ಇದೀಗ ಮಿನಿ ಮೇಳ; ನಿರೀಕ್ಷಿಸಿ ಟಾಟಾ ಮಿನಿ ಆರಿಯಾ, ಮಿನಿ ಸುಮೋ

ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಸದ್ಯದಲ್ಲೇ ಪರಿಷ್ಕೃತ ಎಂಪಿವಿ ಆರಿಯಾ ಹಾಗೂ ಮಿನಿ ಸುಮೋ ಮಾದರಿಯನ್ನು ದೇಶದ ರಸ್ತೆಗಿಳಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಮಾರುತಿ ತನ್ನ ಮಿನಿ ಆರಿಯಾ ಹಾಗೂ ಮಿನಿ ಸುಮೋ ತಯಾರಿಯಲ್ಲಿ ತೊಡಗಿದೆ. ಈ ಎರಡೂ ಮಾದರಿಗಳು ಚಿಕ್ಕದಾದ ಸ್ವರೂಪದೊಂದಿಗೆ ಮತ್ತಷ್ಟು ಅಗ್ಗದ ದರದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಅಂದ ಹಾಗೆ ದೇಶದ ಮಾರುಕಟ್ಟೆಯಲ್ಲಿ ಚಿಕ್ಕ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟಾಟಾದ ಈ ಹೊಸ ಆವೃತ್ತಿ ಸದ್ದು ಮಾಡುವ ನಿರೀಕ್ಷೆಯಿದೆ.

ನಿಮ್ಮ ಮಾಹಿತಿಗಾಗಿ ಟಾಟಾದ ಈ ಮಿನಿ ಆರಿಯಾ ನಾಲ್ಕು ಮೀಟರ್ ಉದ್ದಳತೆಯೊಂದಿಗೆ ಆಗಮನವಾಗಲಿದೆ. ಯಾಕೆಂದರೆ ನಾಲ್ಕು ಮೀಟರ್‌ಗಿಂತಲೂ ಹೆಚ್ಚು ಉದ್ದವಿದ್ದಲ್ಲಿ ಅದನ್ನು ಹೆವಿ ವೆಹಿಕಲ್ ಎಂದು ಮುದ್ರಿಸಲಾಗುತ್ತಿದ್ದು, ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಕಾರಿನ ದರವು ದುಪ್ಪಾಟ್ಟಗಲಿದೆ.

ಟಾಟಾ ಮಿನಿ ಸುಮೋ

ಟಾಟಾ ಮಿನಿ ಸುಮೋ

ಮತ್ತಷ್ಟು ಕುತೂಹಲಕಾರಿ ಸಂಗತಿ ಕೆಲವು ವರ್ಷಗಳ ಹಿಂದೆ ದೇಶದ ರಸ್ತೆಯಲ್ಲಿ ಭಾರಿ ಸದ್ದು ಮಾಡಿದ್ದ ಸುಮೋದ ಪರಿಷ್ಕೃತ ಆವೃತ್ತಿ ಮಿನಿ ಸುಮೋ ಕೂಡಾ ಆಗಮನವಾಗಲಿದೆ. ದೇಶದ ತಾಂತ್ರಿಕ ಘಟಕ ಹಾಗೂ ಟಾಟಾ ಯುರೋಪ್ ಜಂಟಿಯಾಗಿ ಮಿನಿ ಸುಮೋದ ಡಿಸೈನ್‌ಗೆ ರೂಪುರೇಷೆ ನೀಡುತ್ತಿದೆ.

ಟಾಟಾ ಮಿನಿ ಸುಮೋ

ಟಾಟಾ ಮಿನಿ ಸುಮೋ

ಮಿನಿ ಆರಿಯಾ ಹಾಗೂ ಮಿನಿ ಸುಮೋ ಮೂಲಕ ಟಾಟಾ ಮೋಟಾರ್ಸ್ ಮಾರಾಟ ಪ್ರಗತಿಯನ್ನು ನಿರೀಕ್ಷಿಸುತ್ತಿದೆ. ಇತ್ತೀಚೆಗಷ್ಟೇ ಪ್ರತಿಸ್ಪರ್ಧಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಮಿನಿ ಕ್ಸೈಲೋ ಪ್ರಸ್ತುತಪಡಿಸಿತ್ತಲ್ಲದೆ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೀಗ ಇದೇ ತಂತ್ರಗಾರಿಕೆಯನ್ನು ಅನುಸರಿಸಿರುವ ಟಾಟಾ ಕೂಡಾ ಪ್ರತಿತಂತ್ರ ಹಣೆಯುತ್ತಿದೆ.

ಟಾಟಾ ಮಿನಿ ಸುಮೋ

ಟಾಟಾ ಮಿನಿ ಸುಮೋ

ಅಂದ ಹಾಗೆ ದೇಶದ ಮಾರುಕಟ್ಟೆಯಲ್ಲಿ ಚಿಕ್ಕ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟಾಟಾದ ಈ ಹೊಸ ಆವೃತ್ತಿ ಸದ್ದು ಮಾಡುವ ನಿರೀಕ್ಷೆಯಿದೆ

ಟಾಟಾ ಮಿನಿ ಆರಿಯಾ

ಟಾಟಾ ಮಿನಿ ಆರಿಯಾ

ಈ ಹಿಂದೆ ರಸ್ತೆಗಿಳಿದಿದ್ದ ಟಾಟಾ ಎಂಪಿವಿ ಆರಿಯಾ ಕಾರು ದುಬಾರಿಯಾಗಿದ್ದರಿಂದ ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲು ಸಾಧ್ಯವಾಗಲಿಲ್ಲ. ಇವೆಲ್ಲವನ್ನು ಗಮನದಲ್ಲಿಸಿಕೊಂಡು ಮಿನಿ ಆರಿಯಾ ಯೋಜನೆಯೊಂದಿಗೆ ಆಗಮಿಸಿರುವ ಟಾಟಾ ಹೆಚ್ಚು ನಿರೀಕ್ಷೆಯನ್ನು ಹೊಂದಿದೆ.

ಟಾಟಾ ಮಿನಿ ಆರಿಯಾ

ಟಾಟಾ ಮಿನಿ ಆರಿಯಾ

ಆರಿಯಾದಲ್ಲಿ 2.2 ಲೀಟರ್ ಇಂಧನ ಕ್ಷಮತೆ ಎಂಜಿನ್ ಪ್ರಯೋಗಿಸಲಾಗಿತ್ತು. ಆದರೆ ನೂತನ ಆರಿಯಾದಲ್ಲಿ 1.5 ಲೀಟರ್‌ಗಿಂತಲೂ ಕಡಿಮೆ ದಕ್ಷತೆಯ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇದರಿಂದ ಬೆಲೆಯಲ್ಲಿ ಕುಸಿತ ಕಂಡುಬರುವುದಲ್ಲದೆ ಮೈಲೇಜ್ ಕೂಡಾ ಉತ್ತಮವಾಗಿ ಸಿಗಲಿದೆ.

More from DriveSpark

Article Published On: Saturday, November 10, 2012, 6:02 [IST]
English summary
India's largest vehicle maker Tata Motors is planning to increas its vehicle range. Now Tata Motors is working on New mini Aria and Mini Sumo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+