ಟಾಟಾ ಮೋಟರ್ಸ್ ಜೂನ್ ಮಾರಾಟ ಇಳಿಮುಖ
ಕಳೆದ ತಿಂಗಳು ಕಂಪನಿಯ ದೇಶಿಯ ಮಾರಾಟ 58,270 ಯುನಿಟ್ ತಲುಪಿದ್ದು, ಶೇಕಡ 5ರಷ್ಟು ಏರಿಕೆ ಕಂಡಿದೆ. 2011ರ ಜೂನ್ ತಿಂಗಳಲ್ಲಿ ಕಂಪನಿಯ ದೇಶಿ ಮಾರಾಟ 61,266 ಯುನಿಟ್ ಆಗಿತ್ತು. ಪ್ರಸಕ್ತ ಆರ್ಥಿಕ ವರ್ಷದ ಕಂಪನಿಯು ಒಟ್ಟಾರೆ 1,88,774 ವಾಹನ ಮಾರಾಟ ಮಾಡಿದ್ದು, ಕಳೆದ ಆರ್ಥಿಕ ವರ್ಷದ 1,93,039 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 2 ರಷ್ಟು ಇಳಿಕೆ ಕಂಡಿದೆ.
ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಕಂಪನಿಯ ಪ್ರಯಾಣಿಕ ವಾಹನ ಮಾರಾಟ 17,244 ಯುನಿಟ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ 21,994 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 21ರಷ್ಟು ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಟಾಟಾ ನ್ಯಾನೊ ಮಾರಾಟ 5,605 ಯುನಿಟ್ ಗೆ ತಲುಪಿದೆ. ಇದು ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಶೇಕಡ 3ರಷ್ಟು ಏರಿಕೆಯಾಗಿದೆ. ಆದರೆ ಕಳೆದ ಕೆಲವು ತಿಂಗಳ ಮಾರಾಟಕ್ಕೆ ಹೋಲಿಸಿದರೆ ನ್ಯಾನೊ ಮಾರಾಟ ಆಶಾದಾಯಕವಾಗಿಲ್ಲ.
ಪ್ರಸಕ್ತ ವರ್ಷದ ಜೂನ್ ತಿಂಗಳವರೆಗೆ ಕಂಪನಿಯ ಪ್ರಯಾಣಿಕ ಕಾರುಗಳ ಮಾರಾಟ 60,405 ಯುನಿಟ್ ಆಗಿದೆ. ಕಳದೆ ವರ್ಷದ ಜೂನ್ ತಿಂಗಳವರೆಗಿನ 65,108 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 7ರಷ್ಟು ಇಳಿಕೆಯಾಗಿದೆ. ಇದೇ ಅವಧಿಯ ಒಟ್ಟಾರೆ ನ್ಯಾನೊ ಮಾರಾಟ 22,140 ಯುನಿಟ್, ಇಂಡಿಕಾ 17,712 ಯುನಿಟ್, ಇಂಡಿಗೊ, 9,724 ಯುನಿಟ್, ಸುಮೊ/ಸಫಾರಿ/ಆರಿಯಾ/ವೆಂಚ್ಯೂರ್ ಮಾದರಿಯ ವಾಹನಗಳ ಮಾರಾಟ 10,829 ಯುನಿಟ್ ತಲುಪಿದೆ.
ಟಾಟಾ ಮೋಟರ್ಸ್ ಕಂಪನಿಯ ಪ್ರೀಮಿಯಂ ಬ್ರಾಂಡ್ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಮಾರಾಟ ಏರಿಕೆ ಟ್ರೆಂಡ್ ಮುಂದುವರೆಸಿದೆ. ಕಂಪನಿಯ ಕಳೆದ ತಿಂಗಳು ಸುಮಾರು 6,071 ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಶೇಕಡ 19ರಷ್ಟು ಹೆಚ್ಚಳವಾಗಿದೆ.


Click it and Unblock the Notifications









