ಟಾಟಾ ಮೋಟಾರ್ಸ್ ದೀಪಾವಳಿ ಆಫರ್ ಮಿಸ್ ಮಾಡಿದ್ರಾ?
ದೀಪಾವಳಿ ಹಬ್ಬದ ಸೀಸನ್ ಭರಾಟೆ ಜೋರಾಗಿರುವಂತೆಯೇ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಗುರಿಯಿರಿಸಿಕೊಂಡಿರುವ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಫೇಸ್ಟಿವ್ ಸೀಸನ್ ಆಫರ್‌ಗಳನ್ನು ಘೋಷಿಸಿದೆ.
ಈ ಫೇಸ್ಟಿವ್ ಸೀಸನ್ ಆಫರ್ ಟಾಟಾ ಮೋಟಾರ್ಸ್‌ನ ಎಲ್ಲ ಪ್ಯಾಸೆಂಜರ್ ಹಾಗೂ ಯುಟಿಲಿಟಿ ವಾಹನಗಳಿಗೆ ಅನ್ವಯವಾಗಲಿದ್ದು, ನವೆಂಬರ್ 17ರ ವರೆಗೆ ಜಾರಿಯಲ್ಲಿರಲಿದೆ. ಹಾಗಾಗಿ ಗ್ರಾಹಕರು ಆದಷ್ಟು ಬೇಗನೇ ಟಾಟಾ ದೀಪಾವಳಿ ಕೊಡುಗೆಗಳ ಸದುಪಯೋಗಪಡಿಸಬೇಕಾಗಿದೆ.
ದೀಪಾವಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಗ್ರಾಹಕರನ್ನು ಕಾರುಗಳನ್ನು ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವುದು ಸೂಕ್ತ ಎಂಬುದು ಅವರ ಭಾವನೆಯಾಗಿದೆ.

ಟಾಟಾ ಇಂಡಿಕಾ
ಈ ಹಬ್ಬದ ಕಾಲಘಟ್ಟದಲ್ಲಿ ಟಾಟಾ ಇಂಡಿಕಾ ಖರೀದಿಸುವ ಸಂದರ್ಭದಲ್ಲಿ ಇಂಡಿಕಾ ವಿಸ್ಟಾ ಪೆಟ್ರೋಲ್ ಆವೃತ್ತಿಗೆ ರು. 1 ಲಕ್ಷ ಹಾಗೂ ಇಂಡಿಕಾ ವಿಸ್ಟಾ ಡೀಸೆಲ್ ಆವೃತ್ತಿಗೆ ರು. 55,000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಟಾಟಾ ನ್ಯಾನೋ
ಸಣ್ಣ ಬಜೆಟ್‌ನಲ್ಲಿ ದೇಶಕ್ಕೆ ಅತಿ ಚಿಕ್ಕ ಕಾರನ್ನು ಪರಿಚಯಿಸಿಕೊಟ್ಟಿದ್ದ ಟಾಟಾ ನ್ಯಾನೋ ಆವೃತ್ತಿಗೆ ರು. 25,000ದಿಂದ ರು. 40,000 ಸಾವಿರದ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಟಾಟಾ ಮಾಂಝಾ
ಮಾಂಝಾ ಪೆಟ್ರೋಲ್ ಅಡಿಷನ್ ಖರೀದಿಸುವ ಸಂದರ್ಭದಲ್ಲಿ ರು. 1.3 ಲಕ್ಷ ಹಾಗೂ ಮಾಂಝಾ ಡೀಸೆಲ್ ಖರೀದಿಸುವ ಸಂದರ್ಭದಲ್ಲಿ ರು. 70,000ದ ವರೆಗೆ ಪ್ರಯೋಜನ ಗಿಟ್ಟಿಸಬಹುದಾಗಿದೆ.

ಟಾಟಾ ಆರಿಯಾ ಪ್ಯೂರ್
ಟಾಟಾ ಆರಿಯಾ ಪ್ಯೂರ್ ಆವೃತ್ತಿಗೂ ಸ್ಪೆಷಲ್ ಫೇಸ್ಟಿವ್ ಆಫರ್ ಲಭ್ಯವಿದ್ದು. 9. 95 ಲಕ್ಷ ರೂಪಾಯಿಗಳಿಗೆ ನಿಮ್ಮದಾಗಿಸಬಹುದಾಗಿದೆ.

ಟಾಟಾ ಸುಮೋ ಗೋಲ್ಡ್
ಟಾಟಾ ಸುಮೋ ಗೋಲ್ಡ್ ಆವೃತ್ತಿಯಲ್ಲೂ 70,000 ರೂಪಾಯಿಗಳ ವರೆಗೂ ಪ್ರಯೋಜನ ಪಡೆಯಬಹುದಾಗಿದೆ.

ಟಾಟಾ ಸಫಾರಿ ಡಿಕೊರ್
ಟಾಟಾ ಸಫಾರಿ ಡಿಕೊರ್ ಆವೃತ್ತಿಯಲ್ಲಿ 99,000 ರುಪಾಯಿಗಳ ವರೆಗೆ ಲೊ ಡೌನ್ ಪೇಮೆಂಟ್ ಆಫರ್ ಒದಗಿಸಲಾಗಿದ್ದು, 80000 ರೂಪಾಯಿಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಟಾಟಾ ವೆನ್ಚುರ್
ಟಾಟಾ ವೆನ್ಚುರ್ ಆವೃತ್ತಿಯಲ್ಲೂ ರು. 45,000 ವರೆಗೆ ಲೊ ಡೌನ್ ಪೇಮೆಂಟ್ ಆಫರ್ ಇದ್ದು, 50,000 ರುಪಾಯಿಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.


Click it and Unblock the Notifications








