ಡೀಸೆಲ್, ಎಲೆಕ್ಟ್ರಿಕ್ ಟಾಟಾ ನ್ಯಾನೊ ಬರುತ್ತಂತೆ...

ನ್ಯಾನೊ ಕಾರಿನ ಕುರಿತು ಅತ್ಯಧಿಕ ಮಹತ್ವಾಕಾಂಕ್ಷೆ ಹೊಂದಿದ್ದು, ಡೀಸೆಲ್ ಮತ್ತು ಎಲೆಕ್ಟ್ರಿಕ್ ಸೇರಿದಂತೆ ಹಲವು ಆವೃತ್ತಿಗಳನ್ನು ಹೊರತರಲು ಯೋಜಿಸಿರುವುದಾಗಿ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.

ಇದರೊಂದಿಗೆ ನ್ಯಾನೊ ಕಾರಿನ ಶಕ್ತಿಯನ್ನೂ ಹೆಚ್ಚಿಸುವುದಾಗಿ ಅವರು ಹೇಳಿದ್ದಾರೆ. ಸದ್ಯ ಇರುವ 624 ಸಿಸಿ ಪೆಟ್ರೋಲ್ ಎಂಜಿನಿಗೆ ಬದಲಾಗಿ ಹೆಚ್ಚು ಸಿಸಿಯ ಎಂಜಿನ್ ಪರಿಚಯಿಸಲು ಕೂಡ ಕಂಪನಿ ಯೋಜಿಸಿದೆ.

"ಪುಟ್ಟ ನ್ಯಾನೊ ಕಾರಿನ ಮೇಲೆ ನಮಗೆ ಬೆಟ್ಟದಷ್ಟು ನಂಬಿಕೆಯಿದೆ. ಒಂದು ದಿನ ಅತ್ಯಧಿಕ ಸಿಸಿ ಎಂಜಿನ್ ನೊಂದಿಗೆ ನ್ಯಾನೊ ಕಾರು ನಿಮ್ಮ ಮುಂದಿರಲಿದೆ. ಇಷ್ಟೇ ಅಲ್ಲ, ನ್ಯಾನೊ ಕಾರು ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕಲಿದೆ" ಎಂದು ಜಿನಿವಾ ವಾಹನ ಪ್ರದರ್ಶನದಲ್ಲಿ ರತನ್ ಟಾಟಾ ಹೇಳಿದ್ದಾರೆ.

ಕಂಪನಿಯ ನೂತನ ನ್ಯಾನೊ ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳು ಯಾವಾಗ ಬರುತ್ತದೆ ಎನ್ನುವ ಕುರಿತು ರತನ್ ಟಾಟಾ ಯಾವುದೇ ಮಾಹಿತಿ ನೀಡಿಲ್ಲ.

ಈಗ ನ್ಯಾನೊ ಕಾರು ತಿಂಗಳಿಗೆ ಸುಮಾರು 9 ಸಾವಿರ ಯುನಿಟ್ ನಷ್ಟು ಮಾರಾಟವಾಗುತ್ತಿದೆ. ಟಾಟಾ ನ್ಯಾನೊ 2009ರಲ್ಲಿ ರಸ್ತೆಗಿಳಿದಿತ್ತು. ಆದರೆ ಬೆಂಕಿ ಆಕಸ್ಮಿಕ ಇತ್ಯಾದಿ ಕಾರಣಗಳಿಂದ ನ್ಯಾನೊ ಜನಪ್ರಿಯವಾಗಿರಲಿಲ್ಲ. ಆದರೆ ಇತ್ತೀಚೆಗೆ ರಸ್ತೆಗಿಳಿದ 2012ರ ನೂತನ ನ್ಯಾನೊ ಕುರಿತು ಹೆಚ್ಚು ಜನರು ಮೆಚ್ಚುಗೆಯ ಮಾತನಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Wednesday, March 7, 2012, 15:27 [IST]
English summary
Tata Nano car which will be available in more variants, including diesel and electric versions, Company head Ratan Tata told at Geneva Motor show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+