ಸಂಕುಚಿತ ಗಾಳಿಯಿಂದ ಚಲಿಸಿದ ಟಾಟಾ ಕಾರು
ಎರಡು ಕಾರುಗಳಿಗೆ ಸಂಕುಚಿತ ಗಾಳಿ ಶಕ್ತಿಯ ಎಂಜಿನ್ ಅಳವಡಿಸಿ ಪ್ರಾರಂಭಿಕ ಟೆಸ್ಟ್ ಮುಗಿಸಿರುವುದಾಗಿ ದೇಶದ ವಾಹನ ಕಂಪನಿ ಟಾಟಾ ಮೋಟರ್ಸ್ ತಿಳಿಸಿದೆ.
ಸಂಕುಚಿತ ಮಾರುತ ತಂತ್ರಜ್ಞಾನದ ಕುರಿತಾದ ಒಪ್ಪಂದವೊಂದಕ್ಕೆ ಟಾಟಾ ಮೋಟರ್ಸ್ ಮತ್ತು ಎಂಡಿಐ ಕಂಪನಿ 2007ರಲ್ಲಿ ಸಹಿ ಹಾಕಿದ್ದವು. ಎಂಡಿಐ ತಂತ್ರಜ್ಞಾನದ ಕಾರುಗಳನ್ನು ದೇಶದಲ್ಲಿ ಪರಿಚಯಿಸಲು ಅನುಮತಿ ನೀಡುವ ಒಪ್ಪಂದ ಇದಾಗಿದೆ.
ಈ ಒಪ್ಪಂದವು ಎರಡು ಹಂತಗಳನ್ನು ಹೊಂದಿದೆ. ಇದರ ಮೊದಲ ಭಾಗದ ಪ್ರಕಾರ ಕಂಪನಿಯು ತಂತ್ರಜ್ಞಾನವನ್ನು ಎರಡು ಕಾರುಗಳಿಗೆ ಅಳವಡಿಸಿ ಪರೀಕ್ಷಿಸಿದೆ. ಯಾವುದಾದರೂ ನಿರ್ದಿಷ್ಟ ಕಾರಿಗೆ ಸಂಕುಚಿತ ವಾಯು ತಂತ್ರಜ್ಞಾನದ ಎಂಜಿನ್ ಗಳನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಎರಡನೇ ಭಾಗವಾಗಿದೆ.
"ಗಾಳಿ ಎಂಜಿನ್ ತಂತ್ರಜ್ಞಾನದ ಪ್ರೋಗ್ರಾಂ ಪ್ರೂಫ್ ಕೆಲಸ ಮುಗಿದಿದೆ. ಕಂಪನಿಯು ಎರಡು ಕಾರುಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಿ ಯಶಸ್ವಿಯಾಗಿದೆ" ಎಂದು ಟಾಟಾ ಮೋಟರ್ಸ್ ಕಂಪನಿಯು ಪತ್ರಿಕಾ ಪ್ರಕಟಣೆಯೊಂದರಲ್ಲಿ ಪ್ರಕಟಿಸಿದೆ.
ಒಪ್ಪಂದದ ಎರಡನೇ ಹಂತದ ಭಾಗವಾಗಿ ಕಂಪನಿಗಳೆರಡೂ ಜೊತೆಯಾಗಿ ಈ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಲಿದೆ. ಒಟ್ಟಾರೆ ಮಾರುತ ಚಾಲಿತ ವಾಹನವನ್ನು ಮುಂಬರುವ ವರ್ಷಗಳಲ್ಲಿ ಜಗತ್ತಿನ ಮುಂದಿಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ಟಾಟಾ ಮೋಟರ್ಸ್ ವಿವರಿಸಿದೆ.


Click it and Unblock the Notifications









