ಟಾಟಾ ಪವನ ಕಾರ್ ಅಭಿವೃದ್ಧಿ ಎರಡನೇ ಹಂತಕ್ಕೆ ಪ್ರವೇಶ

ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಬಳಸದೇ ಸಂಕುಚಿತ ಗಾಳಿಯಿಂದ ಚಲಿಸುವ ಟಾಟಾ ಮೋಟರ್ಸ್ ಏರ್ ಕಾರ್ ಯೋಜನೆಯೂ ಯಾವುದೇ ಅಡೆತಡೆಗಳಿಲ್ಲದೇ ಎರಡನೇ ಹಂತ ಪ್ರವೇಶಿಸಿದೆ.

ಮೊದಲನೆಯ ಹಂತದಲ್ಲಿ ಕಂಪನಿಯು ಎರಡು ಕಾರುಗಳಿಗೆ ಪವನ ಕಾರ್ ತಂತ್ರಜ್ಞಾನ ಅಳವಡಿಸಿತ್ತು. ಇವೆರಡು ಕಾರುಗಳು ರಸ್ತೆಯಲ್ಲಿ ಯಶಸ್ವಿಯಾಗಿ ಚಲಿಸಿದ್ದವು. ಇದೀಗ ಇದನ್ನು ಉತ್ಪಾದನೆ ಮಾಡಿ, ಮಾರಾಟಕ್ಕೆ ಸಿದ್ಧಗೊಳಿಸುವುದು ಎರಡನೇ ಹಂತವಾಗಿದೆ.

ಎರಡನೇ ಹಂತದಲ್ಲಿ ಕಂಪನಿಯು ಫೋಸಿಲ್ ಇಂಧನ ರಹಿತ ತಂತ್ರಜ್ಞಾನದ ಮೂಲಕ ಏರ್ ಕಾರ್ ಅಭಿವೃದ್ಧಿಪಡಿಸಲಿದೆ. ಏರ್ ಕಾರ್ ಬಿಡಿಭಾಗ ನಿರ್ಮಿಸುವುದು ಮತ್ತು ಏರ್ ಕಾರ್ ಮಾರಾಟಕ್ಕೆ ಸಿದ್ಧಗೊಳಿಸುವುದು ಕೂಡ ಈ ಹಂತದಲ್ಲಿ ಸೇರಿದೆ.

ಸಂಕುಚಿತ ಗಾಳಿ ಇಂಧನ ತಂತ್ರಜ್ಞಾನದ ಕುರಿತಾದ ಒಪ್ಪಂದವೊಂದಕ್ಕೆ ಟಾಟಾ ಮೋಟರ್ಸ್ ಮತ್ತು ಎಂಡಿಐ ಕಂಪನಿ 2007ರಲ್ಲಿ ಸಹಿ ಹಾಕಿದ್ದವು. ಎಂಡಿಐ ತಂತ್ರಜ್ಞಾನದ ಕಾರುಗಳನ್ನು ದೇಶದಲ್ಲಿ ಪರಿಚಯಿಸಲು ಅನುಮತಿ ನೀಡುವ ಒಪ್ಪಂದ ಇದಾಗಿದೆ.

ಶೀಘ್ರದಲ್ಲಿ ಟಾಟಾ ಮೋಟರ್ಸ್ ದೇಶದಲ್ಲಿ ಸುಮಾರು 6 ಸಾವಿರ ಇಂತಹ ಕಾರುಗಳನ್ನು ಹೊರತರಲಿದೆ ಎಂದು ವರದಿಗಳು ಹೇಳಿವೆ. ಈ ಪವನಕಾರಿನ ಗಾಳಿಸಿಲಿಂಡರ್ ಒಮ್ಮೆ ಪೂರ್ತಿ ಫಿಲ್ ಮಾಡಿದರೆ ಸುಮಾರು 300 ಕಿಲೋಮೀಟರ್ ಸಾಗಬಹುದಂತೆ. ಇದಕ್ಕೆ ತಗುಲುವ ವೆಚ್ಚ ಕೇವಲ 2 ಡಾಲರ್. ಅಂದರೆ ಸುಮಾರು 100 ರುಪಾಯಿ.

ಇದು ಹಗುರ ಕಾರು. ಇದನ್ನು ಫೈಬರ್ ಗ್ಲಾಸ್ ಬಳಸಿ ಉತ್ಪಾದಿಸಲಾಗುತ್ತದೆ. ಈ ಕಾರು ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಕುರಿತು ಕಾರಿನ ವಿನ್ಯಾಸಕರು ಭರವಸೆ ವ್ಯಕ್ತಪಡಿಸುತ್ತಾರೆ. ಇದು ಎಲೆಕ್ಟ್ರಾನಿಕ್ ಕಾರುಗಳಿಗಿಂತ ಅಗ್ಗವಾಗಿರಲಿದೆ. ಇದು ಸಿಟಿ ರಸ್ತೆ ಸವಾರಿಗೆ ಸೂಕ್ತವಾಗಿರಲಿದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Thursday, August 30, 2012, 17:14 [IST]
English summary
Tata Motors much awaited "air powered cars' is moving to second phase of development. Company already successfully completed first phase of testing air-powered engine in two of its cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+