ಮೂರು ಹೊಸ ಕಾರು ಪರಿಚಯಿಸಲಿದೆ ಟಾಟಾ ಮೋಟರ್ಸ್
ಟಾಟಾ ಮೋಟರ್ಸ್ ಫ್ಯಾಕ್ಟರಿಯಿಂದ ದೇಶದ ರಸ್ತೆಗಿಳಿಯಲು ಮೂರು ಹೊಸ ಕಾರುಗಳು ಸರದಿಯಲ್ಲಿವೆ. ಮುಂದಿನ ಒಂಬತ್ತು ತಿಂಗಳಲ್ಲಿ ಈ ಹೊಸ ಕಾರುಗಳು ಆಗಮಿಸಲಿವೆ ಎಂದು ವರದಿಗಳು ಹೇಳಿವೆ. ನ್ಯಾನೊ ಮತ್ತು ಇಂಡಿಕಾ ಶ್ರೇಣಿಯ ನಡುವೆ ನೂತನ ಕಾರುಗಳು ಇರಲಿವೆಯಂತೆ.
ಮೂರು ಸಿಲಿಂಡರ್ ಡೀಸೆಲ್ ಎಂಜಿನಿನ ನ್ಯಾನೊ ಕಾರನ್ನು ಈ ಅವಧಿಯಲ್ಲಿ ಕಂಪನಿ ಪರಿಚಯಿಸಲಿದೆ. ಇದು ದೇಶದ ಅತಿಸಣ್ಣ ಡೀಸೆಲ್ ಕಾರ್ ಎಂಜಿನಾಗಲಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಟಾಟಾ ಮೋಟರ್ಸ್ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದ ಸಫಾರಿ ಸ್ಟ್ರಾಮ್ ಕಾರು ಕೂಡ ಶೀಘ್ರದಲ್ಲಿ ಆಗಮಿಸಲಿದೆ.
ನೂತನ ಕಾರುಗಳು ಹ್ಯುಂಡೈ ಇಯಾನ್ ಮತ್ತು ಮಾರುತಿ ಸುಜುಕಿ ಆಲ್ಟೊ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಇದರೊಂದಿಗೆ ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಫ್ರಾನ್ಸಿನ ಡಸಲ್ಟ್ ಸಿಸ್ಟಮ್ಸ್ ಕಂಪನಿಯೊಂದಿಗೆ ಸೇರಿ ಟಾಟಾ ಮೋಟರ್ಸ್ ನೂತನ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸಲಿದೆ.
ಇದರೊಂದಿಗೆ ಟಾಟಾ ಮೋಟರ್ಸ್ ಕಂಪನಿಯು ದೇಶದಲ್ಲಿ ವಾಹನಗಳ ಮಾರಾಟವನ್ನು ಗಮನಾರ್ಹವಾಗಿ ಹೆಚ್ಚಿಸಲು ಯೋಜಿಸಿದೆ. ಅದರಲ್ಲೂ ನ್ಯಾನೊ ಕಾರಿನ ಬೇಡಿಕೆ ಹೆಚ್ಚಿಸಲು ಕಂಪನಿಯು ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಓದಿ: ಟಾಟಾ ನ್ಯಾನೊ ಕಾರಿಗೆ ಸಚಿನ್ ನೀಡಿದ ಸಲಹೆ


Click it and Unblock the Notifications









