಭಾಗ ಅಧ್ಯಕ್ಷ ರಂಜಿತ್ ಯಾದವ್ ತಿಳಿಸಿದ್ದಾರೆ. ಅಂದ ಹಾಗೆ 2012ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಟಾಟಾ ನ್ಯಾನೋ ಸಿಎನ್‌ಜಿ ಆವೃತ್ತಿ ಅನಾವರಣವಾಗಿತ್ತು.

More from DriveSpark

Article Published On: Thursday, November 8, 2012, 14:48 [IST]
English summary
The Tata Nano's diesel avatar has finally got official confirmation. There have been several reports about Tata Motors developing the diesel variant of its smallest car but the carmaker had never officially confirmed it until yesterday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+