ಹೆಚ್ಚು ಶಕ್ತಿಶಾಲಿ ದೊಡ್ಡ ನ್ಯಾನೊ ತರಲು ಟಾಟಾ ಚಿಂತನೆ

ಅಗ್ಗದ ಸಣ್ಣಕಾರು ನ್ಯಾನೊ ಮಾರಾಟ ಹೆಚ್ಚಿಸಿಕೊಳ್ಳಲು ಟಾಟಾ ಮೋಟರ್ಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಹಲವು ಆಫರು, ವಿನಾಯಿತಿಗಳನ್ನು ನ್ಯಾನೊಗೆ ನೀಡುತ್ತಿದೆ. ಆದರೂ ಮಾರಾಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ.

ನ್ಯಾನೊ ಕಾರನ್ನು ಇಷ್ಟಪಡದ ವರ್ಗವೇ ಇದೆ. ಹೆಚ್ಚಿನವರಿಗೆ ನ್ಯಾನೊ ಇಷ್ಟವಾಗದಿರಲು ಅದರ ಕಡಿಮೆ ಸಿಸಿ ಮತ್ತು ಎಂಜಿನ್ ಸದ್ದು ಪ್ರಮುಖ ಕಾರಣ. ಸದ್ಯ ರಸ್ತೆಯಲ್ಲಿರುವ ನ್ಯಾನೊ ಕಾರುಗಳು 624ಸಿಸಿಯ ಎಂಜಿನ್ ಹೊಂದಿದ್ದು 34 ಹಾರ್ಸ್ ಪವರ್ ನೀಡುತ್ತದೆ. ಅಂದರೆ ಇದರ ಶಕ್ತಿ ಮಾಮೂಲಿ ಬೈಕಿನಷ್ಟೇ ಇದೆ.

ಇದೀಗ ಕಂಪನಿಯು ನ್ಯಾನೊ ಕಾರಿಗೆ ಶಕ್ತಿಶಾಲಿ ಎಂಜಿನ್ ಅಳವಡಿಸಲು ಚಿಂತನೆ ನಡೆಸುತ್ತಿದೆ. ಇದು ಹೆಚ್ಚು ಶಕ್ತಿಶಾಲಿಯಲ್ಲವೆಂದು ಹಿಂದೆಸರಿಯುವ ಗ್ರಾಹಕರನ್ನು ಸೆಳೆಯಲು ಕಂಪನಿ 800ಸಿಸಿ ಅಥವಾ 900ಸಿಸಿ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ಇದು ಸುಮಾರು 60 ಅಥವಾ 80 ಹಾರ್ಸ್ ಪವರ್ ನೀಡಲಿದೆ.

ನ್ಯಾನೊ ಹೆಚ್ಚು ಶಕ್ತಿಶಾಲಿಯಾಗಿ ಬಂದರೆ ಹ್ಯಾಚ್ ಬ್ಯಾಕ್ ಮಾರುಕಟ್ಟೆಯಲ್ಲಿ ಪ್ರಮುಖ ಕಾರಾಗುವ ನಿರೀಕ್ಷೆಯಿದೆ. ನ್ಯಾನೊ ಎಂಜಿನ್ ಸದ್ದನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ. ಇದೇನಪ್ಪ ಆಟೋ ರಿಕ್ಷಾದಂತೆ ಸದ್ದು ಮಾಡುತ್ತದೆ ಎನ್ನುವರಿದ್ದಾರೆ. ಸಿಸಿ ಜಾಸ್ತಿಯಾಗಿ ಬೇರೆ ಎಂಜಿನ್ ಬಂದರೆ ಈ ಸಮಸ್ಯೆಯೂ ಕೊನೆಗೊಳ್ಳಬಹುದು.

ಈಗಾಗಲೇ ಟಾಟಾ ನ್ಯಾನೊ ಅತ್ಯಧಿಕ ಮೈಲೇಜ್ ಕಾರಾಗಿ ಜನಪ್ರಿಯವಾಗಿದೆ. ಈಗಾಗಲೇ ಇದು 25 ಕಿ.ಮೀ. ಆಸುಪಾಸಿನಲ್ಲಿ ಮೈಲೇಜ್ ನೀಡುತ್ತದೆ. ಹೆಚ್ಚು ಶಕ್ತಿಶಾಲಿ ಎಂಜಿನ್ ಅಳವಡಿಸಿದ ನಂತರ ಸುಮಾರು 20 ಕಿ.ಮೀ. ಆಸುಪಾಸಿನಲ್ಲಿ ನ್ಯಾನೊ ಮೈಲೇಜ್ ನೀಡುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 1, 2012, 13:23 [IST]
English summary
Tata Motors is now reportedly trying to add a more powerful engine to the Nano. This move is to attract the younger crowd who did not prefer the Nano for its lack of power. The carmaker is planning to use a three cylinder 800cc or 900cc engine that can generate anywhere between 60bhp and 80bhp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+