ನ್ಯಾನೊ ಮಾರಾಟ ಭರ್ಜರಿ, ಟಾಟಾ ಡೋಂಟ್ ವರಿ
ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ ಒಟ್ಟು 60,128 ಯುನಿಟ್ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ತಿಂಗಳ 56,571 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 6ರಷ್ಟು ಏರಿಕೆಯಾಗಿದೆ.
ಟಾಟಾ ಮೋಟರ್ಸ್ ಕಳೆದ ತಿಂಗಳು ಸುಮಾರು 39,625 ಯುನಿಟ್ ವಾಣಿಜ್ಯ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಮೇ ತಿಂಗಳ 37,170 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 7ರಷ್ಟು ಹೆಚ್ಚಳವಾಗಿದೆ.
ಕಂಪನಿಯ ಹಗುರ ವಾಣಿಜ್ಯ ವಾಹನ ಮಾರಾಟ 27,174 ಯುನಿಟ್ ಗೆ ತಲುಪಿದ್ದು, ಕಳೆದ ವರ್ಷದ ಮೇ ತಿಂಗಳ 21,638 ಯುನಿಟಿಗೆ ಹೋಲಿಸಿದರೆ ಶೇಕಡ 26ರಷ್ಟು ಏರಿಕೆ ದಾಖಲಿಸಿದೆ. ಆದರೆ ಮಧ್ಯಮ ಮತ್ತು ಭಾರಿ ವಾಹನಗಳ ಮಾರಾಟ 12,451 ಯುನಿಟಿಗೆ ತಲುಪಿದ್ದು, ಕಳೆದ ವರ್ಷದ 15,532 ಯುನಿಟಿಗೆ ಹೋಲಿಸಿದರೆ ಶೇಕಡ 20ರಷ್ಟು ಇಳಿಕೆ ದಾಖಲಿಸಿದೆ.
ಪ್ರಯಾಣಿಕ ವಾಹನ ಮಾರಾಟ 20,503 ಯುನಿಟಿಗೆ ತಲುಪಿದ್ದು, ಕಳೆದ ಮೇ ತಿಂಗಳ 19,401 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 6ರಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳು ಕಂಪನಿಯು ಒಟ್ಟು 8,507 ಯುನಿಟ್ ನ್ಯಾನೊ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಮೇ ತಿಂಗಳ 6,515 ನ್ಯಾನೊ ಮಾರಾಟಕ್ಕೆ ಹೋಲಿಸಿದರೆ ಶೇಕಡ 31ರಷ್ಟು ಏರಿಕೆ ಕಂಡಿದೆ.
ಇಂಡಿಕಾ ಶ್ರೇಣಿಯಾ ವಾಹನಗಳ ಮಾರಾಟ 5,467 ಯುನಿಟ್ ತಲುಪಿ ಶೇಕಡ 1ರಷ್ಟು ಇಳಿಕೆ ದಾಖಲಿಸಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಇದು 5,497 ಯುನಿಟ್ ಮಾರಾಟವಾಗಿತ್ತು. ಟಾಟಾ ಮೋಟರ್ಸ್ ಸುಮಾರು 5,534 ಕಾರುಗಳನ್ನು ರಫ್ತು ಮಾಡಿದ್ದು, ಶೇಕಡ 24ರಷ್ಟು ಏರಿಕೆ ದಾಖಲಿಸಿದೆ.


Click it and Unblock the Notifications









