ನ್ಯಾನೊ ಆನ್ ಲೈನ್ ಅಂಗಡಿ: ಅಗ್ಗದ ದರಕ್ಕೆ ಆಕ್ಸೆಸರಿ

ಬೆಂಗಳೂರು, ಆ 17: ಟಾಟಾ ನ್ಯಾನೊ, ನೂತನ "ನ್ಯಾನೊ ಮರ್ಚಂಡೈಸ್ ಆನ್ ಲೈನ್ ಸ್ಟೋರ್" ನ್ನು ಇಬೇ ತಾಣದಲ್ಲಿ ಶುಕ್ರವಾರ ತೆರೆದಿದೆ. Ebay.in ವೆಬ್ ತಾಣದಲ್ಲಿ ಕಾರು ಕಂಪನಿಯೊಂದು ಆಕ್ಸೆಸರಿ ಮಾರಾಟ ಮಾಡುವುದು ಇದೇ ಮೊದಲು.

ಟಾಟಾ ನ್ಯಾನೊ ಆನ್‌ಲೈನ್ ಅಂಗಡಿಯಲ್ಲಿ ನ್ಯಾನೊ ವಿನ್ಯಾಸ ಮತ್ತು ಬಣ್ಣದ ಆಕ್ಸೆಸರಿಗಳು ದೊರಕುತ್ತಿವೆ. 240 ರುಪಾಯಿಯಿಂದ 262 ರು.ವರೆಗಿನ ದರದಲ್ಲಿ ನ್ಯಾನೊ ಕಾರಿನ ಬಣ್ಣದ ಟೀಶರ್ಟುಗಳನ್ನು ಖರೀದಿಸಬಹುದು.

ನ್ಯಾನೊ ಕಾರಿನ ವಿನ್ಯಾಸ ಕಂಪ್ಯೂಟರ್ ಮೌಸ್ ಆಕರ್ಷಕವಾಗಿದೆ. ಇದರ ದರ 1508 ರುಪಾಯಿ. ನ್ಯಾನೊ ಪೆನ್ ಡ್ರೈವ್ ದರ 681 ರುಪಾಯಿ. 845 ರುಪಾಯಿಗೆ ನ್ಯಾನೊ 3ಡಿ ಪೆನ್ ಡ್ರೈವ್ ದೊರಕುತ್ತದೆ. 39 ರುಪಾಯಿಗೆ ವಿವಿಧ ವಿನ್ಯಾಸದ ನ್ಯಾನೊ ಕೀಗೊಂಚಲು ದೊರಕುತ್ತದೆ.

ನ್ಯಾನೊ ಕಾರಿನ ಪಡಿಯಚ್ಚು ಸಣ್ಣ ಆಟಿಕೆ ಕಾರನ್ನು ಕೂಡ ಇಲ್ಲಿ ಖರೀದಿಸಬಹುದು. 180 ರು.ನಿಂದ 1500 ರು.ವರೆಗೆ ಇದರ ದರವಿದೆ. ನ್ಯಾನೊ ವಾಚುಗಳನ್ನು ಕೂಡ ಇಬೇ ತಾಣದಲ್ಲಿ ಖರೀದಿಸಬಹುದು. ಇದರ ದರ 1,500 ರು.ನಿಂದ 2,655 ರು.ವರೆಗಿದೆ.

ನ್ಯಾನೊ ಆನ್ ಲೈನ್ ಅಂಗಡಿ ವಿಳಾಸ: www.ebay.in/tatanano

More from DriveSpark

Article Published On: Friday, August 17, 2012, 15:26 [IST]
English summary
Tata Nano launched the ‘Nano merchandise online store’ on Ebay. This is the first time that a car brand will be selling its merchandise through Ebay.in.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+